ಟೊಲುಕಾ (ಮೆಕ್ಸಿಕೊ): ಐದು ವಿಶ್ವಕಪ್‌ಗಳಲ್ಲಿ ಆಡಿದ ಮೊದಲ ಫುಟ್‌ಬಾಲ್ ಆಟಗಾರ ಮೆಕ್ಸಿಕನ್ ಕಾಲ್ಚೆಂಡಿನ ದಂತಕಥೆ ಆಂಟೋನಿಯೊ ಕಾರ್ಬಜಾಲ್ ಅವರು 93 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಮೆಕ್ಸಿಕನ್ ಫುಟ್‌ಬಾಲ್ ಫೆಡರೇಶನ್ ಬುಧವಾರ ತಿಳಿಸಿದೆ.
1950 ಮತ್ತು 1966 ರ ನಡುವೆ ಫಿಫಾ ವಿಶ್ವಕಪ್‌ನ ಐದು ಆವೃತ್ತಿಗಳಲ್ಲಿ ಮಾಜಿ ಮೆಕ್ಸಿಕನ್ ಗೋಲ್‌ಕೀಪರ್ ಆಗಿ ಆಡಿದ ನಂತರ, ಕಾರ್ಬಜಾಲ್ ಅನ್ನು ಎಲ್ ಸಿಂಕೋ ಕೋಪಾಸ್ (ಐದು ಕಪ್‌ಗಳು) ಎಂದು ಅಡ್ಡಹೆಸರಿಡಲಾಯಿತು. ಅವರು 32 ವರ್ಷಗಳ ಕಾಲ ಏಕಾಂಗಿಯಾಗಿ ದಾಖಲೆಯನ್ನು ಹೊಂದಿದ್ದರು. ನಂತರ ಜರ್ಮನಿಯ ಲೋಥರ್ ಮಥಾಸ್ ಅವರಿಂದ ಈ ದಾಖಲೆ ಸರಿಗಟ್ಟಲ್ಪಟ್ಟಿತು.
"ಐದು ಫಿಫಾ ವಿಶ್ವಕಪ್‌ಗಳಲ್ಲಿ ಆಡಿದ ಮೊದಲ ಆಟಗಾರ ಆಂಟೋನಿಯೊ ಕಾರ್ಬಜಾಲ್ ಅವರ ನಿಧನದ ಬಗ್ಗೆ ನಾವು ಬಹಳ ದುಃಖವಿದೆ. ಅವರ ಕುಟುಂಬಕ್ಕೆ ಮತ್ತು ಅವರ ಅಗಲಿಕೆಯಿಂದ ದುಃಖಿತರಾಗಿರುವ ಎಲ್ಲಾ ಮೆಕ್ಸಿಕನ್ ಅಭಿಮಾನಿಗಳಿಗೆ ನಾನು ನಮ್ಮ ಅತ್ಯಂತ ಪ್ರಾಮಾಣಿಕ ಸಂತಾಪವನ್ನು ಸೂಚಿಸುತ್ತೇನೆ" ಎಂದು ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಕಾರ್ಬಜಾಲ್ 1950 ರ ಫಿಫಾ ವರ್ಲ್ಡ್ ಕಪ್ ಬ್ರೆಜಿಲ್‌ನ ಆರಂಭಿಕ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. ಅವರು 1950 ಮತ್ತು 1966 ರ ನಡುವೆ 48 ಕ್ಯಾಪ್‌ಗಳನ್ನು ಗಳಿಸಿದರು. ಇದರಲ್ಲಿ 11 ಫಿಫಾ ವಿಶ್ವಕಪ್ ಪಂದ್ಯಗಳು ಸೇರಿವೆ. ಕ್ಲಬ್ನ 18 ವರ್ಷಗಳ ವೃತ್ತಿ ಜೀವನದಲ್ಲಿ ಮೆಕ್ಸಿಕನ್ ತಂಡದ ಕ್ಲಬ್ ಲಿಯಾನ್‌ಗೆ 1948 ಮತ್ತು 1966 ರ ನಡುವೆ ಬಹುಪಾಲು ಆಡಿದ್ದಾರೆ. ಅಲ್ಲಿ ಅವರು 16 ವರ್ಷಗಳಲ್ಲಿ 364 ಪಂದ್ಯಗಳಲ್ಲಿ ಭಾಗವಹಿಸಿದ್ದರು.
"ಡಾನ್ ಆಂಟೋನಿಯೊ ದಂತಕಥೆ ಎಂದಿಗೂ ಸಾಯುವುದಿಲ್ಲ. ನಾವು ಯಾವಾಗಲೂ ಅವರ ಆಟವನ್ನು ನೆನೆಯುತ್ತೇವೆ ಮತ್ತು ಅನುಸರಿಸುತ್ತೇವೆ. ನಮ್ಮ ತಂಡದಲ್ಲಿ ಅವರು ಆಡಿರುವುದು ನಮಗೆ ಗೌರವ" ಎಂದ ಲಿಯಾನ್ ಕ್ಲಬ್ ಹೇಳಿದರು.
ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಸೆಮಿಫೈನಲ್ ತಲುಪಿದ ದೀಪಕ್, ಹುಸಾಮುದ್ದೀನ್, ನಿಶಾಂತ್