ETV Bharat / sports

ಒಲಿಂಪಿಕ್ಸ್​ ಕ್ವಾಲಿಫೈಯರ್ಸ್ ಸೆಮಿ - ಫೈನಲ್​ನಲ್ಲಿ ಜರ್ಮನಿ ವಿರುದ್ಧ ಸೆಣಸಲಿರುವ ಭಾರತ - Hockey Olympic Qualifier

ನಾಳೆ ಒಲಿಂಪಿಕ್ಸ್​ ಕ್ವಾಲಿಫೈಯರ್ಸ್ ಸೆಮಿ - ಫೈನಲ್‌ನಲ್ಲಿ ಭಾರತ ತಂಡ ಜರ್ಮನಿ ವಿರುದ್ಧ ಸೆಣಸಲಿದೆ.

ಭಾರತ ಜರ್ಮನಿ ಒಲಿಂಪಿಕ್ಸ್​ ಕ್ವಾಲಿಫೈಯರ್ಸ್ ಸೆಮಿ-ಫೈನಲ್

author img

By ETV Bharat Karnataka Team

Published : Jan 17, 2024, 10:46 PM IST

ರಾಂಚಿ (ಜಾರ್ಖಂಡ್​): ಭಾರತೀಯ ಮಹಿಳಾ ಹಾಕಿ ತಂಡವು ಗುರುವಾರ (ನಾಳೆ) ಇಲ್ಲಿ ನಡೆಯಲಿರುವ FIH ಹಾಕಿ ಒಲಿಂಪಿಕ್ಸ್​ ಕ್ವಾಲಿಫೈಯರ್ಸ್ ಸೆಮಿ-ಫೈನಲ್‌ನಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ. ಭಾರತವು ತನ್ನ ಅಂತಿಮ ಪೂಲ್ ಬಿ ಪಂದ್ಯದಲ್ಲಿ ಇಟಲಿಯನ್ನು 5-1 ಅಂತರದಿಂದ ಸೋಲಿಸಿತು. ಇದೀಗ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಗೆಲುವು ಸಾಧಿಸಿದರೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಪಡೆಯಲಿದೆ.

ಗ್ರೂಪ್ ಹಂತದಲ್ಲಿ ತನ್ನ ಮೊದಲ ಪಂದ್ಯದಲ್ಲಿ USA ವಿರುದ್ಧ 0-1 ಸೋಲಿನೊಂದಿಗೆ ಒಲಿಂಪಿಕ್ಸ್‌ ಅರ್ಹತೆ ಪ್ರಾರಂಭಿಸಿದ ಭಾರತ ತನ್ನ ಎರಡನೇ ಗೇಮ್‌ನಲ್ಲಿ ನ್ಯೂಜಿಲೆಂಡ್ ಅನ್ನು 3-1 ಗೋಲುಗಳಿಂದ ಸೋಲಿಸಿ ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡಿತು. ನಂತರ ಇಟಲಿ ವಿರುದ್ಧವೂ ತಮ್ಮ ಫಾರ್ಮ್ ಅನ್ನು ಮುಂದುವರೆಸಿದ ಭಾರತದ ವನಿತೆಯರು 5-1 ಅಂತರದ ಗೆಲುವು ಸಾಧಿಸಿದರು.

ಮುಂದಿನ ಪಂದ್ಯದ ಬಗ್ಗೆ ಭಾರತ ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪ್ರತಿಕ್ರಿಯೆ ನೀಡಿ, "ನಾವು ಈಗಾಗಲೇ ಜರ್ಮನಿ ವಿರುದ್ಧ ಕೆಲ ಪಂದ್ಯಗಳನ್ನು ಆಡಿ ಉತ್ತಮ ಪ್ರದರ್ಶನ ನೀಡಿದ್ದೇವೆ. ನಮ್ಮ ತಂಡದ ಸಾಮರ್ಥ್ಯದ ಬಗ್ಗೆ ನಮಗೆ ವಿಶ್ವಾಸ ಇದೆ. ಹಾಗೆ ಉತ್ತಮ ಪ್ರದರ್ಶನ ನೀಡಬಲ್ಲೆವು. ನಾವು ಆಕ್ರಮಣಕಾರಿ ಪ್ರದರ್ಶನ ತೋರಬಲ್ಲೆವು. ಉಳಿದಂತೆ ಜರ್ಮನಿ ಕೂಡ ಉತ್ತಮ ತಂಡವಾಗಿದೆ. ಹಾಗಾಗಿ ಎಂದು ಸವಿತಾ ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಭಾರತೀಯ ಮಹಿಳಾ ಹಾಕಿ ತಂಡ ಐದನೇ ಶ್ರೇಯಾಂಕಿತ ಜರ್ಮನಿಯನ್ನು ಎದುರಿಸಲಿದ್ದು, ಗೆಲುವಿನೊಂದಿಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಭರವಸೆಯಲ್ಲಿದೆ.

ಇದನ್ನೂ ಓದಿ: ಇಂದು 3ನೇ ಟಿ -20: 6 ರನ್​ ಗಳಿಸಿದರೆ ವಿರಾಟ್​ ಕೊಹ್ಲಿ ದಾಖಲೆ ಪಟ್ಟಿಗೆ ಮತ್ತೊಂದು ಗರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.