ETV Bharat / sports

FIFA Women's World Cup: ಆಕ್ಲೆಂಡ್​ನಲ್ಲಿ ಗುಂಡಿನ ದಾಳಿ, ಇಬ್ಬರು ಸಾವು - ಗುಂಡಿನ ದಾಳಿಯು ಭಯೋತ್ಪಾದಕ ಕೃತ್ಯದಂತೆ ಕಂಡಿಲ್ಲ

ಫಿಫಾ ಮಹಿಳಾ ವಿಶ್ವಕಪ್ 2023 ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು ಗುರುವಾರ ಆಕ್ಲೆಂಡ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಆದರೆ ಇದು ಭಯೋತ್ಪಾದನಾ ಕೃತ್ಯವಲ್ಲ ಎಂದು ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ಹೇಳಿದ್ದಾರೆ.

2 killed in Auckland Firing before FIFA Women's World Cup

author img

By

Published : Jul 20, 2023, 6:51 PM IST

ಆಕ್ಲೆಂಡ್: ನ್ಯೂಜಿಲ್ಯಾಂಡ್​​ನ ಆಕ್ಲೆಂಡ್​ ನಗರದಲ್ಲಿ ಫಿಫಾ ಮಹಿಳಾ ವಿಶ್ವಕಪ್ ಪ್ರಾರಂಭವಾಗುವ ಕೆಲ ಗಂಟೆಗಳ ಮೊದಲು ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ದಾಳಿಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರ ಆರು ಜನ ಗಾಯಗೊಂಡಿದ್ದಾರೆ ಮತ್ತು ಗುಂಡು ಹಾರಿಸಿದ ವ್ಯಕ್ತಿ ಘಟನೆಯ ನಂತರ ಸಾವನ್ನಪ್ಪಿದ್ದಾನೆ.

ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ ಮತ್ತು ಬಂದೂಕುಧಾರಿ ಕಟ್ಟಡದ ಒಳಗೆ ಹೋಗಿ ಗುಂಡಿನ ದಾಳಿಯನ್ನು ಮುಂದುವರೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರ ವ್ಯಕ್ತಿ ಲಿಫ್ಟ್ ಶಾಫ್ಟ್‌ಗೆ ಹೋಗಿದ್ದು, ನಂತರ ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸಿದರು. ಇದರ ನಂತರ ಆ ವ್ಯಕ್ತಿ ಗುಂಡಿನ ದಾಳಿ ಮುಂದುವರೆಸಿದ್ದು, ಸ್ವಲ್ಪ ಸಮಯದ ನಂತರ ಆತ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಗುಂಡಿನ ದಾಳಿಯ ನಂತರ ಪ್ರಮುಖ ವಹಿವಾಟು ಜಿಲ್ಲೆಯಾಗಿರುವ ಆಕ್ಲೆಂಡ್​ನಲ್ಲಿ ಭಾರಿ ಸಂಖ್ಯೆಯ ಸಶಸ್ತ್ರ ಯೋಧರನ್ನು ಕಾವಲಿಗೆ ನಿಯೋಜಿಸಲಾಗಿದೆ.

ಗುಂಡಿನ ದಾಳಿಯು ಭಯೋತ್ಪಾದಕ ಕೃತ್ಯದಂತೆ ಕಂಡಿಲ್ಲ ಮತ್ತು ಪಂದ್ಯಾವಳಿಯು ಯೋಜಿಸಿದಂತೆ ಮುಂದುವರಿಯಲಿದೆ ಎಂದು ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಂದು ದಿನದ ನಂತರ ನಗರದ ಈಡನ್ ಪಾರ್ಕ್‌ನಲ್ಲಿ ನ್ಯೂಜಿಲ್ಯಾಂಡ್​ ಮತ್ತು ನಾರ್ವೆ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಪೊಲೀಸರು ದಾಳಿಯನ್ನು ತಟಸ್ಥಗೊಳಿಸಿದ್ದಾರೆ ಮತ್ತು ಯಾವುದೇ ಅಪಾಯವಿಲ್ಲ ಎಂದು ಪ್ರಧಾನಿ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ದಾಳಿಯ ಹಿಂದೆ ಯಾವುದೇ ರಾಜಕೀಯ ಅಥವಾ ಸೈದ್ಧಾಂತಿಕ ಉದ್ದೇಶ ಕಂಡು ಬಂದಿಲ್ಲ. ದುಷ್ಕರ್ಮಿಯು ಪಂಪ್-ಆಕ್ಷನ್ ಶಾಟ್‌ಗನ್‌ ನೊಂದಿಗೆ ಶಸ್ತ್ರಸಜ್ಜಿತನಾಗಿದ್ದ ಎಂದು ಅವರು ಹೇಳಿದರು.

"ಆಕ್ಲೆಂಡ್‌ನ ಸಿಬಿಡಿಯಲ್ಲಿನ ನಿರ್ಮಾಣ ಸ್ಥಳದಲ್ಲಿ ಇಂದು ಬೆಳಗ್ಗೆ ನಡೆದ ಅಪಾಯಕಾರಿ ಆಗಬಹುದಾದ ಘಟನೆಯನ್ನು ಪೊಲೀಸರು ನಿಯಂತ್ರಿಸಿದ್ದಾರೆ. ಹಲವಾರು ಜನರಿಗೆ ಗಾಯಗಳಾಗಿರುವ ಬಗ್ಗೆ ತಿಳಿದು ಬಂದಿದೆ. ಈ ಹಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಪುರುಷ ದಾಳಿಕೋರ ಕೂಡ ಸಾವನ್ನಪ್ಪಿದ್ದಾನೆ" ಎಂದು ನ್ಯೂಜಿಲ್ಯಾಂಡ್​​ ಪೊಲೀಸರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಏತನ್ಮಧ್ಯೆ, ಗುರುವಾರ ರಾತ್ರಿ ವಿಶ್ವಕಪ್ ಪಂದ್ಯಾವಳಿಯು ನ್ಯೂಜಿಲ್ಯಾಂಡ್​ ಮತ್ತು ನಾರ್ವೆ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಗುರುವಾರ ರಾತ್ರಿ ನ್ಯೂಜಿಲೆಂಡ್‌ನ ನಾರ್ವೆ ಪಂದ್ಯವನ್ನು ವೀಕ್ಷಿಸಲು ಈಡನ್ ಪಾರ್ಕ್ ಸ್ಟೇಡಿಯಂನಲ್ಲಿ 40,000 ಕ್ಕೂ ಹೆಚ್ಚು ಜನ ಸೇರಲಿದ್ದಾರೆ. ಫಿಫಾ ಮಹಿಳಾ ವಿಶ್ವಕಪ್ ಪಂದ್ಯಾವಳಿಗಳು ಒಂದು ತಿಂಗಳ ಕಾಲ ನಡೆಯಲಿದ್ದು, 32 ತಂಡಗಳು ಭಾಗವಹಿಸಿವೆ.

ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯಾಗಳು ಪಂದ್ಯಾವಳಿಯ ಆತಿಥ್ಯ ವಹಿಸುತ್ತಿವೆ. ಅಂತಿಮ ಪಂದ್ಯ ಆಗಸ್ಟ್ 20 ರಂದು ನಡೆಯಲಿದೆ. ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಮತ್ತು ನಾಯಕಿ ಸ್ಯಾಮ್ ಕೆರ್ ತಮ್ಮ ತಂಡದಲ್ಲಿ ಮಹಿಳಾ ಫುಟ್‌ಬಾಲ್‌ನ ಅತ್ಯುತ್ತಮ ಆಟಗಾರರನ್ನು ಹೊಂದಿದ್ದಾರೆ.

ಇದನ್ನೂ ಓದಿ : ಸುದ್ದಿ ಬರೆಯುವ ಎಐ Google Genesis: ಇದೆಷ್ಟು ನಿಖರ..? ಇಲ್ಲಿದೆ ಮಾಹಿತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.