ETV Bharat / sports

ಇಂದಿನಿಂದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಭಾರತೀಯರ ಮೇಲೆ ಭಾರೀ ನಿರೀಕ್ಷೆ

ಕೊರೊನಾ ಸಾಂಕ್ರಾಮಿಕ ರೋಗ ಮತ್ತು ಪ್ರಯಾಣದ ನಿರ್ಬಂಧದಿಂದಾಗಿ ಭಾರತ, ಉಜ್ಬೇಕಿಸ್ತಾನ್, ಫಿಲಿಪೈನ್ಸ್ ಮತ್ತು ಕಜಕಿಸ್ತಾನ್ ಸೇರಿದಂತೆ ಕೇವಲ 17 ದೇಶಗಳ ಬಾಕ್ಸರುಗಳು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. 2019ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಕೊನೆಯ ಆವೃತ್ತಿಯಲ್ಲಿ ಭಾರತ ಎರಡು ಚಿನ್ನ ಸೇರಿದಂತೆ 13 ಪದಕಗಳನ್ನು ಗೆದ್ದಿತ್ತು.

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌
author img

By

Published : May 24, 2021, 6:59 AM IST

ನವದೆಹಲಿ: ಇಂದಿನಿಂದ ದುಬೈನಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಆರಂಭವಾಗಲಿದೆ. ಮುಂಬರುವ ಒಲಿಂಪಿಕ್ಸ್‌ ಸ್ಪರ್ಧೆಗಳಿಗೆ ಸಜ್ಜಾಗುತ್ತಿರುವ ಭಾರತದ ಬಾಕ್ಸರ್‌ಗಳಿಗೆ ಏಷ್ಯನ್ ಚಾಂಪಿಯನ್‌ಷಿಪ್ ಉತ್ತಮ ವೇದಿಕೆಯಾಗಿದ್ದು, ಕಳೆದ ಆವೃತ್ತಿಗಿಂತ ಈ ಬಾರಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿ ಭಾರತದ ಬಾಕ್ಸರ್‌ಗಳು ತಯಾರಾಗಿದ್ದಾರೆ.

ಭಾರತದ 9 ಪುರುಷರು ಮತ್ತು 10 ಮಹಿಳೆಯರನ್ನು ಒಳಗೊಂಡಂತೆ ಒಟ್ಟು 19 ಬಾಕ್ಸರ್‌ಗಳು ಕೂಟದಲ್ಲಿ ಸ್ಪರ್ಧಿಸುತ್ತಿದ್ದು, ಉತ್ತಮ ನಿರ್ವಹಣೆ ತೋರುವವರಿಗೆ ಈ ಬಾರಿ ಪದಕಗಳೊಂದಿಗೆ ಬಹುಮಾನದ ಮೊತ್ತವೂ ಬೋನಸ್ ಆಗಿ ಸಿಗಲಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಮೊಹಮ್ಮದ್ ಹುಸಾಮುದ್ದೀನ್ (56 ಕೆ.ಜಿ), ಏಷ್ಯಾದ ಮಾಜಿ ಚಾಂಪಿಯನ್ ಶಿವ ಥಾಪಾ (64 ಕೆ.ಜಿ) ಮತ್ತು ಸುಮಿತ್ ಸಾಂಗ್ವಾನ್ (81 ಕೆ.ಜಿ) ಇಂದು ತಮ್ಮ ಅಭಿಯಾನ ಶುರು ಮಾಡಲಿದ್ದಾರೆ.

ಹಾಲಿ ಚಾಂಪಿಯನ್ ಅಮಿತ್ ಪಂಗಾಲ್ (52 ಕೆ.ಜಿ) ಮೊದಲ ಸುತ್ತಿನಲ್ಲಿ ಬೈ ಪಡೆದ ಕಾರಣ ಅವರು ನೇರ ಕ್ವಾರ್ಟರ್ ಫೈನಲ್‌ನಲ್ಲಿ ಮಂಗೋಲಿಯಾದ ಎನ್‌ಖ್ಮನಾಡಖ್ ಖಾರ್ಖು ಅವರನ್ನು ಎದುರಿಸಲಿದ್ದಾರೆ. ಇನ್ನು, ಆಶಿಶ್ ಕುಮಾರ್ (75 ಕೆ.ಜಿ) ಕೂಡ ಮೊದಲ ಸುತ್ತಿನ ಬೈ ಪಡೆದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಕಜಕಿಸ್ತಾನದ ಅಬಿಲ್‌ಖಾನ್ ಅಮಾನ್‌ಕುಲ್ ಅವರನ್ನು ತಮ್ಮ ಆರಂಭಿಕ ಪಂದ್ಯದಲ್ಲಿ ಎದುರಿಸಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ, ಮೇರಿ ಕೋಮ್ (51 ಕೆ.ಜಿ), ಲಾಲ್ಬುಟ್ಸೈಹಿ (64 ಕೆ.ಜಿ), ಲೋವ್ಲಿನಾ ಬೊರ್ಗೊಹೈನ್ (69 ಕೆ.ಜಿ), ಪೂಜಾ ರಾಣಿ (75 ಕೆ.ಜಿ), ಮೋನಿಕಾ (48 ಕೆ.ಜಿ), ಸವೀತಾ (81 ಕೆ.ಜಿ) ಮತ್ತು ಅನುಪಮಾ (81+ ಕೆ.ಜಿ) ಸೇರಿದಂತೆ ಏಳು ಮಹಿಳಾ ಬಾಕ್ಸರುಗಳನ್ನು ಅಖಾಡದಲ್ಲಿದ್ದಾರೆ.

ಪುರುಷ ಬಾಕ್ಸರ್ಸ್: ಅಮಿತ್ ಪಂಗಲ್ (52 ಕೆ.ಜಿ), ಮೊಹಮ್ಮದ್ ಹುಸಾಮುದ್ದೀನ್ (56 ಕೆ.ಜಿ), ವರಿಂದರ್ ಸಿಂಗ್ (60 ಕೆ.ಜಿ), ಶಿವ ಥಾಪಾ (64 ಕೆ.ಜಿ), ವಿಕಾಸ್ ಕ್ರಿಶನ್ (69 ಕೆ.ಜಿ), ಆಶಿಶ್ ಕುಮಾರ್ (75 ಕೆ.ಜಿ), ಸುಮಿತ್ ಸಾಂಗ್ವಾನ್ (81 ಕೆ.ಜಿ), ಸಂಜೀತ್ (91 ಕೆ.ಜಿ) ಮತ್ತು ನರೇಂದರ್ (91+ ಕೆ.ಜಿ).

ಮಹಿಳಾ ಬಾಕ್ಸರ್ಸ್: ಮೋನಿಕಾ (48 ಕೆ.ಜಿ), ಎಂಸಿ ಮೇರಿ ಕೋಮ್ (51 ಕೆ.ಜಿ), ಸಾಕ್ಷಿ (54 ಕೆ.ಜಿ), ಜಾಸ್ಮಿನ್ (57 ಕೆ.ಜಿ), ಸಿಮ್ರಾಂಜಿತ್ ಕೌರ್ (60 ಕೆ.ಜಿ), ಲಾಲ್ಬುಟ್ಸೈಹಿ (64 ಕೆ.ಜಿ), ಲೊವ್ಲಿನಾ ಬೋರ್ಗೊಹೈನ್ (69 ಕೆ.ಜಿ), ಪೂಜಾ ರಾಣಿ (75 ಕೆ.ಜಿ) ) ಮತ್ತು ಅನುಪಮಾ ( 81+ ಕೆಜಿ).

ಭಾರತದಲ್ಲಿ ನಿಗದಿಯಾಗಿದ್ದ ಈ ಟೂರ್ನಿಯನ್ನು ಕೋವಿಡ್‌ ಹಿನ್ನೆಲೆಯಲ್ಲಿ ದುಬೈಗೆ ಸ್ಥಳಾಂತರ ಮಾಡಲಾಗಿದೆ. ಟೂರ್ನಿಯಲ್ಲಿ ಚಿನ್ನ ಗೆದ್ದವರಿಗೆ ₹ 7 ಲಕ್ಷ, ಬೆಳ್ಳಿ ಪದಕ ಗೆದ್ದವರಿಗೆ 3.5 ಲಕ್ಷ ಮತ್ತು ಕಂಚಿನ ಪದಕ ವಿಜೇತರಿಗೆ ₹ 1ಲಕ್ಷ 80 ಸಾವಿರ ನೀಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.