ಸುಮಾರು ಒಂದು ತಿಂಗಳ ಕಾಲ ಅರಬ್ಬರ ನಾಡಿನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಹಬ್ಬಕ್ಕೆ ಭಾನುವಾರ ಅದ್ಧೂರಿ ತೆರೆಬಿದ್ದಿದೆ. ರೋಚಕ ಹಣಾಹಣಿಯಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫಿಫಾ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 1986ರಲ್ಲಿ ಡಿಯಾಗೋ ಮರಡೋನ ಅವರ ಸಾಧನೆಯನ್ನು ಕತಾರ್ನಲ್ಲಿ ಮೆಸ್ಸಿ ತಂಡ ಮರುಕಳಿಸುವಂತೆ ಮಾಡಿದೆ.
ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರು ವಿಶೇಷ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಗಾಗಿ ಫೈನಲ್ ಪಂದ್ಯದ ಮುಕ್ತಾಯದವರೆಗೂ ಕೂಡ ಭಾರಿ ಪೈಪೋಟಿ ಇತ್ತು. ಪ್ರತಿಯೊಂದು ವಿಭಾಗದಲ್ಲಿ ನೀಡಲಾಗುವ ಗೌರವಕ್ಕೂ ತಲಾ ನಾಲ್ಕು ಮಂದಿ ಆಟಗಾರರು ರೇಸ್ನಲ್ಲಿದ್ದರು.

ಫಿಫಾ ವರ್ಲ್ಡ್ ಕಪ್ 2022ರ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ:
- ಗೋಲ್ಡನ್ ಬೂಟ್ - ಕೈಲಿಯನ್ ಎಂಬಪ್ಪೆ, 8 ಗೋಲು (ಟಾಪ್ ಸ್ಕೋರರ್)
- ಗೋಲ್ಡನ್ ಬಾಲ್ - 7 ಗೋಲುಗಳು ಮತ್ತು 3 ಅಸಿಸ್ಟ್, ಲಿಯೋನೆಲ್ ಮೆಸ್ಸಿ (ಅತ್ಯುತ್ತಮ ಆಟಗಾರ)
- ಗೋಲ್ಡನ್ ಶೂ - ಅರ್ಜೆಂಟೀನಾಗೆ 2 ಪೆನಾಲ್ಟಿ ಶೂಟ್-ಔಟ್ ಗೆಲುವು ತಂದಿತ್ತ್ ಎಮಿ ಮಾರ್ಟಿನೆಜ್ (ಅತ್ಯುತ್ತಮ ಗೋಲ್ ಕೀಪರ್)
- ಯುವ ಆಟಗಾರ ಪ್ರಶಸ್ತಿ - ಅರ್ಜೆಂಟೀನಾದ ಎಂಜೊ ಫೆರ್ನಾಂಡಿಸ್
ಮೆಸ್ಸಿ ಎರಡು ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ 2014ರಲ್ಲಿ ಅರ್ಜೆಂಟೀನಾ ಫೈನಲ್‌ನಲ್ಲಿ ಜರ್ಮನಿ ವಿರುದ್ಧ ಸೋತಾಗಲೂ ಮೆಸ್ಸಿಗೆ ಪ್ರಶಸ್ತಿ ಲಭಿಸಿತ್ತು. ಅರ್ಜೆಂಟೀನಾ ವಿಶ್ವಕಪ್ ಟ್ರೋಫಿ ಗೆದ್ದಿರುವುದು ಮಾತ್ರವಲ್ಲದೆ, ತಂಡದ ಮೂವರು ತಾರೆಯರು ಪ್ರಮುಖ ಗೌರವಗಳನ್ನು ಪಡೆದರು.
ಫಿಫಾ ವಿಶ್ವಕಪ್ನಲ್ಲಿ ಅತಿಹೆಚ್ಸು ಗೋಲು ಬಾರಿಸಿದವರು:
- ಕೈಲಿಯನ್ ಎಂಬಪ್ಪೆ (ಫ್ರಾನ್ಸ್) - 8
- ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) - 7
- ಜೂಲಿಯನ್ ಅಲ್ವಾರೆಜ್ (ಅರ್ಜೆಂಟೀನಾ) - 4
- ಒಲಿವಿಯರ್ ಗಿರೌಡ್ - 4
- ಅಲ್ವಾರೊ ಮೊರಾಟಾ (ಸ್ಪೇನ್) - 3
- ಬುಕಾಯೊ ಸಾಕಾ (ಇಂಗ್ಲೆಂಡ್) - 3
- ಕೋಡಿ ಗಕ್ಪೋ (ನೆದರ್ಲ್ಯಾಂಡ್ಸ್) - 3
ಇದನ್ನೂ ಓದಿ: ಚಾಂಪಿಯನ್ ಆಟ ಮುಂದುವರೆಸುತ್ತೇನೆ, ನಿವೃತ್ತಿ ಪಡೆಯುವುದಿಲ್ಲ : ಲಿಯೊನೆಲ್ ಮೆಸ್ಸಿ