ತಾಷ್ಕೆಂಟ್ (ಉಜ್ಬೇಕಿಸ್ತಾನ್): ನಡೆಯುತ್ತಿರುವ ಐಬಿಎ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ದೀಪಕ್ ಭೋರಿಯಾ (51 ಕೆಜಿ) ಮತ್ತು ನಿಶಾಂತ್ ದೇವ್ (71 ಕೆಜಿ) ತಮ್ಮ ಅಮೋಘ ಫಾರ್ಮ್‌ಗಳನ್ನು ಮುಂದುವರೆಸಿದ್ದಾರೆ. ಅವರು ಇಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಜಿಯಾಮಾವೊ ಜಾಂಗ್ ವಿರುದ್ಧ ಆಡಿದ ದೀಪಕ್ ಆರಂಭದಿಂದಲೇ ಪಂದ್ಯವನ್ನು ನಿಯಂತ್ರಿಸಿದರು ಮತ್ತು 5-0 ರಿಂದ ಗೆದ್ದರು.
ದೀಪಕ್ ಮೊದಲ ಸುತ್ತಿನ ವೇಳೆಗೆ ಎದುರಾಳಿಯ ಬಲಹೀನತೆಯ ಬಗ್ಗೆ ತಿಳಿದುಕೊಂಡಿದ್ದರಿಂದ ಸರಿಯಾದ ಚಲನೆ ಮತ್ತು ನಿಖರವಾದ ಪಂಚ್‌ಗಳನ್ನು ಮಾಡಿದರು. ಅವರು ಎರಡನೇ ಸುತ್ತಿನ ಪ್ರಾರಂಭದಲ್ಲಿ ರಕ್ಷಣಾತ್ಮಕ ಕ್ರಮಕ್ಕೆ ಹೋದರು ಮತ್ತು ಅವರ ಎದುರಾಳಿಯ ಮೇಲೆ ಕೆಲವು ಭಾರವಾದ ಎಡ ಹುಕ್ಗಳನ್ನು ತಮ್ಮ ಪ್ರತಿ ದಾಳಿಯಾಗಿ ಬಳಸಿದರು. ಮೂರನೇ ಸುತ್ತಿನಲ್ಲಿ, ಝಾಂಗ್ ಆಕ್ರಮಣಕಾರಿಯಾಗಿ ಹೊಡೆತಗಳಿಗೆ ಮುಂದಾದಾಗ ಪಾದಗಳ ಚಲನೆಯ ಮೂಲಕ ತಮ್ಮ ಎದುರಾಳಿಯನ್ನು ಸುಲಭವಾಗಿ ನಿಯಂತ್ರಿಸಿ ಗೆದ್ದುಕೊಂಡರು.
"ಪಂದ್ಯದಲ್ಲಿ ನನ್ನ ಬಲಶಾಲಿ ಅಸ್ತ್ರವನ್ನು ಬಳಸುವುದು ನನ್ನ ತಂತ್ರವಾಗಿತ್ತು, ಅದು ನನ್ನ ಎಡ ಹುಕ್ ಮತ್ತು ಪಂದ್ಯದಲ್ಲಿ ಎಲ್ಲವೂ ನಮ್ಮ ಯೋಜನೆಗೆ ಅನುಗುಣವಾಗಿ ನಡೆಯಿತು. ನಾನು ಪಂದ್ಯದ ಆರಂಭದಲ್ಲಿ ವೇಗವನ್ನು ಪಡೆಯಲು ಮತ್ತು ಕೆಲವು ನಿಖರವಾದ ಪಂಚ್‌ಗಳನ್ನು ಹೊಡೆಯುವ ಮೊದಲು ನನ್ನ ಎದುರಾಳಿಯನ್ನು ಸೆಳೆಯಲು ಪ್ರಯತ್ನಿಸಿದೆ. ನನ್ನ ಗಮನ ಇದೀಗ ಮುಂದಿನ ಪಂದ್ಯದಲ್ಲಿದೆ. ಭಾರತಕ್ಕಾಗಿ ಪದಕ ಗೆಲ್ಲಲು 100 ಪ್ರತಿಶತವನ್ನು ನೀಡುತ್ತೇನೆ", ಎಂದು ವಿಜಯದ ನಂತರ ದೀಪಕ್ ಹೇಳಿದರು.
ಅವರು ಈಗ ತಮ್ಮ ಮುಂದಿನ ಪಂದ್ಯವನ್ನು ಕಿರ್ಗಿಸ್ತಾನ್‌ನ ದಿಯುಶೆಬಾವ್ ನೂರ್ಜಿಗಿಟ್ ವಿರುದ್ಧ ಆಡಲಿದ್ದಾರೆ ಮತ್ತು ಭಾರತಕ್ಕೆ ಪದಕವನ್ನು ಖಚಿತಪಡಿಸಲು ನೋಡುತ್ತಾರೆ.
ಇದನ್ನೂ ಓದಿ: ಪಾಕ್ ಪ್ರವಾಸ ಒಲ್ಲೆ ಎಂದ ಭಾರತಕ್ಕೆ ಇತರ ರಾಷ್ಟ್ರಗಳ ಬೆಂಬಲ: ಪಾಕಿಸ್ತಾನದ ಕೈ ತಪ್ಪಿದ ಏಷ್ಯಾಕಪ್ಗೆ ಲಂಕಾ ಆಥಿತ್ಯ ?
ಮತ್ತೊಂದೆಡೆ, ನಿಶಾಂತ್ ದೇವ್ ಮೊದಲ ಸುತ್ತಿನಲ್ಲಿ ಪ್ಯಾಲೆಸ್ತೀನ್‌ನ ನಿಡಾಲ್ ಫೊಕಾಹಾ ವಿರುದ್ಧ ರೆಫರಿ ಸ್ಪರ್ಧೆಯನ್ನು ನಿಲ್ಲಿಸಿದ್ದರಿಂದ (Referee stops the contest- RSC)ಗೆಲುವು ದಾಖಲಿಸಿದರು. ಫೋಕಾಹಾ ತನ್ನ ಎತ್ತರದ ಪ್ರಯೋಜನವನ್ನು ಬಳಸಿಕೊಂಡು ನಿಶಾಂತ್ ದೇವ್ ಅವರ ಮೇಲೆ ನಿರಂತರ ದಾಳಿಯನ್ನು ಮಾಡಿದರು. ಇದಕ್ಕೆ ರೆಫರಿ ಸ್ಪರ್ಧೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಬುಧವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ನಿಶಾಂತ್ ದೇವ್ ಕ್ಯೂಬಾದ ಜಾರ್ಜ್ ಕುಲ್ಲರ್ ಅವರನ್ನು ಎದುರಿಸಲಿದ್ದಾರೆ.
ಇಂದು ನಂತರ ಇಬ್ಬರು ಭಾರತೀಯ ಬಾಕ್ಸರ್‌ಗಳು ಕಣಕ್ಕಿಳಿಯಲಿದ್ದಾರೆ. ಸಚಿನ್ ಸಿವಾಚ್ (54 ಕೆಜಿ) ಅಗ್ರ ಶ್ರೇಯಾಂಕದ ಕಜಕಿಸ್ತಾನದ ಮಖ್ಮುದ್ ಸಬಿರ್ಖಾನ್ ಅವರನ್ನು ಎದುರಿಸಲಿದ್ದರೆ, ಆಕಾಶ್ ಸಾಂಗ್ವಾನ್ (67 ಕೆಜಿ) ಕಜಕಸ್ತಾನದ ದುಲಾತ್ ಬೆಕ್ಬೌವ್ ವಿರುದ್ಧ ಆಡಲಿದ್ದಾರೆ.
ಇದನ್ನೂ ಓದಿ: ಮಾಸ್ಕೋ ವುಶು ಸ್ಟಾರ್ಸ್ ಚಾಂಪಿಯನ್‌ಶಿಪ್: 17 ಪದಕ ಗೆದ್ದ ಯುವತಿಯರಿಗೆ ಪ್ರಧಾನಿ ಶುಭಾಶಯ