ETV Bharat / sports

"ಅಂಗಳದಲ್ಲಿ ಸಾಧಿಸಲು ಏನಿಲ್ಲ": ನಿವೃತ್ತಿ ಹೊಂದಲಿದ್ದಾರಾ ಚಾಂಪಿಯನ್ ಲಿಯೋನೆಲ್​ ಮೆಸ್ಸಿ? - FIFA World Cup in Qatar

ಈ ಶತಮಾನದ ಶ್ರೇಷ್ಠ ಫುಟ್ಬಾಲಿಗ ಮೆಸ್ಸಿ- ಅರ್ಜೆಂಟೀನಾ ತಂಡದ ಲಿಯೋನೆಲ್​ ಮೆಸ್ಸಿ- ಮೆಸ್ಸಿ ನಿವೃತ್ತಿ ಬಗ್ಗೆ ಸೂಚನೆ- ವಿಶ್ವಕಪ್​ ವೇಳೆ ನಿವೃತ್ತಿ ಘೋಷಿಸಿದ್ದ ಚಾಂಪಿಯನ್​- ಫ್ರಾನ್ಸ್​ ಕ್ಲಬ್​ಗೆ ಮರಳಿದ ಚಾಂಪಿಯನ್​ ಆಟಗಾರ

Lionel Messi
ಚಾಂಪಿಯನ್ ಲಿಯೋನೆಲ್​ ಮೆಸ್ಸಿ
author img

By

Published : Feb 2, 2023, 10:31 AM IST

ಪ್ಯಾರಿಸ್: ಈ ಶತಮಾನದ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್​ ಮೆಸ್ಸಿ ಕತಾರ್​ ಫಿಫಾ ವಿಶ್ವಕಪ್ ಎತ್ತಿ ಹಿಡಿದು ದೇಶಕ್ಕೆ ಪ್ರಶಸ್ತಿ ತಂದುಕೊಟ್ಟರು. ಇದು ಅರ್ಜೆಂಟೀನಾ ಗೆದ್ದ 2ನೇ ವಿಶ್ವಕಪ್​ ಆಗಿದೆ. ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರ "ಇನ್ನು ಅಂಗಳದಲ್ಲಿ ಸಾಧಿಸುವಂಥದ್ದೇನೂ ಉಳಿದಿಲ್ಲ" ಎಂದು ಹೇಳುವ ಮೂಲಕ ಮತ್ತೆ ನಿವೃತ್ತಿ ಹೊಂದುವ ಸೂಚನೆ ನೀಡಿದ್ದಾರೆ.

ಕ್ರೀಡಾ ಚಾನಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೆಸ್ಸಿ, ನನ್ನ ವೃತ್ತಿ ಜೀವನದಲ್ಲಿ ಎಲ್ಲವನ್ನೂ ಸಂಪಾದಿಸಿದ್ದೇನೆ. ವೈಯಕ್ತಿಕವಾಗಿಯೂ ಸಾಧಿಸಿದ್ದೇನೆ. ವೃತ್ತಿಯ ಆರಂಭದಲ್ಲಿ ಇಷ್ಟೆಲ್ಲಾ ಸಾಧನೆ ಮಾಡುತ್ತೇನೆ ಎಂದು ಅರಿತಿರಲಿಲ್ಲ. ಈ ಕ್ಷಣ ಇದೆಲ್ಲವನ್ನು ನೆನಪಿಸಿಕೊಂಡರೆ ಸಂತೋಷವಾಗುತ್ತದೆ. ಫುಟ್ಬಾಲ್​ನ ಅತ್ಯುನ್ನತ ಟೂರ್ನಿಗಳಾದ ವಿಶ್ವಕಪ್​, ಕೋಪಾ ಅಮೆರಿಕಾ ಪ್ರಶಸ್ತಿಯನ್ನು ಗೆದ್ದಾಗಿದೆ. ಇನ್ನು ಗೆಲ್ಲುವುದು ಏನೂ ಉಳಿದಿಲ್ಲ ಎಂದು ಹೇಳಿದ್ದಾರೆ.

ಮರಡೋನಾ ಇರಬೇಕಿತ್ತು: ಫುಟ್ಬಾಲ್​ನ ದಂತಕತೆ ಡಿಯಾಗೋ ಮರಡೋನಾ ಅವರು ಇಂದು ಇರಬೇಕಿತ್ತು. ಅರ್ಜೆಂಟೀನಾ ವಿಶ್ವಕಪ್​ ಗೆದ್ದ ಸಂಭ್ರಮವನ್ನು ಅವರೊಂದಿಗೆ ಹಂಚಿಕೊಳ್ಳುವ ಆಸೆ ಹೊಂದಿದ್ದೆ. ಆದರೆ, ದೈವ ಅದಕ್ಕೆ ಅವಕಾಶ ನೀಡಲಿಲ್ಲ. ಅವರ ಕೈಯಿಂದಲೇ ನಾನು ವಿಶ್ವಕಪ್​ ಪಡೆಯಬೇಕೆಂಬ ಮಹದಾಸೆ ಹೊಂದಿದ್ದೆ ಎಂದು ಹೇಳಿಕೊಂಡಿದ್ದಾರೆ.

ಮರಡೋನಾ ಅವರಿಗೂ ಅರ್ಜೆಂಟೀನಾ ತಂಡ ಮತ್ತೆ ವಿಶ್ವ ಚಾಂಪಿಯನ್​ ಆಗಬೇಕು ಎಂಬ ಆಸೆ ಹೊಂದಿದ್ದರು. ಇದು ಅವರಿಗೆ ನಮ್ಮ ತಂಡದ ಮೇಲಿದ್ದ ಉತ್ಕಟ ಪ್ರೀತಿಯನ್ನು ತೋರಿಸುತ್ತದೆ. ಮರಡೋನಾ ನನ್ನನ್ನು ಇಷ್ಟಪಡುತ್ತಿದ್ದರು. ನನ್ನ ಆಟಕ್ಕೆ ಅವರೇ ಸ್ಫೂರ್ತಿ, ಶಕ್ತಿ ಎಂದು ಇದೇ ವೇಳೆ ಹಂಚಿಕೊಡಿದ್ದಾರೆ. ಕಾಲ್ಚೆಂಡಿನ ದಂತಕತೆಯಾದ ಡಿಯಾಗೋ ಮರಡೋನಾ 1986 ರಲ್ಲಿ ಅರ್ಜೆಂಟೀನಾ ತಂಡವನ್ನು ವಿಶ್ವ ಚಾಂಪಿಯನ್​ ಮಾಡಿದ್ದರು. 2010 ರಲ್ಲಿ ಅರ್ಜೆಂಟೀನಾ ತಂಡದ ಕೋಚ್​ ಆಗಿಯೂ ಕೆಲಸ ಮಾಡಿದ್ದ ಮರಡೋನಾ ಅವರು 2020 ರ ಡಿಸೆಂಬರ್​ನಲ್ಲಿ ನಿಧನರಾದರು.

ಕ್ಲಬ್​ಗೆ ಮರಳಿದ ಚಾಂಪಿಯನ್​ ಆಟಗಾರ: ಕತಾರ್​ ವಿಶ್ವಕಪ್​ ಬಳಿಕ ವಿರಾಮ ಪಡೆದಿದ್ದ ಲಿಯೋನೆಲ್​ ಮೆಸ್ಸಿ ಮತ್ತೆ ಸ್ಪರ್ಧಾತ್ಮಕ ಫುಟ್ಬಾಲ್​ಗೆ ಮರಳಿದ್ದಾರೆ. ಫ್ರಾನ್ಸ್‌ನ ಫುಟ್ಬಾಲ್​ ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್ ಸ್ಟಾರ್​ ತಂಡವನ್ನು ಸೇರಿದ್ದಾರೆ. ಕಳೆದ ಋತುವಿನಲ್ಲಿ ಕೈತಪ್ಪಿದ್ದ ಟ್ರೋಫಿಯನ್ನು ಈ ಬಾರಿ ಗೆಲ್ಲಲು ತಂಡ ಸಜ್ಜಾಗಿದೆ. ಚಾಂಪಿಯನ್ಸ್​ ಲೀಗ್​ ಗೆಲ್ಲುವ ತಂಡಗಳಲ್ಲಿ ಮೆಸ್ಸಿ ನೇತೃತ್ವದ ತಂಡವೂ ಒಂದಾಗಿದೆ. ಈ ಲೀಗ್​ನಲ್ಲಿ ಲಿಯೋನೆಲ್​ ಮೆಸ್ಸಿ ಆಟದ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ.

ವಿಶ್ವಕಪ್​ ವೇಳೆ ನಿವೃತ್ತಿ ಘೋಷಿಸಿದ್ದ ಮೆಸ್ಸಿ: ಕತಾರ್​ ವಿಶ್ವಕಪ್​ ವೇಳೆ ಅರ್ಜೆಂಟೀನಾ ಸ್ಟಾರ್​ ಲಿಯೋನೆಲ್​ ಮೆಸ್ಸಿ ಇದೇ ನನ್ನ ಕೊನೆಯ ವಿಶ್ವಕಪ್​ ಫುಟ್ಬಾಲ್​ ಎಂದು ನಿವೃತ್ತಿಯ ಮಾತನಾಡಿದ್ದರು. ತಂಡ ಫ್ರಾನ್ಸ್​ ಸವಾಲನ್ನು ಗೆದ್ದು ವಿಶ್ವಕಪ್​ ವಿಜೇತವಾದ ಬಳಿಕ ನಿರ್ಧಾರ ಬದಲಿಸಿದ ಮೆಸ್ಸಿ ಚಾಂಪಿಯನ್​ ಆಟ ಮುಂದುವರಿಸುವೆ ಎಂದು ಹೇಳಿಕೆ ನೀಡಿದ್ದರು. ಇದೀಗ ಮತ್ತೆ ಸಾಧಿಸುವಂಥದ್ದೇನೂ ಇಲ್ಲ ಎಂದು ಹೇಳಿಕೆ ನೀಡಿದ್ದು, ನಿವೃತ್ತಿ ಹೊಂದಲಿದ್ದಾರಾ ಎಂಬ ಚರ್ಚೆಯನ್ನು ಹರಿಬಿಟ್ಟಿದ್ದಾರೆ.

ಓದಿ: ವಿಶ್ವದಾಖಲೆಗೆ 7 ರೇಟಿಂಗ್ಸ್​ ಹಿಂದಿರುವ ಸೂರ್ಯಕುಮಾರ್​..910 ಅಂಕ ಪಡೆದ ಭಾರತದ ಮೊದಲ ಕ್ರಿಕೆಟಿಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.