ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯನ್ ಗೇಮ್ಸ್ನ 8ನೇ ದಿನವಾದ ಇಂದು (ಭಾನುವಾರ) 15 ಪದಕ ಬೇಟೆ ಮಾಡಿದೆ. ಪುರುಷರ ಟ್ಯ್ರಾಪ್ ಶೂಟಿಂಗ್, ಶಾಟ್‌ಪುಟ್ ಮತ್ತು 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಭಾರತಕ್ಕೆ ಬಂಗಾರ ಒಲಿದಿದೆ. ಇನ್ನೂ 7 ಬೆಳ್ಳಿ ಮತ್ತು 5 ಕಂಚಿನ ಪದಕ ಭಾರತದ ಪಾಲಾಗಿದೆ. ಒಟ್ಟಾರೆ, 13 ಚಿನ್ನ, 21 ಬೆಳ್ಳಿ ಮತ್ತು 19 ಕಂಚು ಸೇರಿ ಭಾರತ 53 ಪದಕಗಳಿಂದ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಇಂದು ಆರಂಭದಲ್ಲಿ ಕನ್ನಡತಿ ಅದಿತಿ ಅಶೋಕ್ ಅವರು ಗಾಲ್ಫ್ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಪದಕ ಬೇಟೆ ಆರಂಭಿಸಿದರು. ಏಷ್ಯನ್ ಗೇಮ್ಸ್ ಗಾಲ್ಫ್ ಕ್ರೀಡೆಯಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ. ಫೈನಲ್ನಲ್ಲಿ ಆರಂಭದಿಂದ ಮುನ್ನಡೆಯಲ್ಲಿದ್ದ ಅದಿತಿ ಕೊನೆಯ ಕೆಲ ತಪ್ಪುಗಳಿಂದ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟು ಬೆಳ್ಳಿ ಗೆದ್ದರು.
-
Medal standings of Hangzhou Asian Games for Oct. 1. #Hangzhou #AsianGames #MedalStandings #HangzhouAsianGames #AsianGames2023 pic.twitter.com/Dvao6ywpZo
— 19th Asian Games Hangzhou 2022 Official (@19thAGofficial) October 1, 2023 " class="align-text-top noRightClick twitterSection" data="
">Medal standings of Hangzhou Asian Games for Oct. 1. #Hangzhou #AsianGames #MedalStandings #HangzhouAsianGames #AsianGames2023 pic.twitter.com/Dvao6ywpZo
— 19th Asian Games Hangzhou 2022 Official (@19thAGofficial) October 1, 2023Medal standings of Hangzhou Asian Games for Oct. 1. #Hangzhou #AsianGames #MedalStandings #HangzhouAsianGames #AsianGames2023 pic.twitter.com/Dvao6ywpZo
— 19th Asian Games Hangzhou 2022 Official (@19thAGofficial) October 1, 2023
ನಂತರ ಪುರುಷರ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು ಚಿನ್ನದ ಪದಕ ಗೆದ್ದರು. ಇದು ಭಾರತಕ್ಕೆ 11ನೇ ಚಿನ್ನದ ಪದಕವಾಗಿತ್ತು. ವನಿತೆಯರ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಮನೀಶಾ ಕೀರ್, ಪ್ರೀತಿ ರಜಾಕ್ ಮತ್ತು ರಾಜೇಶ್ವರಿ ಕುಮಾರಿ ಬೆಳ್ಳಿ ಪದಕ ಪಡೆದರು. ವೈಯಕ್ತಿಕ ಟ್ರ್ಯಾಪ್ ಶೂಟಿಂಗ್‌ನಲ್ಲಿ ಕಿನಾನ್ ಚೆನೈಗೆ ಕಂಚು ಗೆಲ್ಲುವಲ್ಲಿ ಯಶಸ್ವಿಯಾದರು.
ಸಂಜೆ ವೇಳೆ ನಡೆದ ಕ್ರೀಡಾಕೂಟದಲ್ಲಿ ಅವಿನಾಶ್ ಸೇಬಲ್ 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಮತ್ತು ಪುರುಷರ ಶಾಟ್‌ಪುಟ್ (ಗುಂಡು ಎಸೆತ) ಸ್ಪರ್ಧೆಯಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್ ಚಿನ್ನದ ಪದಕ ಗೆದ್ದರು. ಅವಿನಾಶ್ 8 ನಿಮಿಷ 19 ಸೆಕೆಂಡ್ 54 ಕ್ಷಣಗಳಲ್ಲಿ 3000 ಮೀಟರ್ ಓಟವನ್ನು ಪೂರ್ಣಗೊಳಿಸಿ ಮೊಲದ ಸ್ಥಾನ ಪಡೆದರೆ, ತಜಿಂದರ್‌ಪಾಲ್ ಸಿಂಗ್ ತೂರ್ 7.26 ಕೆಜಿ ಕಬ್ಬಿಣದ ಗುಂಡನ್ನು 20.36 ಮೀ ದೂರಕ್ಕೆಸೆದು ಬಂಗಾರವನ್ನು ತಮ್ಮದಾಗಿಸಿಕೊಂಡರು.
ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ನಿಖತ್ ಜರೀನ್ ತಮ್ಮ ಚೊಚ್ಚಲ ಏಷ್ಯಾಡ್ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಮಹಿಳೆಯರ 50 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುತಮತ್ ರಕ್ಸತ್ ವಿರುದ್ಧ 3:2 ಪಾಯಿಂಟ್ ಸೋಲುಕಂಡರು. ಆದರೆ, 2024ರಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿ ಸ್ಥಾನ ಪಡೆದುಕೊಂಡರು.
ಮಹಿಳೆಯರ 1,500 ಮೀಟರ್ ಓಟದಲ್ಲಿ ಹರ್ಮಿಲನ್ ಬೇನ್ಸ್ ಬೆಳ್ಳಿ ಗೆದ್ದರೆ, ಪುರುಷರ 1,500 ಮೀ ಓಟದಲ್ಲಿ ಅಜಯ್ ಕುಮಾರ್ ಸರೋಜ್ ಮತ್ತು ಜಿನ್ಸನ್ ಜಾನ್ಸನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು. ಲಾಂಗ್ ಜಂಪ್ನಲ್ಲಿ ಮುರಳಿ ಶ್ರೀಶಂಕರ್ ಅವರು 8.19 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದರೆ, ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ಭಾರತದ ಸೀಮಾ ಪುನಿಯಾ 58.62 ಮೀಟರ್ ದೂರ ಎಸೆದು ಕಂಚು ವಶಪಡಿಸಿಕೊಂಡರು. ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ನಂದಿನಿ ಅಗಸರ 800 ಮೀಟರ್ ಓಟವನ್ನು 2:15.33 ಸಮಯದಲ್ಲಿ ಮುಗಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಚೀನಾದ ವಿರುದ್ಧ ಪ್ರಬಲ ಪೈಪೋಟಿ ಎದುರಿಸಿ ಭಾರತದ ಪುರುಷರ ಷಟ್ಲರ್ಗಳ ತಂಡ 2-3 ಅಂತರದಿಂದ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟಿತು. ಹಾಗೇ 100 ಮೀಟರ್ ಹರ್ಡಲ್ಸ್ನಲ್ಲಿ ಜ್ಯೋತಿ ಯರ್ರಾಜಿಗೆ ಬೆಳ್ಳಿ ಪದಕ ಗೆದ್ದರು.
ಒಟ್ಟಾರೆ ಎಂಟನೇ ದಿನದ ಮುಕ್ತಾಯಕ್ಕೆ ಭಾರತ 13 ಚಿನ್ನ, 21 ಬೆಳ್ಳಿ ಮತ್ತು 19 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಚೀನಾ 243 (132 ಚಿನ್ನ, 72 ಬೆಳ್ಳಿ, 39 ಕಂಚು), ದಕ್ಷಿಣ ಕೊರಿಯಾ (125), ಜಪಾನ್ (112) ಪದಕಗಳೊಂದಿಗೆ ಭಾರತಕ್ಕಿಂತ (44) ಮುಂದಿದೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಬ್ಯಾಡ್ಮಿಂಟನ್, 100 ಮೀಟರ್ ಹರ್ಡಲ್ಸ್ನಲ್ಲಿ ಬೆಳ್ಳಿ ಗೆದ್ದ ಭಾರತ