ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಮುಂದಿನ ತಿಂಗಳು ನಡೆಯಬೇಕಿದ್ದ ಫಾರ್ಮುಲಾ-ಇ ರೇಸ್ ದಿಢೀರ್ ರದ್ದಾಗಿದೆ. ಕಳೆದ ಬಿಆರ್ಎಸ್ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದವನ್ನು ಈಗಿನ ಕಾಂಗ್ರೆಸ್ ಸರ್ಕಾರ ರದ್ದುಪಡಿಸುವ ನಿರ್ಧಾರಕ್ಕೆ ಬಂದಿದ್ದು, ಒಪ್ಪಂದ ಉಲ್ಲಂಘನೆ ಆರೋಪದ ಮೇಲೆ ಕಾನೂನು ಕ್ರಮಕ್ಕೆ ಫೆಡರೇಶನ್ ಇಂಟರ್ನ್ಯಾಷನಲ್ ಆಟೋಮೊಬೈಲ್ಸ್ (ಎಫ್‌ಐಎ) ಮುಂದಾಗಿದೆ.
ಹಿಂದಿನ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಸರ್ಕಾರ ನಗರದಲ್ಲಿ ಫಾರ್ಮುಲಾ-ಇ ರೇಸ್ ನಡೆಸಲು ಫೆಡರೇಶನ್ ಇಂಟರ್ನ್ಯಾಷನಲ್ ಆಟೋಮೊಬೈಲ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಅದರ ಭಾಗವಾಗಿ ಪ್ರಾಯೋಗಿಕ ರೇಸಿಂಗ್ ಕೂಡ ನಡೆಸಲಾಗಿತ್ತು. ಇಂಡಿಯನ್ ರೇಸ್‌ಗಾಗಿ ಎನ್‌ಟಿಆರ್ ಗಾರ್ಡನ್ ಸುತ್ತಲಿನ 2.75 ಕಿಲೋಮೀಟರ್ ಸ್ಟ್ರೀಟ್ ಸರ್ಕ್ಯೂಟ್ ಕೂಡ ಸಿದ್ಧಪಡಿಸಲಾಗಿತ್ತು.
ಇದೇ ಫೆಬ್ರವರಿ 10 ರಂದು ಫಾರ್ಮುಲಾ ಎಫ್ 1 ರೇಸ್ ನಡೆಯಬೇಕಿತ್ತು. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಬೆಂಬಲ ನೀಡದ ಕಾರಣ ರೇಸ್ ಅನ್ನು ರದ್ದು ಮಾಡುವುದಾಗಿ ಎಫ್‌ಐಎ ಪ್ರಕಟಿಸಿದೆ. ಪೌರಾಡಳಿತ ಇಲಾಖೆ ಸ್ಪರ್ಧೆಯ ಒಪ್ಪಂದ ರದ್ದುಪಡಿಸುವ ನಿರ್ಧಾರ ಕೈಗೊಂಡಿದೆ. ಆದರೆ, ಪೂರ್ವ ಯಾವುದೇ ಮಾಹಿತಿ ನೀಡದೆ ಒಪ್ಪಂದವನ್ನು ಉಲ್ಲಂಘಿಸಿದ ಇಲಾಖೆಯ ವಿರುದ್ಧ ಕಾನೂನು ಕ್ರಮಕ್ಕೆ ನೋಟಿಸ್ ನೀಡುವುದಾಗಿ ಹೇಳಿದೆ.
-
This is truly a poor and regressive decision by the Congress Government
— KTR (@KTRBRS) January 6, 2024 " class="align-text-top noRightClick twitterSection" data="
Events like Hyderabad E-Prix enhance the brand image of our City and Country across the world. We had put in a lot of effort and time to bring Formula E-Prix for the first time to India 🇮🇳
In a world… https://t.co/8tCIBEcgB5
">This is truly a poor and regressive decision by the Congress Government
— KTR (@KTRBRS) January 6, 2024
Events like Hyderabad E-Prix enhance the brand image of our City and Country across the world. We had put in a lot of effort and time to bring Formula E-Prix for the first time to India 🇮🇳
In a world… https://t.co/8tCIBEcgB5This is truly a poor and regressive decision by the Congress Government
— KTR (@KTRBRS) January 6, 2024
Events like Hyderabad E-Prix enhance the brand image of our City and Country across the world. We had put in a lot of effort and time to bring Formula E-Prix for the first time to India 🇮🇳
In a world… https://t.co/8tCIBEcgB5
ವಿಶ್ವದ 13 ದೇಶಗಳಲ್ಲಿ ನಡೆಯಲಿರುವ ಇ-ರೇಸ್ ಜನವರಿ 13 ರಿಂದ ಪ್ರಾರಂಭವಾಗಲಿದೆ. ಫೆಬ್ರವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿತ್ತು. ಇಂಡಿಯನ್ ರೇಸ್‌ಗಾಗಿ ಕಳೆದ ವರ್ಷ ಎನ್‌ಟಿಆರ್ ಗಾರ್ಡನ್ ಸುತ್ತ ಸ್ಟ್ರೀಟ್ ಸರ್ಕ್ಯೂಟ್ ಸಿದ್ಧಪಡಿಸಲಾಗಿತ್ತು. ಅದರ ನಿರ್ವಹಣೆ ಮತ್ತು ವ್ಯವಸ್ಥೆಗಳನ್ನು ಹೆಚ್ಎಂಡಿಎ ಮೇಲ್ವಿಚಾರಣೆ ಮಾಡಿತ್ತು. ರೇಸ್‌ನಿಂದಾಗಿ ಹೈದರಾಬಾದ್‌ನ ಇಮೇಜ್ ಹೆಚ್ಚಿದೆ. ಸುಮಾರು 700 ಕೋಟಿ ರೂಪಾಯಿಯಷ್ಟು ಹೂಡಿಕೆ ಕೂಡ ಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪರಿಸರ ಸ್ನೇಹಿ ಇ-ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ, ಹೈದರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಫಾರ್ಮುಲಾ ರೇಸ್ ಅನ್ನು ಆಯೋಜಿಸಲಾಗಿತ್ತು. ಆದರೆ, ಈಗಿನ ರಾಜ್ಯ ಸರ್ಕಾರ ನಿರಾಸಕ್ತಿ ತೋರಿದೆ. ಹೀಗಾಗಿ ಈ ಋತುವಿನ ರೇಸ್ ರದ್ದುಗೊಳಿಸುವುದಾಗಿ ಫೆಡರೇಶನ್ ಇಂಟರ್ನ್ಯಾಷನಲ್ ಆಟೋಮೊಬೈಲ್ಸ್ ಘೋಷಿಸಿದೆ.
ಕೆಟಿಆರ್ ಆಕ್ರೋಶ: ಪ್ರತಿಷ್ಠಿತ ಇ-ರೇಸ್ ರದ್ದಾದ ಬಗ್ಗೆ ಮಾಜಿ ಸಚಿವ ಹಾಗೂ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ (ಕೆಟಿಆರ್) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ನಿರ್ಧಾರದಿಂದ ನಗರದ ಬ್ರಾಂಡ್ಗೆ ಧಕ್ಕೆಯಾಗುತ್ತಿದೆ. ಹೈದರಾಬಾದ್‌ನ ಕೀರ್ತಿಯನ್ನು ದೇಶದಲ್ಲಿ ಹಾಗೂ ವಿಶ್ವದಲ್ಲಿ ಹೆಚ್ಚಿಸಲು ಹಿಂದಿನ ಸರ್ಕಾರ ಇ-ರೇಸ್ ಅನ್ನು ಉತ್ತಮವಾಗಿ ಆಯೋಜಿಸಲು ನಿರ್ಧಾರ ಕೈಗೊಂಡಿತ್ತು ಎಂದು ಹೇಳಿದ್ದಾರೆ.
ಪರಿಸರ ಸ್ನೇಹಿ ವಾಹನಗಳು ತುಂಬಾ ಉಪಯುಕ್ತವಾಗಿದ್ದು, ಭವಿಷ್ಯವು ಇ-ವಾಹನಗಳ ಮೇಲೆ ನಿಂತಿದೆ. ಕಳೆದ ವರ್ಷ ಪ್ರಾಯೋಗಿಕ ಸ್ಪರ್ಧೆಯನ್ನು ನಡೆಸಲಾಯಿತು. ಈಗ ಸ್ಪರ್ಧೆ ರದ್ದಾಗಿದ್ದು, ನಗರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರು ಎಕ್ಸ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.