ಮಲಪ್ಪುರಂ(ಕೇರಳ): ದೇಶದ ಅತ್ಯಂತ ಪ್ರಮುಖ ಫುಟ್ಬಾಲ್ ಟ್ರೋಫಿಗಳಲ್ಲಿ ಒಂದಾದ ಸಂತೋಷ್ ಟ್ರೋಫಿಯನ್ನು ಕೇರಳ ಗೆದ್ದುಕೊಂಡಿದೆ. ಮಲಪ್ಪುರಂನ ಮಂಜೇರಿ ಪಯ್ಯನಾಡ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಅಂತಿಮವಾಗಿ ಪೆನಾಲ್ಟಿಶೂಟ್ ಮೂಲಕ 5-4 ಗೋಲುಗಳ ಅಂತರದಲ್ಲಿ ಪಶ್ಚಿಮ ಬಂಗಾಳವನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ಕೇರಳ ಗೆದ್ದುಕೊಂಡಿತು.
1993ರಿಂದ ಇದೇ ಮೊದಲು ತನ್ನ ನೆಲದಲ್ಲೇ ಕೇರಳ ಟ್ರೋಫಿ ಗೆದ್ದಿದೆ. ಕೇರಳಕ್ಕೆ ಪ್ರಬಲ ಸ್ಪರ್ಧೆ ನೀಡಿದ್ದ ಪಶ್ಚಿಮ ಬಂಗಾಳ ತಂಡ 46 ಬಾರಿ ಸಂತೋಷ್ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದ್ದು, 32 ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ ಎಂಬುದೊಂದು ದಾಖಲೆ.
-
THAT WINNING MOMENT 🤩#KERWB ⚔️ #HeroSantoshTrophyFinal 💥 #HeroSantoshTrophy 🏆 #IndianFootball ⚽️ pic.twitter.com/XNE8WDGgA9
— Indian Football Team (@IndianFootball) May 2, 2022 " class="align-text-top noRightClick twitterSection" data="
">THAT WINNING MOMENT 🤩#KERWB ⚔️ #HeroSantoshTrophyFinal 💥 #HeroSantoshTrophy 🏆 #IndianFootball ⚽️ pic.twitter.com/XNE8WDGgA9
— Indian Football Team (@IndianFootball) May 2, 2022THAT WINNING MOMENT 🤩#KERWB ⚔️ #HeroSantoshTrophyFinal 💥 #HeroSantoshTrophy 🏆 #IndianFootball ⚽️ pic.twitter.com/XNE8WDGgA9
— Indian Football Team (@IndianFootball) May 2, 2022
ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಸಮಯದ ಅಂತ್ಯಕ್ಕೆ ಗೋಲು ಗಳಿಸಲು ವಿಫಲವಾದವು. ನಂತರ ಹೆಚ್ಚುವರಿ ಸಮಯದಲ್ಲಿ ಪಶ್ಚಿಮ ಬಂಗಾಳದ ದಿಲೀಪ್ ಓರಾನ್ 97ನೇ ನಿಮಿಷದಲ್ಲಿ ಒಂದು ಗೋಲು ಹೊಡೆದರೆ, 116ನೇ ನಿಮಿಷದಲ್ಲಿ ಕೇರಳ ತಂಡದ ಪರ ನೌಫಾಲ್ ಪಿಎನ್ ಅವರು ಗೋಲು ಗಳಿಸಿ, ಉಭಯ ತಂಡಗಳು ಸಮಬಲಕ್ಕೆ ಬರಲು ಕಾರಣವಾದರು. ಈ ಹಿನ್ನೆಲೆಯಲ್ಲಿ ನಡೆದ ಪೆನಾಲ್ಟಿ ಶೂಟ್ನಲ್ಲಿ 5-4 ಗೋಲುಗಳ ಅಂತರದಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಕೇರಳ ಸೋಲಿಸಿದೆ.
ಇದನ್ನೂ ಓದಿ: ಸನ್ ರೈಸರ್ಸ್ಗೆ ಏಟಿನ ಮೇಲೆ ಏಟು.. ಮತ್ತೆ ಸ್ಟಾರ್ ಆಲ್ರೌಂಡರ್ ತಂಡದಿಂದ ಹೊರಕ್ಕೆ