ETV Bharat / sports

ವಿಶ್ವ ಚಾಂಪಿಯನ್​​ಷಿಪ್​ನಲ್ಲಿ ಮಿಂಚಿದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ..

ಇತ್ತೀಚೆಗೆ ನಡೆದ ವಿಶ್ವ ಕುಸ್ತಿ ಚಾಂಪಿಯನ್​​ಷಿಪ್​​​ನಲ್ಲಿ ಉತ್ತಮ ಪ್ರದರ್ಶನ ತೋರಿದ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವ ಕಿರೆನ್​ ರಿಜಿಜು ನಗದು ಪುರಸ್ಕಾರ ಘೋಷಣೆ ಮಾಡಿದಾರೆ.

ವಿಶ್ವ ಕುಸ್ತಿ ಚಾಂಪಿಯನ್​​ಷಿಪ್
author img

By

Published : Sep 24, 2019, 4:35 PM IST

ನವದೆಹಲಿ:ಇತ್ತೀಚೆಗೆ ನಡೆದ ವಿಶ್ವ ಕುಸ್ತಿ ಚಾಂಪಿಯನ್​​ಷಿಪ್​ನಲ್ಲಿ ಉತ್ತಮ ಪ್ರದರ್ಶನ ತೋರಿದ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವ ಕಿರೆನ್​ ರಿಜಿಜು ನಗದು ಪುರಸ್ಕಾರ ಘೋಷಿಸಿದ್ದಾರೆ.

ಕುಸ್ತಿಯಲ್ಲಿ ಬೆಳ್ಳಿ ಪದಕ ಜಯಿಸಿದ ದೀಪಕ್​ ಪುನಿಯಾಗೆ 7 ಲಕ್ಷ, ಕಂಚಿನ ಪದಕ ವಿಜೇತ ಇತರ ಕ್ರೀಡಾಪಟುಗಳಿಗೆ ತಲಾ 4 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಸಚಿವರು ಘೋಷಿಸಿದ್ದಾರೆ. ವಿಶ್ವ ಕುಸ್ತಿ ಚಾಂಪಿಯನ್​​ಷಿಪ್​ನಲ್ಲಿ ವಿನೇಶ್​ ಪೋಗತ್​, ರವಿ ಕುಮಾರ್​, ಬಜರಂಗ ಪುನಿಯಾ ಹಾಗೂ ರಾಹುಲ್​​ ಅವೇರ್​ ಕಂಚಿನ ಪದಕ ಗೆದ್ದಿದ್ದರು.

ಇದೇ ವೇಳೆ ವಿಶ್ವ ಬಾಕ್ಸಿಂಗ್​ ಚಾಂಪಿಯನ್​​ಷಿಪ್​ನಲ್ಲಿ ಭಾರತದ ಪರ ಮೊದಲ ಬಾಕ್ಸರ್​ ಮೊದಲ ಬೆಳ್ಳಿ ಗೆದ್ದ ಅಮಿತ್​ ಪಂಗಲ್​ಗೆ ಸಚಿವ ರಿಜಿಜು 14ಲಕ್ಷ ರೂ. ನಗದು ನೀಡಿ ಗೌರವಿಸಿದರು. ಅಲ್ಲದೆ ಕಂಚಿನ ಪದಕ ಜಯಿಸಿರುವ ಮನೀಶ್​ ಕೌಶಿಕ್​ಗೆ 8 ಲಕ್ಷ ರೂ. ನಗದು ನೀಡಿದರು.

Intro:Body:

Kiren Rijiju rewards wrestlers for their performance in World Wrestling Championships

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.