ಸ್ವೀಡನ್: ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಇಂದು ನಡೆದ ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದು ಮುನ್ನುಗ್ಗಿದರು. "ನಾನು ಒಲಿಂಪಿಕ್ ಚಾಂಪಿಯನ್ ಆಗುವ ಒತ್ತಡ ಅನುಭವಿಸಿಲ್ಲ" ಎಂದು ಅವರು ಬಳಿಕ ಪ್ರತಿಕ್ರಿಯಿಸಿದರು.
"ಇಂದಿನ ಪ್ರದರ್ಶನದಿಂದ ತೃಪ್ತಿ ಹೊಂದಿದ್ದೇನೆ. ಇಂದು 90 ಮೀಟರ್‌ಗಿಂತ ಹೆಚ್ಚು ದೂರ ಎಸೆಯಬಹುದೆಂದು ಭಾವಿಸಿದ್ದೆ. ಆದರೆ ಸ್ವಲ್ಪ ಎಡವಿದೆ. ಈ ವರ್ಷ ಹೆಚ್ಚು ಸ್ಪರ್ಧೆಗಳಿವೆ. ಮತ್ತಷ್ಟು ಉತ್ತಮವಾಗಿ ಸಿದ್ಧನಾಗುತ್ತೇನೆ" ಎಂದು ಅವರು ತಿಳಿಸಿದರು.
ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ 7 ಬಾರಿ ಭಾಗವಹಿಸಿದ್ದಾರೆ. ಆದರೆ, ಇದೇ ಮೊದಲ ಸಲ ಪದಕ ಗೆಲ್ಲಲು ಸಾಧ್ಯವಾಗಿದೆ. ಅಮೆರಿಕದ ಯುಜೀನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಇದೀಗ ಅವರು ಕಾಯುತ್ತಿದ್ದು, ಸ್ಪರ್ಧೆ ಜುಲೈ 15-24ರವರೆಗೆ ನಡೆಯಲಿದೆ.