ಕೋಲ್ಕತ್ತಾ : ಭಾರತ ತಂಡದ ಮಾಜಿ ಫುಟ್ಬಾಲರ್ ಹಾಗೂ ಪ್ರಸಿದ್ಧ ಕೋಚ್ ಶುಭಾಷ್ ಭೌಮಿಕ್ ಶನಿವಾರ ನಿಧನರಾಗಿದ್ದಾರೆ. ಭೌಮಿಕ್ ತಮ್ಮ 70ನೇ ವಯಸ್ಸಿನಲ್ಲಿ ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.
ಕೆಲವು ದಿನಗಳ ಹಿಂದೆ ಕಿಡ್ನಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರೂ ಕಿಡ್ನಿ ಕಸಿಗೆ ಒಳಗಾಬೇಕಿತ್ತು. ಆದರೆ, ಶಸ್ತ್ರಚಿಕಿತ್ಸೆಗೂ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.
ಭೌಮಿಕ್ ಅವರು 2003ರಲ್ಲಿ ಈಸ್ಟ್ ಬೆಂಗಾಲ್ ತಂಡವನ್ನು ಆಸಿಯಾನ್‌ಗೆ(ASEAN) ಕೊಡೊಯ್ಯುವಲ್ಲಿ ಪ್ರಮುಖ ಆಟಗಾರರಾಗಿದ್ದರು. ಅವರು 1970ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದ ಭಾರತೀಯ ಸಾಕರ್ ತಂಡದ ಸದಸ್ಯರಾಗಿದ್ದರು.
-
AIFF condoles Subhas Bhowmick’s death
— Indian Football Team (@IndianFootball) January 22, 2022 " class="align-text-top noRightClick twitterSection" data="
Read 👉 https://t.co/fha8Ij74bn#RIP #IndianFootball pic.twitter.com/hZg59G6GRl
">AIFF condoles Subhas Bhowmick’s death
— Indian Football Team (@IndianFootball) January 22, 2022
Read 👉 https://t.co/fha8Ij74bn#RIP #IndianFootball pic.twitter.com/hZg59G6GRlAIFF condoles Subhas Bhowmick’s death
— Indian Football Team (@IndianFootball) January 22, 2022
Read 👉 https://t.co/fha8Ij74bn#RIP #IndianFootball pic.twitter.com/hZg59G6GRl
1979ರಲ್ಲಿ ಫುಟ್ಬಾಲ್ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದ ಭೌಮಿಕ್ 1991ರಲ್ಲಿ ಕೋಚಿಂಗ್ ವೃತ್ತಿ ಆರಂಭಿಸಿದ್ದರು. ಅವರು 2005ರಲ್ಲಿ ಕೇಂದ್ರೀಯ ಅಬಕಾರಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಲಂಚ ಸ್ವೀಕರಿಸುವಾಗ ಸಿಬಿಐ ತನಿಖಾ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದರು.
ಇದನ್ನೂ ಓದಿ: ಮಹಿಳೆಯರ ಏಷ್ಯಾಕಪ್ ಹಾಕಿ: ಮಲೇಷ್ಯಾ ವಿರುದ್ಧ ಭಾರತ ತಂಡಕ್ಕೆ ಭರ್ಜರಿ ಗೆಲುವು!