ಟೋಕಿಯೋ: ಟೋಕಿಯೋದಲ್ಲಿ ಭಾನುವಾರ 17 ದಿನಗಳ ಮಹಾ ಕ್ರೀಡಾಕೂಟಕ್ಕೆ ಭಾನುವಾರ ತೆರೆ ಎಳೆಯಲಾಗಿದೆ. ಕೋವಿಡ್ 19 ಬಿಕ್ಕಟ್ಟಿನ ನಡುವೆಯೂ ಜಪಾನ್ ಒಲಿಂಪಿಕ್ಸ್ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ನಡೆಸಿದೆ. ಸಮಾರೋಪ ಸಮಾರಂಭ ನಡೆಯುತ್ತಿದ್ದಂತೆ ಅಥ್ಲೀಟ್ಗಳ ಗಮನ 2024ರ ಪ್ಯಾರೀಸ್ ಒಲಿಂಪಿಕ್ಸ್ ಕಡೆಗೆ ತಿರುಗಿದೆ.
ಇನ್ನೂ ಕೋವಿಡ್ ಭೀತಿಯನ್ನು ಲೆಕ್ಕಿಸದೇ ಸಾವಿರಾರು ಕ್ರೀಡಾಪಟುಗಳು ನೂರಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಒಲಿಂಪಿಕ್ಸ್ ಗೇಮ್ಸ್ನಲ್ಲಿ ಭಾಗವಹಿಸಿ ಪದಕ ಬೇಟೆಯಾಡಿದ್ದಾರೆ. ಆದರೆ, ತೀವ್ರ ಪೈಪೋಟಿಯುತವಾಗಿದ್ದ ಕ್ರೀಡಾಕೂಟದಲ್ಲಿ ಬಲಿಷ್ಠ ಅಮೆರಿಕ ಕೊನೆಯ ದಿನ ಚೀನಾವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿದೆ.
32ನೇ ಒಲಿಂಪಿಕ್ಸ್ ಕ್ರೀಡಾಕೂಟದ ಅಂತ್ಯಕ್ಕೆ ಅಮೆರಿಕ 39 ಚಿನ್ನ, 41 ಬೆಳ್ಳಿ ಮತ್ತು 33 ಕಂಚಿನ ಪದಕಗಳನ್ನು 113 ಪದಕಗಳನ್ನು ಗೆಲ್ಲುವ ಮೂಲಕ ಅಗ್ರಸ್ಥಾನ ಪಡೆದಿದೆ. ಆರಂಭದಿಂದ ಒಲಿಂಪಿಕ್ಸ್ನ 16ನೇ ದಿನಗಳವರೆಗೂ ನಂಬರ್ 1 ಸ್ಥಾನದಲ್ಲಿದ್ದ ಚೀನಾ ಕೊನೆಯ ದಿನ 2ನೇ ಸ್ಥಾನಕ್ಕೆ ಕುಸಿಯಿತು. ಚೀನಾ 38 ಚಿನ್ನದ ಪದಕ , 32 ಬೆಳ್ಳಿ ಮತ್ತು 18 ಕಂಚಿನ ಪದಕ ಸೇರಿದಂತೆ ಒಟ್ಟು 88 ಪದಕಗಳನ್ನು ಪಡೆದರೆ, ಜಪಾನ್ 27 ಚಿನ್ನ, 14 ಬೆಳ್ಳಿ ಮತ್ತು 17 ಕಂಚಿನ ಪದಕ ಸೇರಿದಂತೆ 58 ಪದಕಗಳನ್ನು ಗೆದ್ದು 3ನೇ ಸ್ಥಾನ ಪಡೆಯಿತು.
ಭಾರತ ಕೂಡ ಈ ಒಲಿಂಪಿಕ್ಸ್ನಲ್ಲಿ 7 ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದೆ. 2012ರಲ್ಲಿ 6 ಪದಕ ಗೆದ್ದಿದ್ದು, ಈ ವರೆಗಿನ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಮೀರಾಬಾಯಿ ಚನು ಮತ್ತು ರವಿಕುಮಾರ್ ದಹಿಯಾ ಬೆಳ್ಳಿ, ಬಜರಂಗ್ ಪೂನಿಯಾ, ಪಿವಿ ಸಿಂಧು ಮತ್ತು ಹಾಕಿ ಪುರುಷರ ತಂಡ ಕಂಚಿ ಗೆದ್ದರು.
ಟೋಕಿಯೋ ಒಲಿಂಪಿಕ್ಸ್ನ ಸಂಪೂರ್ಣ ಪದಕ ಪಟ್ಟಿ ಇಲ್ಲಿದೆ.
- " class="align-text-top noRightClick twitterSection" data="">