ನವದೆಹಲಿ: ಕ್ರೀಡಾಪಟು ಸಾಗರ್ ರಾಣಾ ಸಾವಿನ ಸಂಬಂಧ, ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರ ಪಾತ್ರದ ಬಗ್ಗೆ ಮಾಧ್ಯಮಗಳು ಬಿತ್ತರಿಸುತ್ತಿರುವ ಮೀಡಿಯಾ ಟ್ರಯಲ್ (ಮಾಧ್ಯಮ ವಿಚಾರಣೆ) ವರದಿಗಳು 'ಸಂವೇದನಾಶೀಲಗೊಳಿಸದಂತೆ' ತಡೆಯುವ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ. ಕಾನೂನು ಕೈಗೆ ತೆಗೆದುಕೊಂಡಿರುವುದು ಹಾಗೂ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯಾಗಿರುವುದರಿಂದ ಈ ಪ್ರಕರಣದಲ್ಲಿ ಪಿಐಎಲ್ ಸಲ್ಲಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠವು ವಿಚಾರಣೆ ನಡೆಸಿ, ಸುಶೀಲ್ ಕುಮಾರ್ ಅವರ ಪರವಾಗಿ ಅರ್ಜಿ ಸಲ್ಲಿಸಲಾಗಿತ್ತು, ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನನ್ನನ್ನು ಕೊಲೆಗಾರ ಎಂಬ ರೀತಿ ಮಾಧ್ಯಮಗಳು ಬಿಂಬಿಸುತ್ತಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.
23 ವರ್ಷದ ಕುಸ್ತಿಪಟು ಸಾವಿಗೆ ಕಾರಣವಾಗಿದೆ ಎನ್ನಲಾದ ಮೈದಾನದಲ್ಲಿ ನಡೆದಿರುವ ಗಲಾಟೆ ದೃಶ್ಯವನ್ನ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದು, ಇದರಿಂದ ಕುಸ್ತಿಪಟು ಖ್ಯಾತಿ ಹಾಳಾಗಿದೆ. ಅಲ್ಲದೆ ವೃತ್ತಿ ಜೀವನಕ್ಕೂ ತೊಡಕುಂಟಾಗಲಿದೆ ಎಂದು ಅರ್ಜಿಯಲ್ಲಿ ಕಾನೂನು ವಿದ್ಯಾರ್ಥಿಯೊಬ್ಬರು ಉಲ್ಲೇಖಿಸಿದ್ದರು.
ಸಹ ಕುಸ್ತಿಪಟು ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸುಶೀಲ್ ಕುಮಾರ್ ಅವರನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿತ್ತು. ಅವರ ವಿರುದ್ಧದ ಆರೋಪಗಳು ಗಂಭೀರವಾಗಿದೆ ಮತ್ತು ಕಾನೂನಿಗಿಂತ ಯಾರೂ ದೊಡ್ಡವರಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಓದಿ: 1000 ಅಲೋಪತಿ ಡಾಕ್ಟರ್ಗಳನ್ನ ಆಯುರ್ವೇದ ವೈದ್ಯರನ್ನಾಗಿ ಮಾಡುತ್ತೇವೆ: ಬಾಬಾ ರಾಮದೇವ್