ಭುವನೇಶ್ವರ (ಒಡಿಶಾ): ಇಂದು ಬಿ ಪೋಲ್ನ ಜರ್ಮನಿ ಮತ್ತು ಬೆಲ್ಜಿಯಂ ಹಾಗೂ ಕೊರಿಯಾ ಮತ್ತು ಜಪಾನ್ ನಡುವೆ ಪಂದ್ಯಗಳು ನಡೆದವು. ಕೊರಿಯಾ 2-1 ಗೋಲ್ನಿಂದ ಜಪಾನ್ ವಿರುದ್ಧ ಗೆಲುವು ಸಾಧಿಸಿತು. ಜರ್ಮನಿ ಮತ್ತು ಬೆಲ್ಜಿಯಂ 2-2 ಗೋಲ್ನಿಂದ ಡ್ರಾದಲ್ಲಿ ಅಂತ್ಯವಾಯಿತು ಇದರಿಂದಾಗಿ ಜಪಾನ್ ಎಫ್‌ಐಎಚ್ ಹಾಕಿ ವಿಶ್ವಕಪ್‌ನಿಂದ ಹೊರಬಿದ್ದಿದೆ.
-
Korea's relentless attack after going a goal down has paid off. They have defeated Japan in this Asian derby.
— Hockey India (@TheHockeyIndia) January 17, 2023 " class="align-text-top noRightClick twitterSection" data="
🇰🇷KOR 2-1 JPN🇯🇵#KORvsJPN #HockeyIndia #IndiaKaGame #HWC2023 #HockeyWorldCup2023 #StarsBecomeLegends @CMO_Odisha @sports_odisha @Media_SAI @IndiaSport pic.twitter.com/koEdbT4HHm
">Korea's relentless attack after going a goal down has paid off. They have defeated Japan in this Asian derby.
— Hockey India (@TheHockeyIndia) January 17, 2023
🇰🇷KOR 2-1 JPN🇯🇵#KORvsJPN #HockeyIndia #IndiaKaGame #HWC2023 #HockeyWorldCup2023 #StarsBecomeLegends @CMO_Odisha @sports_odisha @Media_SAI @IndiaSport pic.twitter.com/koEdbT4HHmKorea's relentless attack after going a goal down has paid off. They have defeated Japan in this Asian derby.
— Hockey India (@TheHockeyIndia) January 17, 2023
🇰🇷KOR 2-1 JPN🇯🇵#KORvsJPN #HockeyIndia #IndiaKaGame #HWC2023 #HockeyWorldCup2023 #StarsBecomeLegends @CMO_Odisha @sports_odisha @Media_SAI @IndiaSport pic.twitter.com/koEdbT4HHm
ಕೊರಿಯಾ vs ಜಪಾನ್: ಮಾಡು ಇಲ್ಲವೇ ಮಡಿ ಬಿ ಗುಂಪಿನ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾ ಏಷ್ಯಾದ ಪ್ರತಿಸ್ಪರ್ಧಿ ಜಪಾನ್ ವಿರುದ್ಧ ಸೆಣಸಿದೆ. ಪಂದ್ಯಾವಳಿಯಲ್ಲಿ ಎರಡೂ ತಂಡಗಳಿಗೆ ಹೆಚ್ಚು ಸ್ಕೋರ್ ಮಾಡುವ ಆಗತ್ಯ ಇತ್ತು. ಕಾರಣ ಎರಡೂ ತಂಡಗಳು ಅಂಕ ಪಟ್ಟಿಯಲ್ಲಿ ಕೆಳಸ್ಥಾನದಲ್ಲಿದ್ದವು ಮತ್ತು ಇಂದಿನ ಪಂದ್ಯದಲ್ಲಿ ಸೋತ ತಂಡ ವಿಶ್ವಕಪ್‌ನಿಂದ ಹೊರಗುಳಿಯಲಿತ್ತು.
ಜಪಾನ್ ಮೊದಲ ನಿಮಷದಲ್ಲೇ ಗೋಲ್ ಗಳಿಸಿ ಮುನ್ನಡೆ ಸಾಧಿಸಿತು. ಆದರೆ, ಈ ಮುನ್ನಡೆ ಕೇವಲ 7 ನಿಮಿಷ ಮಾತ್ರ ಉಳಿಸಿಕೊಂಡಿತು. 8 ನೇ ನಿಮಿಷದಲ್ಲಿ ಕೊರಿಯ ಗೋಲ್ ಗಳಿಸಿ ಜಪಾನ್ನ ಮುನ್ನಡೆಯನ್ನು ಸಮಬಲ ಮಾಡಿಕೊಂಡಿತು. ಎರಡನೇ 15 ನಿಮಿಷದ ಆಟದ ಅವಧಿಯಲ್ಲಿ 23ನೇ ನಿಮಿಷಕ್ಕೆ ಕೊರಿಯ ಎರಡನೇ ಗೋಲ್ ಗಳಿಸಿತು.
ಆದರೆ, ನಂತರ ಎರಡು ತಂಡಗಳಿಗೆ ಫೆನಾಲ್ಟಿ ಅವಕಾಶಗಳು ಸಿಕ್ಕಿದರೂ ಗೋಲ್ ಗಳಿಸಲಾಗಲಿಲ್ಲ. ಎರಡೂ ತಂಡ ವಿಶ್ವಕಪ್ನಲ್ಲಿ ಉಳಿಯಲು ಕದನವನ್ನೇ ಮಾಡಿದರು. ಜಪಾನ್ ಸಮಬಲ ಸಾಧಿಸಲು ಎಷ್ಟೇ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಈ ಹಿಂದೆ ಕೊರಿಯಾ ಮತ್ತು ಜಪಾನ್ 19 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದವು. ಆದರೆ ಹೆಚ್ಚು ಗೆಲುವು ಕೊರಿಯಾದ್ದೆ ಆಗಿದೆ. ಜಪಾನ್ ಕೇವಲ ಎರಡರಲ್ಲಿ ಗೆಲುವು ಕಂಡಿದೆ.
-
An exciting game of hockey ends in a blazing draw 🔥
— Hockey India (@TheHockeyIndia) January 17, 2023 " class="align-text-top noRightClick twitterSection" data="
🇩🇪GER 2-2 BEL🇧🇪#GERvsBEL #HockeyIndia #IndiaKaGame #HWC2023 #HockeyWorldCup2023 #StarsBecomeLegends @CMO_Odisha @sports_odisha @IndiaSports @Media_SAI @BELRedLions @DHB_hockey pic.twitter.com/sWNBFQgmfO
">An exciting game of hockey ends in a blazing draw 🔥
— Hockey India (@TheHockeyIndia) January 17, 2023
🇩🇪GER 2-2 BEL🇧🇪#GERvsBEL #HockeyIndia #IndiaKaGame #HWC2023 #HockeyWorldCup2023 #StarsBecomeLegends @CMO_Odisha @sports_odisha @IndiaSports @Media_SAI @BELRedLions @DHB_hockey pic.twitter.com/sWNBFQgmfOAn exciting game of hockey ends in a blazing draw 🔥
— Hockey India (@TheHockeyIndia) January 17, 2023
🇩🇪GER 2-2 BEL🇧🇪#GERvsBEL #HockeyIndia #IndiaKaGame #HWC2023 #HockeyWorldCup2023 #StarsBecomeLegends @CMO_Odisha @sports_odisha @IndiaSports @Media_SAI @BELRedLions @DHB_hockey pic.twitter.com/sWNBFQgmfO
ಜಪಾನ್ ತಂಡ: ಯಮಸಾಕಿ ಕೋಜಿ, ಯಮಡಾ ಶೋಟಾ, ಕವಾಮುರಾ ಯುಸುಕೆ, ಕವಾಹರಾ ಯಮಾಟೊ, ತನಕಾ ಸೆರೆನ್, ಫುಕುಡಾ ಕೆಂಟಾರೊ, ತಕಡೆ ಟೈಕಿ, ನಿವಾ ಟಕುಮಾ, ನಾಗೈ ಯುಮಾ, ಫುಜಿಶಿಮಾ ರೈಕಿ, ನಾಗಯೋಶಿ ಕೆನ್, ಸೈಟೊ ಹಿರೋ, ಕ್ಯಾಟೊ ರ್ಯೋಸಿ, ಒಕಾ ರಯೋಸಿ, ಟಿ ಓಕಾ ರಯ್ಸಾಕಿ , ಕುರೋಡಾ ಕಿಶೋ, ಓಚಿಯಾ ಹಿರೋಮಾಸ, ಕೊಬಯಾಶಿ ಮಸಾಟೊ, ಯೋಶಿಕಾವಾ ತಕಾಶಿ
ದಕ್ಷಿಣ ಕೊರಿಯಾ ತಂಡ: ಕಿಮ್ ಜೇಹಿಯೋನ್, ಕಿಮ್ ಹ್ಯೋನ್‌ಹಾಂಗ್, ಕಿಮ್ ಕ್ಯುಬಿಯೋಮ್, ಲೀ ಗ್ಯಾಂಗ್‌ಸನ್, ಲೀ ನಮ್ಯೋಂಗ್, ಜಂಗ್ ಮಂಜೇ, ಹ್ವಾಂಗ್ ಟೇಲ್, ಲೀ ಜಂಗ್‌ಜುನ್, ಸಿಯೋ ಇನ್ವೂ, ಜಿ ವೂ ಚಿಯೋನ್, ಲೀ ಹೈಸೆಯುಂಗ್, ಕಿಮ್ ಜೇಹಾನ್, ಕಿಮ್ ಸುಂಗ್‌ಹೂನ್, ಜಿಯೋಂಗ್ ಸೆವೂನ್ ಕಿಮ್ ಹ್ಯೊಂಗ್‌ಜಿನ್, ಜಂಗ್ ಜೊಂಗ್‌ಹ್ಯುನ್, ಜಿಯೋನ್ ಬ್ಯುಂಗ್‌ಜಿನ್, ಯಾಂಗ್ ಜಿಹುನ್, ಲೀ ಜುಯುಂಗ್ 3
-
Here is how the pool standings look after day 5️⃣ of FIH Odisha Hockey Men's World Cup 2023 Bhubaneswar-Rourkela#HockeyIndia #IndiaKaGame #HWC2023 #HockeyWorldCup2023 #StarsBecomeLegends @CMO_Odisha @sports_odisha @Media_SAI @IndiaSports pic.twitter.com/ej1iIqK1OE
— Hockey India (@TheHockeyIndia) January 17, 2023 " class="align-text-top noRightClick twitterSection" data="
">Here is how the pool standings look after day 5️⃣ of FIH Odisha Hockey Men's World Cup 2023 Bhubaneswar-Rourkela#HockeyIndia #IndiaKaGame #HWC2023 #HockeyWorldCup2023 #StarsBecomeLegends @CMO_Odisha @sports_odisha @Media_SAI @IndiaSports pic.twitter.com/ej1iIqK1OE
— Hockey India (@TheHockeyIndia) January 17, 2023Here is how the pool standings look after day 5️⃣ of FIH Odisha Hockey Men's World Cup 2023 Bhubaneswar-Rourkela#HockeyIndia #IndiaKaGame #HWC2023 #HockeyWorldCup2023 #StarsBecomeLegends @CMO_Odisha @sports_odisha @Media_SAI @IndiaSports pic.twitter.com/ej1iIqK1OE
— Hockey India (@TheHockeyIndia) January 17, 2023
ಜರ್ಮನಿ vs ಬೆಲ್ಜಿಯಂ: ಕ್ವಾರ್ಟರ್‌ಫೈನಲ್ ಸ್ಥಾನವನ್ನು ಪಣಕ್ಕಿಟ್ಟು, ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ತಂಡಗಳು ಮುಖಾಮುಖಿಯಾದವು. ಬೆಲ್ಜಿಯಂ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ. ಇಂದಿನ ಜರ್ಮನಿ ಬೆಲ್ಜಿಯಂ ಮುಖಾಮುಖಿ ಡ್ರಾನಲ್ಲಿ ಅಂತ್ಯವಾಯಿತು. ಎರಡೂ ತಂಡಗಳು ಮುಂದಿನ ಪಂದ್ಯದ ಮೂಲಕ ಕ್ವಾರ್ಟರ್ ಫೈನಲ್ ಸ್ಥಾನ ಭದ್ರ ಪಡಿಸಿಕೊಳ್ಳಲಿದೆ.
ಬೆಲ್ಜಿಯಂ 9ನೇ ನಿಮಿಷದಲ್ಲೇ ಗೋಲ್ಗಳಿಸಿತು. ಮೊದಲ 15 ನಿಮಷ ಒಂದು ಗೋಲ್ ಬಿಟ್ಟರೆ ನೀರಸ ಹೊರಾಟ ಕಂಡು ಬಂತು. ಎರಡನೇ ಕ್ವಾರ್ಟರ್ನಲ್ಲಿ ಜರ್ಮನಿ ಗೋಲ್ಗಳಿಸಿ ಸಮಬಲ ಸಾಧಿಸಿತು. ಈ ಕ್ವಾರ್ಟರ್ ಕೂಡ ಹೋರಾಟ ಕಂಡು ಬರಲಿಲ್ಲ. ಮೂರನೇ 15 ನಿಮಿಷದ ಆಟ ಒಂದು ಗ್ರೀನ್ ಕಾರ್ಡ್ ಬಿಟ್ಟರೆ ಗೋಲ್ ಬಳಿಯೂ ಬೆಂಡು ಹೋಗಲಿಲ್ಲ. ಕೊನೆಯ 15 ನಿಮಿಷದಲ್ಲಿ ಆಟ ಬಿರುಸು ಪಡೆದುಕೊಂಡಿತು. 52ನೇ ನಿಮಿಷದಲ್ಲಿ ಜರ್ಮನಿ ಮುನ್ನಡೆ ಪಡೆದರೆ, 54ನೇ ನಿಮಿಷಕ್ಕೆ ಸಮಬಲ ವಾಯಿತು. ನಂತರ ಗೋಲ್ಗಾಗಿ ನಡೆದ ಹೋರಾಟದಲ್ಲಿ ಯಾರಿಗೂ ಸಿಗದೇ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.
ಜರ್ಮನಿ ತಂಡ: ಸ್ಟ್ಯಾಡ್ಲರ್ ಅಲೆಕ್ಸಾಂಡರ್, ಜೀನ್ ಡ್ಯಾನೆಬರ್ಗ್, ಮಥಿಯಾಸ್ ಮುಲ್ಲರ್, ಲುಕಾಸ್ ವಿಂಡ್‌ಫೆಡರ್, ಟಾಮ್ ಗ್ರಾಮ್‌ಬುಶ್, ಟಿಯೊ ಹಿನ್ರಿಚ್ಸ್, ಗೊನ್ಜಾಲೊ ಪೆಯಿಲಟ್, ಮೊರಿಟ್ಜ್ ಲುಡ್ವಿಗ್, ಮ್ಯಾಟ್ಸ್ ಗ್ರಾಮ್‌ಬುಷ್, ಮಾರ್ಟಿನ್ ಝ್ವಿಕರ್, ಮೊರಿಟ್ಜ್ ಝ್ವಿಕರ್, ಮೊರಿಟ್ಜ್ ಜುಲ್ಲರ್ ನಿಕ್ಲಾಸ್ ವೆಲೆನ್, ಕ್ರಿಸ್ಟೋಫರ್ ರುಹ್ರ್, ಜಸ್ಟಸ್ ವೀಗಾಂಡ್, ಮಾರ್ಕೊ ಮಿಲ್ಟ್ಕೌ, ಥೀಸ್ ಪ್ರಿಂಜ್
ಬೆಲ್ಜಿಯಂ ತಂಡ: ಲೂಯಿಸ್ ವ್ಯಾನ್ ಡೊರೆನ್, ವಿನ್ಸೆಂಟ್ ವನಾಶ್, ಆರ್ಥರ್ ವ್ಯಾನ್ ಡೊರೆನ್, ಗೌಥಿಯರ್ ಬೊಕಾರ್ಡ್, ಅಲೆಕ್ಸಾಂಡರ್ ಹೆಂಡ್ರಿಕ್ಸ್, ಆರ್ಥರ್ ಡಿ ಸ್ಲೋವರ್, ಲೊಯಿಕ್ ಲುಯ್‌ಪಾರ್ಟ್,ಜಾನ್-ಜಾನ್ ಡೊಹ್ಮೆನ್, ಫೆಲಿಕ್ಸ್ ಡೆನಾಯರ್, ಸೈಮನ್ ಗೊಗ್ನಾರ್ಡ್, ಆಂಥೋನಿ ಗೊಗ್ನಾರ್ಡ್.
ಇದನ್ನೂ ಓದಿ: ಹಾಕಿ ವಿಶ್ವಕಪ್: ಕ್ವಾರ್ಟರ್ ಫೈನಲ್ ಪಕ್ಕಾ ಮಾಡಿಕೊಂಡ ನೆದರ್ಲ್ಯಾಂಡ್ಸ್