ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಭಾರತೀಯ ಶಟ್ಲರ್ ಹೆಚ್ ಎಸ್ ಪ್ರಣಯ್ ಇಂದು (ಮಂಗಳವಾರ) ಪ್ರಕಟವಾದ ಬಿಡಬ್ಲ್ಯುಎಫ್ ಶ್ರೇಯಾಂಕದಲ್ಲಿ ತಮ್ಮ ವೃತ್ತಿಜೀವನದ ಉನ್ನತ ವಿಶ್ವ ಶ್ರೇಯಾಂಕವನ್ನು ಅಲಂಕರಿಸಿದ್ದಾರೆ. ತನ್ನ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಪ್ರಣಯ್ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವ ನಂಬರ್ 1 ಮತ್ತು ಒಲಂಪಿಕ್ ಚಾಂಪಿಯನ್ ವಿಕ್ಟರ್ ಅಕ್ಸೆಲ್‌ಸೆರನ್ನು ಮಣಿಸಿದ್ದರು. ಅಂಕಪಟ್ಟಿಯಲ್ಲಿ 71,637 ಅಂಕವನ್ನು ಗಳಿಸಿರುವ ಪ್ರಣಯ್ 6ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬಿಡುಗಡೆ ಆದ ಶ್ರೇಯಾಂಕ ಪಟ್ಟಿಯಲ್ಲಿ ಪ್ರಣಯ್ 9ನೇ ಸ್ಥಾನವನ್ನು ಅಲಂಕರಿಸಿದ್ದರು. ತಿಂಗಳಾಂತ್ಯದ ವೇಳೆ ಉತ್ತಮ ಪ್ರದರ್ಶನದಿಂದ ಮತ್ತೆ 3 ಸ್ಥಾನಗಳ ಏರಿಕೆ ಕಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಟಾಪ್ 10 ರ‍್ಯಾಂಕ್ ಪ್ರವೇಶಿಸಿದರು. ಈ ಅವಧಿಯಲ್ಲಿ, ಅವರು ಸೂಪರ್-500 ಮಲೇಷ್ಯಾ ಮಾಸ್ಟರ್ಸ್ ಅನ್ನು ಗೆದ್ದಿದ್ದಾರೆ ಮತ್ತು ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದಾರೆ.
-
Career high-rankings for @PRANNOYHSPRI 🇮🇳 and new world champions 🇰🇷 Kang Min Hyuk/Seo Seung Jae. 🆙👏 pic.twitter.com/CIxbq3Mld1
— BWF (@bwfmedia) August 29, 2023 " class="align-text-top noRightClick twitterSection" data="
">Career high-rankings for @PRANNOYHSPRI 🇮🇳 and new world champions 🇰🇷 Kang Min Hyuk/Seo Seung Jae. 🆙👏 pic.twitter.com/CIxbq3Mld1
— BWF (@bwfmedia) August 29, 2023Career high-rankings for @PRANNOYHSPRI 🇮🇳 and new world champions 🇰🇷 Kang Min Hyuk/Seo Seung Jae. 🆙👏 pic.twitter.com/CIxbq3Mld1
— BWF (@bwfmedia) August 29, 2023
ಪುರುಷರ ಸಿಂಗಲ್ಸ್‌ನ ಭಾರತೀಯರ ಪೈಕಿ ಲಕ್ಷ್ಯ ಸೇನ್ ಅವರ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿತ ಕಂಡಿದೆ. 11ರಿಂದ 12 ಕ್ಕೆ ಕುಸಿದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸುತ್ತಿನಲ್ಲಿ ಹೊರ ಹೋದರೂ ಆದರೆ ಕಿಡಂಬಿ ಶ್ರೀಕಾಂತ್ 20 ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಒಲಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನ ಆರಂಭಿಕ ಸುತ್ತಿನಲ್ಲಿ ನಿರ್ಗಮಿಸಿದ್ದರು. ಆದರೂ ಅವರ ಶ್ರೇಯಾಂಕದಲ್ಲಿ ಮೂರು ಸ್ಥಾನಗಳ ಏರಿಕೆ ಕಂಡಿದ್ದು, 14 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ವಿಶ್ವ ಚಾಂಪಿಯನ್‌ಶಿಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಕಿಮ್ ಆಸ್ಟ್ರಪ್-ಆಂಡರ್ಸ್ ರಾಸ್‌ಮುಸ್ಸೆನ್ ವಿರುದ್ಧ ಸೋತರೂ, ತಮ್ಮ ವಿಶ್ವದ ಎರಡನೇ ಶ್ರೇಯಾಂಕವನ್ನು ಉಳಿಸಿಕೊಂಡಿದ್ದಾರೆ. ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಶ್ರೇಯಾಂಕದಲ್ಲಿ ಎರಡು ಸ್ಥಾನಗಳ ಏರಿಕೆ ಕಂಡು ವಿಶ್ವ ರ್ಯಾಂಕಿಂಗ್ನಲ್ಲಿ 17ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ವಿಶ್ವ ಚಾಂಪಿಯನ್‌ಶಿಪ್‌ನ 16ರ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಚೀನಾದ ಜೋಡಿ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿ ಫ್ಯಾನ್‌ನ ಅವರನ್ನು ಮಣಿಸಿದ್ದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 15ನೇ ಪ್ರಶಸ್ತಿ ಗೆದ್ದ ಪ್ರಣಯ್: ಪ್ರಕಾಶ್ ಪಡುಕೋಣೆ 1983ರಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಮಾಡಿದ್ದಾರೆ. 28 ವರ್ಷಗಳ ನಂತರ, ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ 2011ರ ಮಹಿಳಾ ಡಬಲ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದರು. 2 ಬಾರಿ ಒಲಿಂಪಿಕ್ ಪದಕ ಗೆದ್ದ ಪಿ.ವಿ.ಸಿಂಧು 2013 ಮತ್ತು 2014 ರಲ್ಲಿ ಕಂಚು, 2017 ಮತ್ತು 2018ರಲ್ಲಿ ಬೆಳ್ಳಿ ಮತ್ತು 2019ರಲ್ಲಿ ಚಿನ್ನದ ಪದಕ ಗೆದ್ದರು. ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಸಿಂಗಲ್ಸ್ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾದರು. 2015 ಮತ್ತು 2017 ರಲ್ಲಿ ಸೈನಾ ನೆಹ್ವಾಲ್, 2019ರಲ್ಲಿ ಪ್ರಣೀತ್, 2021 ರಲ್ಲಿ ಕಿಡಂಬಿ ಶ್ರೀಕಾಂತ್ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ:ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್: ಹೆಚ್.ಎಸ್.ಪ್ರಣಯ್ಗೆ ಕಂಚು