ETV Bharat / sports

ಹಾಕಿ ಇಂಡಿಯಾಗೆ ಡೇವಿಡ್ ಜಾನ್, ಬಿಜೆ ಕಾರಿಯಪ್ಪ, ಶಿವೇಂದ್ರ ಸಿಂಗ್ ತರಬೇತಿ

author img

By

Published : Mar 1, 2023, 1:29 PM IST

15ನೇ ಆವೃತ್ತಿಯ ವಿಶ್ವಕಪ್​ನ ಕ್ರಾಸ್​ ಓವರ್​ ಪಂದ್ಯದಲ್ಲಿ ಭಾರತಕ್ಕೆ ಸೋಲು - ಕೋಚ್​ ಹುದ್ದೆಗೆ ಗ್ರಹಾಂ ರೀಡ್ ರಾಜೀನಾಮೆ - ಡೇವಿಡ್ ಜಾನ್, ಬಿಜೆ ಕಾರಿಯಪ್ಪ, ಶಿವೇಂದ್ರ ಸಿಂಗ್ ಹಂಗಾಮಿ ತರಬೇತುದಾರರಾಗಿ ಆಯ್ಕೆ

Hockey India names David John, d, Shivendra Singh as interim coaches
ಹಾಕಿ ಇಂಡಿಯಾ

ಬೆಂಗಳೂರು: ಭಾರತದಲ್ಲಿ ನಡೆದ 15ನೇ ಆವೃತ್ತಿಯ ಎಫ್‌ಐಎಚ್ ಹಾಕಿ ವಿಶ್ವಕಪ್​ನಲ್ಲಿ ಇಂಡಿಯಾ ತಂಡ ಕ್ರಾಸ್​ ಓವರ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಸೋಲನುಭವಿಸಿತ್ತು. ಇದಾದ ನಂತರ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಹುದ್ದೆಗೆ ಗ್ರಹಾಂ ರೀಡ್ ರಾಜೀನಾಮೆ ಸಲ್ಲಿಸಿದ್ದರು. ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಬೇಕಿದ್ದ ಹೊತ್ತಲ್ಲೇ ರಾಜೀನಾಮೆ ನೀಡಿರುವುದು ಭಾರತ ತಂಡಕ್ಕೆ ಹಿನ್ನಡೆಯಾಗಿತ್ತು.

ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಕೆಳಗಿಳಿದ ನಂತರ ಆಸ್ಟ್ರೇಲಿಯಾದ ಡೇವಿಡ್ ಜಾನ್ ಮತ್ತು ಬಿಜೆ ಕಾರಿಯಪ್ಪ ಮತ್ತು ಶಿವೇಂದ್ರ ಸಿಂಗ್ ಅವರು ಭಾರತೀಯ ಪುರುಷರ ಹಾಕಿ ತಂಡದ ಹಂಗಾಮಿ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಫಿಸಿಯೋ ಡೇವಿಡ್ ಜಾನ್ ಹಾಕಿ ಇಂಡಿಯಾದ ಉನ್ನತ-ಕಾರ್ಯಕ್ಷಮತೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಟೋಕಿಯೊ 2020 ರ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಅಗತ್ಯವಿರುವ ಫಿಟ್‌ನೆಸ್ ಅನ್ನು ಪಡೆದುಕೊಳ್ಳುವ ಭಾರತೀಯ ತಂಡಗಳ ಸಾಮರ್ಥ್ಯದ ಮೇಲೆ ಅವರು ದೊಡ್ಡ ಪ್ರಭಾವವನ್ನು ಬೀರಿದ್ದರು.

ಶಿವೇಂದ್ರ ಸಿಂಗ್ ಅವರು ಭಾರತೀಯ ಪುರುಷರ ಹಿರಿಯ ತಂಡಕ್ಕೆ ಫಾರ್ವರ್ಡ್ ಆಟಗಾರರಾಗಿ ಆಡಿದ್ದರು ಮತ್ತು ಬಿಜೆ ಕಾರಿಯಪ್ಪ ಈ ಹಿಂದೆ ಜೂನಿಯರ್ ಭಾರತೀಯ ಹಾಕಿ ತಂಡಕ್ಕೆ ತರಬೇತುದಾರರಾಗಿದ್ದರು.

ಮುಂದಿನ ತಿಂಗಳು ರೂರ್ಕೆಲಾದಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ಮತ್ತು ವಿಶ್ವದ ನಂ 4 ತಂಡವಾದ ಆಸ್ಟ್ರೇಲಿಯಾ ವಿರುದ್ಧದ ಅವರ ಇಂಟರ್​ ನ್ಯಾಷನಲ್​ ಹಾಕಿ ಫೆಡರೇಶನ್​ (FIH) ಪ್ರೊ ಲೀಗ್ 2022-23 ಪಂದ್ಯಗಳಲ್ಲಿ ಭಾರತವನ್ನು ಮೂವರು ಮುನ್ನಡೆಸಲಿದ್ದಾರೆ. ಭಾರತ ತಲಾ ಎರಡು ಪಂದ್ಯಗಳಲ್ಲಿ ಇಬ್ಬರು ಎದುರಾಳಿಗಳನ್ನು ಎದುರಿಸಲಿದೆ. ಮುಂದಿನ ಹಾಕಿ ಒಲಂಪಿಕ್​ಗಾಗಿ 20 ಜನರ ತಂಡವನ್ನು ಭಾರತ ಸೂಚಿಸಿದೆ ಎಂದು ವೆಬ್​ಸೈಟ್​ನಲ್ಲಿ ಒಲಂಪಿಕ್​ ಸಂಸ್ಥೆ ಪ್ರಕಟಿಸಿದೆ.

ಅನುಭವಿ ಹರ್ಮನ್‌ಪ್ರೀತ್ ಸಿಂಗ್ ಅವರು ಭಾರತದ ನಾಯಕತ್ವದ ಸ್ಥಾನ ವಹಿಸಲಿದ್ದಾರೆ. ಅಮಿತ್ ರೋಹಿದಾಸ್ ಬದಲಿಗೆ ಹಾರ್ದಿಕ್ ಸಿಂಗ್ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ. ಅನುಭವಿ ಗೋಲ್‌ ಕೀಪರ್ ಪಿಆರ್ ಶ್ರೀಜೇಶ್ ಕೂಡ ತಂಡದ ಸದಸ್ಯರಾಗಿದ್ದಾರೆ. ಗೋಲ್‌ ಕೀಪರ್ ಕ್ರಿಶನ್ ಬಹದ್ದೂರ್ ಪಾಠಕ್ ಅವರು ಮದುವೆಯ ಕಾರಣ ಎಫ್‌ಐಹೆಚ್ ಪ್ರೊ ಲೀಗ್​ನಲ್ಲಿ ಆಡುತ್ತಿಲ್ಲ.

ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮನ್‌ಪ್ರೀತ್ ಸಿಂಗ್ ಡಿಫೆನ್ಸ್ ಆಡಲಿದ್ದು, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್ ಮತ್ತು ರಾಜ್ ಕುಮಾರ್ ಪಾಲ್ ಮಿಡ್‌ಫೀಲ್ಡ್ ಆಡಲಿದ್ದಾರೆ. ಫಾರ್ವರ್ಡ್‌ಗಳಲ್ಲಿ ಎಸ್ ಕಾರ್ತಿ, ಸುಖಜೀತ್ ಸಿಂಗ್, ಅಭಿಷೇಕ್ ಮತ್ತು ಗುರ್ಜಂತ್ ಇದ್ದಾರೆ.

ಎಫ್‌ಐಎಚ್ ಹಾಕಿ ಪ್ರೊ ಲೀಗ್‌ಗಾಗಿನ ಭಾರತೀಯ ತಂಡವು ಮಾರ್ಚ್ 6 ರವರೆಗೆ ಬೆಂಗಳೂರಿನ ಎಸ್‌ಎಐನಲ್ಲಿ ಅಭ್ಯಾಸವನ್ನು ಮುಂದುವರಿಸಲಿದ್ದು, ಪಂದ್ಯಗಳಿಗಾಗಿ ರೂರ್ಕೆಲಾಗೆ ಪ್ರಯಾಣಿಸಲಿದೆ. ಭಾರತವು ಮಾರ್ಚ್ 10 ರಂದು ಆರಂಭಿಕ ಪಂದ್ಯದಲ್ಲಿ ಜರ್ಮನಿಯನ್ನು ಎದುರಿಸಲಿದೆ. ಮಾರ್ಚ್ 13 ರಂದು ಮತ್ತೆ ಜರ್ಮನಿ ಎದುರು ಪಂದ್ಯ ಆಡಬೇಕಿದೆ. ಪ್ರಸ್ತುತ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಸ್ಟ್ರೇಲಿಯಾದ ಎದುರು ಮಾರ್ಚ್ 12 ಮತ್ತು 15 ರಂದು ಭಾರತವನ್ನು ಆಡಲಿದೆ. ಭಾರತವು ಪ್ರಸ್ತುತ ಎಫ್‌ಐಹೆಚ್ ಪ್ರೊ ಲೀಗ್ 2022-23 ಅಂಕಗಳ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಭಾರತ ಕಳಪೆ ಪ್ರದರ್ಶನ: ಪುರುಷರ ಹಾಕಿ ಕೋಚ್​ ಗ್ರಹಾಂ ರೀಡ್​ ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.