ಹೈದರಾಬಾದ್ : ಭಾರತೀಯ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್ ಅನ್ನು ಹೆಚ್ಚು ಆಕರ್ಷಕಣೀಯವನ್ನಾಗಿಸಲು ವಿಜಯಗಳನ್ನು ಹೇಗೆ ಆಚರಿಸುವುದನ್ನ ಕಲಿಸಬೇಕು ಎಂದು 2005 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿರುವ ಅಂಜು ಬಾಬಿ ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ.
ಗೆಲುವನ್ನು ಹೇಗೆ ಆಚರಿಸಬೇಕೆಂದು ನಾವು ನಮ್ಮ ಕ್ರೀಡಾಪಟುಗಳಿಗೆ ಕಲಿಸಬೇಕಾಗಿದೆ. ಜೊತೆಗೆ ಪ್ರೇಕ್ಷಕರನ್ನು ಆಕರ್ಷಿಸಲು ನಾವು ಮನರಂಜಕರಾಗಿರಬೇಕು ”ಎಂದು ಜಾರ್ಜ್ ಹೇಳಿದ್ದಾರೆ.
"ಪ್ರೇಕ್ಷಕರನ್ನು ರಂಜಿಸಲು ಅವರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದನ್ನು ನಾವು ಕಲಿಯಬೇಕಾಗಿದೆ. ಅಮೆರಿಕನ್ನರು ಅದನ್ನ ಮಾಡುತ್ತಾರೆ, ನಾವು ಕೂಡ ಅವರ ಮಾರ್ಗವನ್ನು ಆಚರಿಸಬೇಕಾಗಿದೆ. ನಮ್ಮ ವೇಗ, ನಮ್ಮ ಜಿಗಿತಗಳು ಅಥವಾ ನಮ್ಮ ಥ್ರೋಗಳನ್ನು ಆನಂದಿಸಲು ಅಭಿಮಾನಿಗಳು ಮೈದಾನಕ್ಕೆ ಬಂದಿರುತ್ತಾರೆ.
ನಮ್ಮ ಕ್ರೀಡೆಯಲ್ಲಿ ಪ್ರೇಕ್ಷಕರು ಇಲ್ಲದಿದ್ದರೆ ಮೋಡಿ ಇರುವುದಿಲ್ಲ. ಹಾಗಾಗಿ ನಾವು ಕೂಡ ಗೆಲುವಿನ ಸಂಭ್ರಮವನ್ನು ಫೀಲ್ಡ್ನಲ್ಲಿ ಆಚರಿಸಬೇಕು ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ನಾನು ಕೂಡ ನಾಚಿಕೆಯುಳ್ಳವಳಾಗಿದ್ದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ಆಥ್ಲೀಟ್ಗಳ ಜೊತೆ ಸೇರಿಕೊಂಡ ನಂತರ ಸಂಭ್ರಮಾಚರಣೆ ಮಾಡುವುದನ್ನ ಕಲಿತುಕೊಂಡೆ ಎಂದು ಲಾಂಗ್ಜಂಪ್ನಲ್ಲಿ 2003ರ ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚು ಹಾಗೂ 2005ರಲ್ಲಿ ಚಿನ್ನ ಗೆದ್ದ ಅಂಜು ಬಿ ಜಾರ್ಜ್ ತಿಳಿಸಿದ್ದಾರೆ.