ನವದೆಹಲಿ: ಭಾರತದ ಅಗ್ರಮಾನ್ಯ ಚೆಸ್ಟ್ ಆಟಗಾರ ವಿಶ್ವನಾಥನ್ ಆನಂದ್ 1,50,000 ಡಾಲರ್ ಬಹುಮಾನವುಳ್ಳ ಲೆಜೆಂಡ್ಸ್ ಆಫ್ ಚೆಸ್ ಟೂರ್ನಿಯಲ್ಲಿ 7ನೇ ಸೋಲು ಕಂಡಿದ್ದಾರೆ.
ಟೂರ್ನಿಯಲ್ಲಿ ಸತತ ಆರು ಸೋಲು ಕಂಡಿದ್ದ ವಿಶ್ವನಾಥನ್ ಆನಂದ್ ಸೋಮವಾರ ಇಸ್ರೇಲ್ನ ಬೋರಿಸ್ ಗೆಲ್ಫಾಂಡ್ ವಿರುದ್ಧ 2.5-0.5 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ ಸೋಲಿನ ಸರಣಪಳಿ ಕಳಚಿದ್ದರು. ಆದರೆ ಇಂದು ಚೀನಾದ ಡಿಂಗ್ ಲಿರೆನ್ ಎದುರು ಸೋಲುವ ಮೂಲಕ ಮತ್ತೆ ನಿರಾಸೆಯನುಭವಿಸಿದ್ದಾರೆ.
ಇಂದು ನಡೆದ 8ನೇ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಚೀನಾದ 3ನೇ ಶ್ರೇಯಾಂಕದ ಡಿಂಗ್ ಲಿರೆನ್ ವಿರುದ್ಧ 0.5-2.5 ಅಂಕಗಳಿದಂ ಸೋಲನುಭವಿಸಿದರು.
22 ನಡೆಗಳಲ್ಲಿ ಮೊದಲ ಗೇಮ್ ಕಳೆದುಕೊಂಡ ಆನಂದ್ ನಂತರ 2ನೇ ಗೇಮ್ನಲ್ಲಿ 47 ನಡೆಗಳ ಬಳಿಕ ಡ್ರಾ ಸಾಧಿಸಿದ್ದರು. ಆದರೆ ಲಿರೆನ್ 3ನೇ ಗೇಮ್ಅನ್ನು 41 ನಡೆಗಳಲ್ಲಿ ಆನಂದ್ ವಿರುದ್ಧ ಗೆಲುವು ಸಾಧಿಸಿದರು. ಈ ಮೂಲಕ ಆಡಿದ 8 ಪಂದ್ಯಗಳಲ್ಲಿ ಒಂದು ಗೆಲವು ಸಾಧಿಸಿದರೆ, 7 ಸೋಲು ಕಂಡಂತಾಗಿದೆ.
ಮ್ಯಾಗ್ನಸ್ ಕಾರ್ಲ್ಸೆನ್ ಟೂರ್ನಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿದ್ದ 50 ವರ್ಷದ ಆನಂದ್ , ಇಯಾನ್ ನೇಪೋಮ್ನಿಯಾಚ್ಚಿ, ಪೀಟರ್ ಲೆಕೊ, ಪೀಟರ್ ಸ್ವಿಡ್ಲರ್, ಮ್ಯಾಗ್ನಸ್ ಕಾರ್ಲ್ಸನ್, ವ್ಲಾಡಿಮಿರ್ ಕ್ರಾಮ್ನಿಕ್ ಹಾಗೂ ಅನೀಸ್ ಗಿರಿ ವಿರುದ್ಧ ಸೋಲುಂಡಿದ್ದರು.
ಈ ಟೂರ್ನಿಯಲ್ಲಿ ಕಾರ್ಲ್ಸನ್ ಡಿಂಗ್ ಲಿರೆನ್, ನೇಪೋಮ್ನಿಯಾಚ್ಚಿ ಹಾಗೂ ಗಿರಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.