ETV Bharat / sports

ಪ್ರಧಾನಿ ಮೋದಿ ಕಾಲೆಳೆದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್.. ಅದಕ್ಕೆ ಕಾರಣವೂ ಇದೆ.. - ಪ್ರಧಾನಿ ನರೇಂದ್ರ ಮೋದಿ ಆದೇಶ

ಇಂದಿನ ಧ್ಯಾನ್​​ಚಂದ್ ಅವಾರ್ಡ್ ನಿರ್ಧಾರ ಮೊದಲ ಹೆಜ್ಜೆಯಾಗಿದೆ. ಇದು ಹೀಗೆ ಮುಂದುವರೆಯಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೊಟೆರಾ ಕ್ರೀಡಾಂಗಣವನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿದ ಮೋದಿಯ ಈ ಹಿಂದಿನ ನಿರ್ಧಾರಕ್ಕೆ ಟಾಂಗ್​ ನೀಡಿದ್ದಾರೆ..

Irfan Pathan Reaction To Renaming Rajiv Gandhi Khel Rathna Award
ಇರ್ಫಾನ್ ಪಠಾಣ್
author img

By

Published : Aug 6, 2021, 5:17 PM IST

Updated : Aug 6, 2021, 5:34 PM IST

ನವದೆಹಲಿ : ಭಾರತೀಯ ಕ್ರೀಡಾಪಟುಗಳಿಗೆ ನೀಡಲಾಗುವ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮೇಜರ್ ಧ್ಯಾನ್ ಚಂದ್ ಖೇಲ್‌ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿ ಆದೇಶ ನೀಡಿದ್ದಾರೆ.

Irfan Pathan Reaction To Renaming Rajiv Gandhi Khel Rathna Award
ಇರ್ಫಾನ್ ಪಠಾಣ್

ಇದನ್ನೂ ಓದಿ: ಮರು ನಾಮಕರಣ: ರಾಜೀವ್​ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇನ್ನು ಮುಂದೆ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ'

ಈ ಆದೇಶ ಇದೀಗ ಪರ ಮತ್ತು ವಿರೊಧ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಸಾಲಿಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಹೊರತಾಗಿಲ್ಲ. ಮರುನಾಮಕರಣದ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಈ ವಿಚಾರವಾಗಿ​ ಸಾಮಾಜಿಕ ಜಾಲತಾಣವಾದ ತಮ್ಮ ಟ್ವಿಟರ್​ ಗೋಡೆಯಲ್ಲಿ ಟ್ವೀಟ್​ ಮಾಡುವ ಮೂಲಕ ಪ್ರಧಾನಿ ಮೋದಿ ಕಾಲೆಳೆದಿದ್ದಾರೆ.

  • Absolutely welcome this move. Sportsman getting recognition and award being named after him or her. Hopefully start of many such things in sports #DhyanChandAward #dhyanchand ji

    — Irfan Pathan (@IrfanPathan) August 6, 2021 " class="align-text-top noRightClick twitterSection" data=" ">

ಧ್ಯಾನ್ ಚಂದ್ ಸ್ಮರಣಾರ್ಥ ಮೇಜರ್ ಧ್ಯಾನ್ ಚಂದ್ ಖೇಲ್‌ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಇತ್ತೀಚೆಗೆ ಕ್ರೀಡಾಪಟುಗಳಿಗೆ ಆಸಕ್ತಿ ಮತ್ತು ವಿಶ್ವಾಸ ತುಂಬುವ ಸಲುವಾಗಿ ಹಾಗೂ ಕ್ರೀಡೆಯಲ್ಲಿ ಸಾಧನೆಗೈದ ಸಾಧಕರ ಹೆಸರನ್ನು ಪ್ರಶಸ್ತಿಗೆ ಇಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

  • Hopefully in the future sports stadium names will be after sportsmen too.

ಇಂದಿನ ಧ್ಯಾನ್​​ಚಂದ್ ಅವಾರ್ಡ್ ನಿರ್ಧಾರ ಮೊದಲ ಹೆಜ್ಜೆಯಾಗಿದೆ. ಇದು ಹೀಗೆ ಮುಂದುವರೆಯಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೊಟೆರಾ ಕ್ರೀಡಾಂಗಣವನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿದ ಮೋದಿಯ ಈ ಹಿಂದಿನ ನಿರ್ಧಾರಕ್ಕೆ ಟಾಂಗ್​ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ: ಮೊಟೆರಾ ಸ್ಟೇಡಿಯಂ ಹೆಸರು ಬದಲಿಸಿ ನರೇಂದ್ರ ಮೋದಿ ಕ್ರೀಡಾಂಗಣ ಎಂದು ನಾಮಕರಣ

ಅಹಮದಾಬಾದ್‌ನ ಮೊಟೆರಾ ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರು ನಾಮಕರಣ ಮಾಡಿದಾಗ ಹಲವಾರು ಸಾಮಾಜಿಕ ಜಾಲತಾಣ ಸೇರಿದಂತೆ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆ ಮೋದಿ ಕ್ರೀಡಾಂಗಣ ಎಂದು ಹೆಸರು ಬದಲಾಯಿಸಲಾಯಿತು.

Last Updated : Aug 6, 2021, 5:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.