ಕನ್ಯಾಕುಮಾರಿ: ಸುಮಾರು ಒಂದೂವರೆ ತಿಂಗಳ ಹಿಂದೆ ಮನೆಯಿಂದ ಚಾರಿಟಿ ಮಿಷನ್ಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿವೆಗೆ ಸೈಕಲ್ ಪಯಣವನ್ನು ಆದಿತ್ಯಾ ಮೆಹ್ತಾ ನೇತೃತ್ವದ ಪ್ಯಾರಾ ಸೈಕ್ಲಿಸ್ಟ್ಗಳ ತಂಡ ಯಶಸ್ವಿಯಾಗಿ ಮುಗಿಸಿದೆ.
ಚಾರಿಟಿ ಕಾರ್ಯಕ್ಕೆ ಹಣ ಸಂಗ್ರಹಿಸುವುದಕ್ಕಾಗಿ ಮತ್ತು ದೇಶದಾದ್ಯಂತ ಪ್ಯಾರಾ ಸ್ಪೋರ್ಟ್ಸ್ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರಯಾಣವನ್ನು ಆರಂಭಿಸಲಾಗಿತ್ತು. ಭಾರತಕ್ಕೆ ಮೊದಲ ಅಂತಾರಾಷ್ಟ್ರೀಯ ಪದಕ ಗೆದ್ದುಕೊಟ್ಟಿರುವ ಪ್ಯಾರಾ ಸೈಕ್ಲಿಸ್ಟ್ ಆದಿತ್ಯ ಮೆಹ್ತಾ ಮತ್ತು ಅವರ ಸಹ ಪ್ಯಾರಾ ಸೈಕ್ಲಿಸ್ಟ್ಗಳು ಒಂದೂವರೆ ತಿಂಗಳ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ತುಳಿಯುವ ಸವಾಲು ಸ್ವೀಕರಿಸಿದ್ದರು. ಇಂದಿಗೆ ಅದು ಯಶಸ್ವಿಯಾಗಿ ಪೂರ್ಣಗೊಂಡಿದೆ.
ಆದಿತ್ಯ ಮಹ್ತಾ ಫೌಂಡೇಶನ್ನ' ಇನ್ಫಿನಿಟಿ ರೈಡ್ ಕೆ2ಕೆ' ಎಂಬ ಈ ದಂಡಯಾತ್ರೆ 45 ದಿನಗಳ ಪಯಣವಾಗಿದ್ದು, ಚಳಿ ಮಳೆಯನ್ನೆಲ್ಲಾ ಸೋಲಿಸಿ ಕಷ್ಟಕರವಾದ ರಸ್ತೆಗಳ ಮೂಲಕ ಕೋವಿಡ್ 19 ಸಾಂಕ್ರಾಮಿಕದ ಸವಾಲಿನ ಸಂದರ್ಭಗಳ ನಡುವೆಯೂ ಈ 30 ಸದಸ್ಯರ ತಂಡ ತಮ್ಮ ಪಯಣವನ್ನು ಮುಗಿಸಿ ಗುರುವಾರ ತಮ್ಮ ಗುರಿಯಾದ ಕನ್ಯಕುಮಾರಿಗೆ ಬಂದು ತಲುಪಿದೆ.
ಇದನ್ನು ಓದಿ: ನಮ್ಮ ಮಗುವನ್ನು ಸಾಮಾಜಿಕ ಜಾಲಾತಾಣದಿಂದ ದೂರವಿಡುತ್ತೇವೆ: ಅನುಷ್ಕಾ ಶರ್ಮಾ
ಈ ತಂಡ ಸುದೀರ್ಘ ಪಯಣದಲ್ಲಿ ದೇಶಾದ್ಯಂತ ಸುಮಾರು 36 ನಗರಗಳಲ್ಲಿ ಸಂಚರಿಸಿದ ನಂತರ ಐತಿಹಾಸಿಕ ವಿವೇಕಾನಂದ ರಾಕ್ ಮೆಮೊರಿಯಲ್ಬಳಿ ತಮ್ಮ ಪ್ರಯಾಣವನ್ನು ಮುಕ್ತಾಯಗೊಳಿಸಿದರು. ಅಲ್ಲಿ ಅವರನ್ನು ರಕ್ಷಣಾ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ಸ್ವಾಗತಿಸಿದರು.
" ನಮ್ಮ ಜಾಗೃತಿ ಪಯಣ ಭಾರತದಲ್ಲಿ ಅತ್ಯುತ್ತಮ ಪ್ಯಾರಾ ಕ್ರೀಡಾ ಪ್ರತಿಭೆಗಳು ನಮ್ಮ ಧ್ಯೇಯಕ್ಕೆ ಸೇರಿಸಲು ಮತ್ತು ಅವರಿಗೆ ಸೂಕ್ತ ಬೆಂಬಲ ನೀಡಲು ಜನರಿಗೆ ಪ್ರೋತ್ಸಾಹಿಸುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ಸುದೀರ್ಘ ಪ್ರಯಾಣದಲ್ಲಿ ಸಾಕಷ್ಟು ಜನರು ನಮ್ಮ ಬಗ್ಗೆ ಸಾಕಷ್ಟು ಪ್ರೀತಿಯನ್ನು ತೋರಿಸಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಸಂತೋಷವಾಗಿದೆ. ಚಾಂಪಿಯನ್‌ಗಳನ್ನು ಬೆಳೆಸುವುದೇ ನನ್ನ ಗುರಿ ಮತ್ತು ಅವರು ಭಾರತಕ್ಕಾಗಿ ಆಡಿ ಹೀರೋಗಳಾಗಬೇಕು " ಎಂದು ಆದಿತ್ಯ ಮೆಹ್ತಾ ಫೌಂಡೇಶನ್ನ ಸಂಸ್ಥಾಪಕ ಆದಿತ್ಯ ಮೆಹ್ತಾ ಹೇಳಿದ್ದಾರೆ.