ETV Bharat / sports

ಏಷ್ಯನ್​ ಕುಸ್ತಿ ಚಾಂಪಿಯನ್​ಶಿಪ್​: ಈ ಬಾರಿ ಐದು ಸ್ಥಾನ ಮೇಲಕ್ಕೆ ಜಿಗಿದ ಭಾರತ - India 3rd place medal tally

2019ರಲ್ಲಿ ಚೀನಾದಲ್ಲಿ ನಡೆದಿದ್ದ ಚಾಂಪಿಯನ್​ಶಿಪ್​ನಲ್ಲಿ ಭಾರತ ಕೇವಲ ಒಂದು ಚಿನ್ನ, 6 ಬೆಳ್ಳಿ , 9 ಕಂಚಿನೊಂದಿಗೆ 8ನೇ ಸ್ಥಾನ ಪಡೆದಿತ್ತು. ಈ ಬಾರಿ ಮೂರನೇ ಸ್ಥಾನಕ್ಕೆ ಜಿಗಿದಿದೆ.

Asian wrestling championship
ಏಷ್ಯನ್​ ಕುಸ್ತಿ ಚಾಂಪಿಯನ್​ಶಿಪ್​
author img

By

Published : Feb 23, 2020, 10:58 PM IST

ನವದೆಹಲಿ: ಭಾರತ ತಂಡ ತವರಿನ ನೆಲದಲ್ಲಿ ನಡೆದ ಏಷ್ಯನ್​ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಪದಕ ಪಟ್ಟಿಯಲ್ಲಿ 3ನೇ ಸ್ಥಾನದೊಂದಿಗೆ ಮುಗಿಸಿದೆ.

2019ರಲ್ಲಿ ಚೀನಾದಲ್ಲಿ ನಡೆದಿದ್ದ ಚಾಂಪಿಯನ್​ಶಿಪ್​ನಲ್ಲಿ ಭಾರತ ಕೇವಲ ಒಂದು ಚಿನ್ನ, 6 ಬೆಳ್ಳಿ , 9 ಕಂಚಿನೊಂದಿಗೆ 8ನೇ ಸ್ಥಾನ ಪಡೆದಿತ್ತು.

ಈ ಬಾರಿ ಭಾರತದ ಕ್ರೀಡಾಪುಟಗಳು ಅದ್ಭುತ ಪ್ರದರ್ಶನ ತೋರಿ 5 ಚಿನ್ನ 6 ಬೆಳ್ಳಿ ಹಾಗೂ 9 ಕಂಚಿನ ಪದಕಗಳೊಂದಿಗೆ ದೇಶವನ್ನು 3ನೇ ಸ್ಥಾನಕ್ಕೇರಿಸಿದ್ದಾರೆ. ಭಾರತದ ಪರ ರವಿ ಕುಮಾರ್​, ಸುನಿಲ್ ಕುಮಾರ್​ ಹಾಗೂ ಮಹಿಳೆಯರ ವಿಭಾಗದಲ್ಲಿ ದಿವ್ಯಾ ಕರಣ್​, ಪಿಂಕಿ ಹಾಗೂ ಸರಿತಾ ಮೋರೆ ಚಿನ್ನದ ಪದಕ ಪಡೆದಿದ್ದರು. ಅನುಭವಿ ಕುಸ್ತಿಪಟು ಭಜರಂಗ್​ ಪೂನಿಯಾ ಬೆಳ್ಳಿ ಪದಕ ಪಡೆದು ನಿರಾಶೆ ಮೂಡಿಸಿದ್ದರು.

  • Final Update of Asian Wrestling Championships:
    India finish at 3rd spot in Medal tally with 20 medals (5 Gold, 6 Silver & 9 Bronze)
    In 2019 edition: India finish at 8th spot with 16 Medals (1 Gold, 6 Silver & 9 Bronze) #WrestleNewDelhi pic.twitter.com/Do1uIxwnve

    — India_AllSports (@India_AllSports) February 23, 2020 " class="align-text-top noRightClick twitterSection" data=" ">

ಇನ್ನು ಕಳೆದ ವರ್ಷ 11 ಚಿನ್ನದ ಪದಕದೊಂದಿಗೆ 17 ಪದಕ ಪಡೆದು ಮೊದಲ ಸ್ಥಾನ ಪಡೆದಿದ್ದ ಇರಾನ್​ ಈ ಬಾರಿ 2ನೇ ಸ್ಥಾನಕ್ಕೆ ಕುಸಿದಿದೆ. ಈ ಬಾರಿ 7 ಚಿನ್ನದ ಸಹಿತ 17 ಪದಕ ಪಡೆದಿದೆ.

8 ಚಿನ್ನ 4 ಬೆಳ್ಳಿ ಹಾಗೂ 4 ಕಂಚು ಸಹಿತ 16 ಪದಕ ಪಡೆದ ಜಪಾನ್​ ಅಗ್ರಸ್ಥಾನಿಯಾಗಿ ಟೂರ್ನಿಯನ್ನು ಮುಗಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.