ಭುವನೇಶ್ವರ(ಒಡಿಶಾ): ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ ಚಾಂಪಿಯನ್ಶಿಪ್ನ ಪಂದ್ಯಗಳು ಇಂದು ಆರಂಭವಾಗಿದೆ. ಭುವನೇಶ್ವರದ ಕಳಿಂಗ ಸ್ಟೇಡಿಯಂ ಮತ್ತು ಒಡಿಶಾದ ರೂರ್ಕೆಲಾದಲ್ಲಿ ಹೊಸದಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ಪಂದ್ಯಾವಳಿಗಳು ನಡೆಯಲಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಮಧ್ಯಾಹ್ನ 1ಕ್ಕೆ ಪೋಲ್ನ ಅರ್ಜೆಂಟೀನಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಅರ್ಜೆಂಟೀನಾ 1-0 ಗೋಲ್ನಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಏ ಗುಂಪಿನ ಆಸ್ಟ್ರೇಯಿಯಾ ಮತ್ತು ಫ್ರಾನ್ಸ್ ನಡುವೆ ಎರಡನೇ ಪಂದ್ಯ ಮಧ್ಯಾಹ್ನ ಮೂರಕ್ಕೆ ಆರಂಭವಾಗಿದೆ.
ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ ಇಂದು ರೂರ್ಕೆಲಾದಲ್ಲಿ ನಡೆಯಲಿರುವ ಡಿ ಗುಂಪಿನ ತನ್ನ ಆರಂಭಿಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಮೈದಾನಕ್ಕಿಳಿಯಲಿದೆ. ಭಾರತ ಮತ್ತು ಸ್ಪೇನ್ ಹಾಕಿ ವಿಶ್ವಕಪ್ ಡಿ ಗುಂಪಿನ ಆಟ ಒಡಿಶಾದ ರೂರ್ಕೆಲಾದ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ರಾತ್ರಿ 7:00 ಗಂಟೆಗೆ ನಡೆಯಲಿದೆ. ಇಂದಿನ ನಂತರ ಭಾರತ ಜನವರಿ 15 ರಂದು ಇಂಗ್ಲೆಂಡ್ ಮತ್ತು ಜನವರಿ 19 ರಂದು ವೇಲ್ಸ್ ವಿರುದ್ಧ ಆಡಲಿದೆ.
ಏ ಮತ್ತು ಡಿ ಗುಂಪಿಗೆ ಇಂದು ಪಂದ್ಯ: ಪಂದ್ಯಾರಂಭದ ದಿನವಾದ ಇಂದು ನಾಲ್ಕು ದೇಶಗಳು ಸೆಣಸಾಟ ನಡೆಸಲಿವೆ. ಮಧ್ಯಾಹ್ನ 1 ಮತ್ತು 3ಕ್ಕೆ ಭುವನೇಶ್ವರದ ಕ್ರಿಡಾಂಗಣದಲ್ಲಿ ಎರಡು ಪಂದ್ಯಗಳು ಆಯೋಜನೆಗೊಂಡಿದೆ. ಮೊದಲ ಪಂದ್ಯ ಅರ್ಜೆಂಟೀನಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದಿದ್ದು, ಅರ್ಜೆಂಟೀನಾ 1-0 ಗೋಲ್ನಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಇಂದಿನ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ಮುಖಾಮುಖಿಯಾಗುತ್ತಿದೆ. ಸಂಜೆ ಡಿ ಗುಂಪಿನ ಎರಡು ಪಂದ್ಯಗಳು ಜರುಗಲಿದ್ದು ಮೊದಲು ಇಂಗ್ಲೆಂಡ್ ಮತ್ತು ವೇಲ್ಸ್ ಸೆಣಸಿದರೆ, ಎರಡನೇ ಪಂದ್ಯದಲ್ಲಿ ಭಾರತ ಸ್ಪೇನ್ನನ್ನು ಎದುರಿಸಲಿದೆ.
ಎರಡನೇ ಬಾರಿ ವಿಶ್ವಕಪ್ ಆಯೋಜನೆ: 15ನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. 44 ಪಂದ್ಯಗಳು ನಡೆಯಲಿದ್ದು, ಇದರಲ್ಲಿ 20 ಪಂದ್ಯಗಳು ರೂರ್ಕೆಲಾದಲ್ಲಿ ಮತ್ತು 24 ಪಂದ್ಯಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿವೆ. ಒಡಿಶಾ ಸತತ ಎರಡನೇ ಬಾರಿಗೆ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. 2018ರಲ್ಲಿಯೂ ಭಾರತವೇ ವಿಶ್ವಕಪ್‌ನ ಆತಿಥ್ಯ ವಹಿಸಿತ್ತು. ಎರಡು ಬಾರಿ ಹಾಕಿ ವಿಶ್ವಕಪ್ ಆಯೋಜಿಸಿ ಮೊದಲ ದೇಶ ಭಾರತವಾಗಿದೆ.
ಗುಂಪು ವಿಂಗಡಣೆ: ವಿಶ್ವದ 16 ದೇಶಗಳು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಅರ್ಜೆಂಟೀನಾ, ಪೂಲ್ ಬಿ ಯಲ್ಲಿ ಬೆಲ್ಜಿಯಂ, ಜಪಾನ್, ಕೊರಿಯಾ, ಜರ್ಮನಿ, ಪೂಲ್, ಸಿ ಯಲ್ಲಿ ನೆದರ್‌ಲ್ಯಾಂಡ್, ಚಿಲಿ, ಮಲೇಷ್ಯಾ, ನ್ಯೂಜಿಲ್ಯಾಂಡ್ ಮತ್ತು ಪೂಲ್ ಡಿ ನಲ್ಲಿ ಭಾರತ, ವೇಲ್ಸ್, ಸ್ಪೇನ್, ಇಂಗ್ಲೆಂಡ್ ತಂಡಗಳಿವೆ.
ಟೂರ್ನಿ ಮಾದರಿ ಹೇಗೆ?: 16 ತಂಡಗಳು ಕಪ್ಗಾಗಿ 17 ದಿನ ಸೆಣಸಾಟ ನಡೆಸಲಿದೆ. ಫೈನಲ್ ಪಂದ್ಯ ಸೇರಿಸದಂತೆ 44 ಪಂದ್ಯಗಳು ನಡೆಯಲಿದೆ. ಆಡಲಿರುವ 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿಲಾಗಿದೆ. ಪ್ರತೀ ತಂಡವೂ 3 ಪಂದ್ಯಗಳನ್ನಾಡಲಿದೆ. ಪಟ್ಟಿಯ ಅಗ್ರಸ್ಥಾನದಲ್ಲಿರುವ ತಂಡಗಳು ನೇರ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. ಎರಡು ಮತ್ತು ಮೋರನೇ ಸ್ಥಾನ ಪಡೆದ ತಂಡಗಳು ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ: ಒಡಿಶಾ ಸಿಎಂ ನವೀನ್ ಪಟ್ನಾಯಕ್ರಿಂದ 15ನೇ ಹಾಕಿ ವಿಶ್ವಕಪ್‌ಗೆ ಚಾಲನೆ