ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ನಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ ದೊರೆತಿದೆ. ಇಂದು ನಡೆದ ಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಟೀಂ ಇಂಡಿಯಾಗೆ ಬಂಗಾರದ ಪದಕ ಒಲಿದಿದೆ. ಫೈನಲ್ ಪ್ರವೇಶಿಸಿದ್ದ ಇನ್ನೊಂದು ತಂಡ ಅಫ್ಘಾನಿಸ್ತಾನಕ್ಕೆ ಬೆಳ್ಳಿ ದೊರೆತಿದೆ.
ಇಲ್ಲಿನ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚಿನ್ನ ಗೆಲ್ಲುವ ಫೇವರೆಟ್ ತಂಡವಾಗಿ ಕಣಕ್ಕಿಳಿದ ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಋತುರಾಜ್ ಗಾಯಕ್ವಾಡ್ರ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲರ್ಗಳು ಅಫ್ಘನ್ ಬ್ಯಾಟಿಂಗ್ ಪಡೆಯ ಮೇಲೆ ದಂಡೆತ್ತಿ ಹೋದರು.
-
India bag GOLD after match gets abandoned due to rain 🏏
— SAI Media (@Media_SAI) October 7, 2023 " class="align-text-top noRightClick twitterSection" data="
The #MenInBlue triumph against 🇦🇫 as higher ranked opponents to clinch the #Gold🥇
Three cheers for team 🇮🇳🥳
Well done guys! #AsianGames2022#Cheer4India#HallaBol#JeetegaBharat#BharatAtAG22 pic.twitter.com/m6gzwO4XTY
">India bag GOLD after match gets abandoned due to rain 🏏
— SAI Media (@Media_SAI) October 7, 2023
The #MenInBlue triumph against 🇦🇫 as higher ranked opponents to clinch the #Gold🥇
Three cheers for team 🇮🇳🥳
Well done guys! #AsianGames2022#Cheer4India#HallaBol#JeetegaBharat#BharatAtAG22 pic.twitter.com/m6gzwO4XTYIndia bag GOLD after match gets abandoned due to rain 🏏
— SAI Media (@Media_SAI) October 7, 2023
The #MenInBlue triumph against 🇦🇫 as higher ranked opponents to clinch the #Gold🥇
Three cheers for team 🇮🇳🥳
Well done guys! #AsianGames2022#Cheer4India#HallaBol#JeetegaBharat#BharatAtAG22 pic.twitter.com/m6gzwO4XTY
2ನೇ ಓವರ್ನಲ್ಲೇ ಝಬೇಸ್ ಅಕ್ಬರಿ ವಿಕೆಟ್ ಕಿತ್ತ ಶಿವಂ ದುಬೆ ಅಫ್ಘನ್ ತಂಡದ ಕುಸಿತಕ್ಕೆ ನಾಂದಿ ಹಾಡಿದರು. ಇದಾದ ಬಳಿಕ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡ 52 ರನ್ ಗಳಿಸುವಷ್ಟಲ್ಲಿ ಪ್ರಮುಖ 5 ವಿಕೆಟ್ ನಷ್ಟ ಅನುಭವಿಸಿತು. ನಾಲ್ವರು ಆಟಗಾರರು ಒಂದಂಕಿಗೆ ವಿಕೆಟ್ ಒಪ್ಪಿಸಿದರು. ಇದರಿಂದ 100 ರ ಒಳಗೆ ಆಲೌಟ್ ಆಗುವ ಭೀತಿಯಲ್ಲಿತ್ತು.
ಶಹೀದುಲ್ಲಾ- ನಾಯಕ ನೈಬ್ ನೆರವು: ತಂಡ 100 ರ ಗಡಿ ದಾಟುವುದು ಕಷ್ಟ ಎಂದಾಗ ಮಧ್ಯಮ ಕ್ರಮಾಂಕದ ಆಟಗಾರ ಶಹೀದುಲ್ಲಾ ಕಮಲ್ ಉತ್ತಮ ಬ್ಯಾಟಿಂಗ್ ಮಾಡಿ ತಂಡವನ್ನು ಮೇಲೆತ್ತಿದರು. 43 ಎಸತೆಗಳಲ್ಲಿ 49 ರನ್ ಗಳಿಸಿದ ಕಮಲ್ಗೆ, ನಾಯಕ ಗುಲ್ಬದಿನ್ ನೈಬ್ (27) ಉತ್ತಮ ಸಾಥ್ ನೀಡಿದರು. ತಂಡ 18.2 ಓವರ್ಗಳಲ್ಲಿ 112 ರನ್ ಗಳಿಸಿದ್ದಾಗ ಮಳೆ ಆರಂಭವಾಯಿತು. ಧಾರಾಕಾರವಾಗಿ ಮಳೆ ಬಿದ್ದಿದ್ದರಿಂದ ಮೈದಾನ ಸಂಪೂರ್ಣ ಒದ್ದೆಯಾಯಿತು. ಹೀಗಾಗಿ ಪಂದ್ಯವನ್ನು ಅಂಪೈರ್ಗಳು ರದ್ದುಗೊಳಿಸಲು ನಿರ್ಧರಿಸಿದರು.
ಮಳೆಗೆ ಪಂದ್ಯ ಆಹುತಿಯಾಗಿದ್ದರಿಂದ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ಟೀಂ ಇಂಡಿಯಾವನ್ನು ವಿಜಯಿ ಎಂದು ಘೋಷಿಸಲಾಯಿತು. ಈ ಮೂಲಕ ಏಷ್ಯನ್ ಗೇಮ್ಸ್ನಲ್ಲಿ ಭಾರತ ಕ್ರಿಕೆಟ್ ತಂಡ ಸ್ವರ್ಣ ಪದಕವನ್ನು ಗೆದ್ದುಕೊಂಡಿತು. ರನ್ನರ್ ಅಪ್ ಅಫ್ಘಾನಿಸ್ತಾನಕ್ಕೆ ಬೆಳ್ಳಿ ಪದಕ ಸಿಕ್ಕಿತು.
ಮೊದಲ ಯತ್ನದಲ್ಲೇ ಚಿನ್ನ: 2010, 2014 ರ ಏಷ್ಯನ್ ಗೇಮ್ಸ್ನಲ್ಲಿ ಭಾರತ ಕ್ರಿಕೆಟ್ ತಂಡ ಕಣಕ್ಕಿಳಿದಿರಲಿಲ್ಲ. ಮೊದಲ ಬಾರಿಗೆ ಕೂಟದಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾ ನಾಯಕ ಋತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ ಚಿನ್ನದ ಸಾಧನೆ ಮಾಡಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಸೆಣಸಾಟದಲ್ಲಿ ಪಾಕಿಸ್ತಾನ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದಡಿ ಬಾಂಗ್ಲಾದೇಶ ವಿಜಯ ಸಾಧಿಸಿ ಕಂಚು ಪಡೆದುಕೊಂಡಿತು.
ಇದನ್ನೂ ಓದಿ: ಏಷ್ಯಾಡ್ನಲ್ಲಿ 'ಸಾಚಿ' ಜೋಡಿ ವಿಕ್ರಮ.. ಬ್ಯಾಡ್ಮಿಂಟನ್ನಲ್ಲಿ ಮೊದಲ ಬಾರಿಗೆ ದಾಖಲೆಯ ಚಿನ್ನ