ETV Bharat / sports

ಕ್ರಾಸ್​ ಓವರ್​ನಲ್ಲಿ ಭಾರತಕ್ಕೆ ಕಿವೀಸ್​ ಎದುರಾಳಿ: ಗೆದ್ದರಷ್ಟೇ ಪ್ರಶಸ್ತಿ ಸುತ್ತಿಗೆ.. - india newzealand hockey match

ಭಾರತ ಮತ್ತು ಕಿವೀಸ್ ನಡುವೆ ಪ್ರೀ ಕ್ವಾರ್ಟರ್​ ಫೈನಲ್​ ಇಂದು ಸಂಜೆ 7ಕ್ಕೆ ನಡೆಯಲಿದ್ದು, ಗೆದ್ದ ತಂಡ ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಗಳಿಸಲಿದೆ.

hockey-world-cup
ಕ್ರಾಸ್​ ಓವರ್​ನಲ್ಲಿ ಕಿವೀಸ್​ ಎದುರಾಳಿ
author img

By

Published : Jan 22, 2023, 5:35 PM IST

ಭುವನೇಶ್ವರ(ಒಡಿಶಾ): ಡಿ ಗುಂಪಿನಲ್ಲಿ ಎರನೇ ಸ್ಥಾನ ಗಳಿಸಿದ ಭಾರತ ಇಂದು ನ್ಯೂಜಿಲೆಂಡ್ ವಿರುದ್ಧ ಕ್ರಾಸ್​ ಓವರ್​ ಪಂದ್ಯದಲ್ಲಿ ಗೆದ್ದರೆ ಮಾತ್ರ ಎಂಟರ ಗಟ್ಟಕ್ಕೆ ಪ್ರವೇಶ ಪಡೆಯಲಿದೆ. ಇಂದಿನ ಪ್ರಿ ಕ್ವಾರ್ಟರ್​ ಫೈನಲ್​ನಲ್ಲಿ ಕಿವೀಸನ್ನು ​ಸೋಲಿಸಿದರೆ ಕ್ವಾರ್ಟ​ರ್ ಫೈನಲ್​ನಲ್ಲಿ ಹಾಲಿ ಚಾಂಪಿಯನ್​ ಬೆಲ್ಜಿಯಂ ಎದುರಾಗಲಿದೆ. ಇಂದಿನ ಪಂದ್ಯದಲ್ಲಿ ಸೋಲನುಭವಿಸಿದ ತಂಡ ಪ್ರಶಸ್ತಿ ಸ್ಪರ್ಧೆಯಿಂದ ಹೊರ ಬೀಳಲಿದೆ.​

ಚೊಚ್ಚಲ ಬಾರಿಗೆ ವಿಶ್ವಕಪ್​ನಲ್ಲಿ ಭಾಗವಹಿಸಿದ್ದ ವೇಲ್ಸ್​ ಎದುರು ಭಾರತ ನೀಡಿದ ಸಾಧಾರಣ ಪ್ರದರ್ಶನದಿಂದಾಗಿ ನೇರ ಎಂಟರ ಘಟ್ಟದ ಪ್ರವೇಶವನ್ನು ಕಳೆದು ಕೊಂಡಿತು. ಕಳೆದ ಗ್ರೂಪ್ ಪಂದ್ಯಗಳಲ್ಲಿ ಇಂಗ್ಲೆಂಡ್​ ವಿರುದ್ಧ ಸಮಬಲದ ಸಾಧನೆ ಮಾಡಿದೆ. ಫಿಟ್​ ಆಗಿರುವ ತಂಡಕ್ಕೆ ಗೆಲುವಿನ ಅಂಶ ಹೆಚ್ಚಿದೆ. ನ್ಯೂಜಿಲೆಂಡ್​​ ಎದುರಿನ ಹೆಡ್​ ಟು ಹೆಡ್​ ಪಂದ್ಯದಲ್ಲಿ ಭಾರತ ಸಾರ್ವಭೌಮವಾಗಿ ಕಾಣುತ್ತಿದೆ.

ಭಾರತ ಮತ್ತು ಕಿವೀಸ್​ ನಡುವೆ 104 ಪಂದ್ಯಗಳು ನಡೆದಿದೆ. ಇದರಲ್ಲಿ ಭಾರತ 58 ರಲ್ಲಿ, ನ್ಯೂಜಿಲೆಂಡ್​ 29 ರಲ್ಲಿ ಗೆದ್ದಿದೆ. ಉಳಿದಂತೆ 17 ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿವೆ. ಕೊನೆಯ ಐದು ಮುಖಾಮುಖಿಯ ಅಂಕಿ ಅಂಶದಲ್ಲೂ ಭಾರತ ಉತ್ತಮ ಪ್ರದರ್ಶನ ನೀಡಿದೆ. 4ರಲ್ಲಿ ಗೆದ್ದಿರುವ ಬ್ಲೂ ಬಾಯ್ಸ್​ ಒಂದನ್ನು ಕಿವಿಸ್​ಗೆ ಬಿಟ್ಟುಕೊಟ್ಟಿದ್ದಾರೆ. ಇನ್ನು, ಈವರೆಗೆ ವಿಶ್ವ ಕಪ್​ನಲ್ಲಿ 6 ಬಾರಿ ಉಭಯ ತಂಡಗಳು ಎದುರಾಗಿದ್ದು, ನಾಲ್ಕರಲ್ಲಿ ಭಾರತ ಮತ್ತು ಎರಡರಲ್ಲಿ ನ್ಯೂಜಿಲೆಂಡ್​ ಗೆದ್ದಿದೆ. ಅಂಕಿ ಅಂಶಗಳ ಪ್ರಕಾರ ಭಾರತ ಗೆಲ್ಲುವ ಫೇವ್​ರೇಟ್​ ಆಗಿದೆ.

ಸಿ ಗುಂಪಿನಲ್ಲಿದ್ದ ಕಿವೀಸ್​ 1 ಗೆಲುವು ಮತ್ತು ಎರಡು ಸೋಲಿನಿಂದ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಸದ್ಯ ವಿಶ್ವರ್‍ಯಾಂಕಿಂಗ್​ನ 12ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ವಿರುದ್ಧ 6ನೇ ಶ್ರೇಯಾಂಕದಲ್ಲಿರುವ ಭಾರತ ಸೆಣಸುತ್ತಿದೆ. ಈ ವರೆಗಿನ ವಿಶ್ವಕಪ್​ ಪಂದ್ಯಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿರದ ಕಿವೀಸ್​ ಈ ಬಾರಿಯೂ ಗುಂಪು ಪಂದ್ಯಗಳಲ್ಲಿ ಹೇಳುವಂತಹ ಆಟ ನೀಡಿಲ್ಲ. ಅಂಕಿ ಅಂಶ ಮತ್ತು ಕಿವೀಸ್​ನ ಪ್ರದರ್ಶನದ ಪ್ರಕಾರ ಇಂದು ಭಾರತಕ್ಕೆ ಗೆಲುವಿನ ರೇಟಿಂಗ್​ ಜಾಸ್ತಿ ಇದೆ.

ಹಾರ್ದಿಕ್​ ಸಿಂಗ್​ ಹೊರಕ್ಕೆ: ಗುಂಪು ಹಂತದಲ್ಲಿ ಭಾರತದ ಪರ ಉತ್ತಮ ಪ್ರದರ್ಶನ ನೀಡಿದ್ದ ಮಿಡ್​ ಫೀಲ್ಡರ್​ ಹಾರ್ದಿಕ್​ ಸಿಂಗ್​ ಅಸ್ಥಿರಜ್ಜು ನೋವಿನ ಸಮಸ್ಯೆಯಿಂದ ವಿಶ್ವಕಪ್​ ಪಂದ್ಯದಿಂದ ಹೊರಗುಳಿದಿದ್ದಾರೆ. ಹಾರ್ದಿಕ್​ ಬದಲಿ ಆಟಗಾರರಾಗಿ ರಾಜ್​ ಕುಮಾರ್​ ಪಾಲ್​ರನ್ನು ಆಡಿಸುವ ಸಾಧ್ಯತೆ ಇದೆ. ಇಂಗ್ಲೆಂಡ್​ ವಿರುದ್ಧದ ಗುಂಪಿನ ಎರಡನೇ ಪಂದ್ಯದಲ್ಲಿ ಕೊನೆಯ ಐದು ನಿಮಿಷದ ಆಟದ ವೇಳೆ ಗಾಯಗೊಂಡು ಹೊರಗುಳಿದಿದ್ದರು. ಮೂರನೇ ಪಂದ್ಯಕ್ಕೆ ಚೇತರಿಸಿ ಕೊಳ್ಳದ ಕಾರಣ ಹೊರಗುಳಿದಿದ್ದರು. ಈಗ ಸಂಪೂರ್ಣ ವಿಶ್ವಕಪ್​ನಿಂದಲೇ ಹೊರಗುಳಿದಿದ್ದಾರೆ ಎನ್ನಲಾಗ್ತಿದೆ.

ಭಾರತ ತಂಡ: ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಭಿಷೇಕ್, ಸುರೇಂದರ್ ಕುಮಾರ್, ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಮನ್‌ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಕ್ರಿಶನ್ ಪಾಠಕ್, ನಿಲಮ್ ಸಂಜೀಪ್ ಕ್ಸೆಸ್, ಪಿಆರ್ ಶ್ರೀಜೇಶ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ವರುಣ್ ಕುಮಾರ್, ಆಕಾಶದೀಪ್ ಸಿಂಗ್, ಅಮಿತ್ ರೋಹಿದಾಸ್ , ವಿವೇಕ್ ಸಾಗರ್ ಪ್ರಸಾದ್, ಸುಖಜೀತ್ ಸಿಂಗ್.

ನ್ಯೂಜಿಲೆಂಡ್ ತಂಡ: ನಿಕ್ ವುಡ್ಸ್ (ನಾಯಕ), ಡೊಮ್ ಡಿಕ್ಸನ್, ಡೇನ್ ಲೆಟ್, ಸೈಮನ್ ಚೈಲ್ಡ್, ನಿಕ್ ರಾಸ್, ಸ್ಯಾಮ್ ಹಿಹಾ, ಕಿಮ್ ಕಿಂಗ್‌ಸ್ಟನ್, ಜೇಕ್ ಸ್ಮಿತ್, ಸ್ಯಾಮ್ ಲೇನ್, ಸೈಮನ್ ಯಾರ್‌ಸ್ಟನ್, ಏಡನ್ ಸರಿಕಾಯಾ, ಜೋ ಮಾರಿಸನ್, ಲಿಯಾನ್ ಹೇವರ್ಡ್, ಕೇನ್ ರಸ್ಸೆಲ್, ಬ್ಲೇರ್ ತಾರಂಟ್ , ಸೀನ್ ಫಿಂಡ್ಲೇ, ಹೇಡನ್ ಫಿಲಿಪ್ಸ್, ಚಾರ್ಲಿ ಮಾರಿಸನ್.

ಇದನ್ನೂ ಓದಿ: ಹಾಕಿ ವಿಶ್ವಕಪ್ 2023: ಎದುರಾಳಿ ವಿರುದ್ಧ ಸುಲಭವಾಗಿ ಗೆದ್ದ ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.