ETV Bharat / sports

25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶ್ರೇಯಾಂಕ ಪಟ್ಟಿಯಿಂದ ಹೊರ ಬಿದ್ದ ಫೆಡರರ್: ಜೊಕೊವಿಕ್‌ಗೆ 7ನೇ ಸ್ಥಾನ - Roger Federer dropped out of the ATP rankings entirely for the first time in a quarter century on Monday

ಫೆಡರರ್ ಅವರು ಸೆಪ್ಟೆಂಬರ್ 1997 ರಲ್ಲಿ 16 ನೇ ವಯಸ್ಸಿನಲ್ಲಿ ಟೆನಿಸ್​​ಗೆ ತಮ್ಮ ಚೊಚ್ಚಲ ಪ್ರವೇಶ ಮಾಡಿದ ನಂತರ ಪ್ರತಿ ವಾರ ಸಿಂಗಲ್ಸ್ ಶ್ರೇಯಾಂಕದಲ್ಲಿ ಟಾಪ್​​ ನಲ್ಲಿ ಇರುತ್ತಿದ್ದರು. ಆರಂಭದಲ್ಲಿ 803 ನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಬಂದಿದ್ದರು, ಆದರೆ ಈಗ ಅಲ್ಲಿಂದಲೂ ಹೊರಬಿದ್ದಿದ್ದಾರೆ.

ಕಳೆದ 25 ವರ್ಷಗಳಲ್ಲಿ ಶ್ರೇಯಾಂಕ ದಿಂದ ಹೊರಬಿದ್ದ ಫೆಡರರ್

author img

By

Published : Jul 11, 2022, 7:08 PM IST

ವಿಂಬಲ್ಡನ್: ಇಂದು ಬಿಡುಗಡೆಯಾದ ಎಟಿಪಿ ಶ್ರೇಯಾಂಕದಿಂದ (ಪುರುಷರ ಸಿಂಗಲ್ಸ್) ರೋಜರ್ ಫೆಡರರ್ ಅವರು 25 ವರ್ಷಗಳ ನಂತರ ಮೊದಲ ಬಾರಿಗೆ ಹೊರಬಿದ್ದಿದ್ದಾರೆ ಮತ್ತು ಏಳನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ನೊವಾಕ್ ಜೊಕೊವಿಕ್ ನಾಲ್ಕು ಸ್ಥಾನಗಳನ್ನು ಕಳೆದುಕೊಂಡು ಏಳನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ವಿಂಬಲ್ಡನ್ ರನ್ನರ್ ಅಪ್ ನಿಕ್ ಕಿರ್ಗಿಯೋಸ್ ಈ ಶ್ರೇಯಾಂಕದಲ್ಲಿ 40ನೇ ಸ್ಥಾನದಿಂದ 45ನೇ ಸ್ಥಾನಕ್ಕೆ ಕುಸಿದಿದ್ದಾರೆ.

ರಷ್ಯಾ ಮತ್ತು ಬೆಲಾರಸ್‌ನ ಆಟಗಾರರ ಮೇಲಿನ ನಿಷೇಧದಿಂದಾಗಿ ವಿಂಬಲ್ಡನ್‌ನಲ್ಲಿ ಆಟಗಾರರಿಗೆ ಶ್ರೇಯಾಂಕದ ಅಂಕಗಳನ್ನು ನೀಡದಿರಲು ATP ಮತ್ತು WTA ನಿರ್ಧರಿಸಲಾಗಿತ್ತು. ಇನ್ನು ಜೊಕೊವಿಕ್ ಮತ್ತು ಕಿರ್ಗಿಯೊಸ್ ಅವರ ಪ್ರಭಾವಶಾಲಿ ಪ್ರದರ್ಶನಗಳ ಹೊರತಾಗಿಯೂ ಶ್ರೇಯಾಂಕವನ್ನು ಸುಧಾರಿಸಲು ಸಾಧ್ಯವಾಗಿಲ್ಲ.

ಫೆಡರರ್ ಸೆಪ್ಟೆಂಬರ್ 1997 ರಲ್ಲಿ 16 ನೇ ವಯಸ್ಸಿನಲ್ಲಿ ಚೊಚ್ಚಲ ಬಾರಿಗೆ ಪ್ರವೇಶ ಮಾಡಿದ ನಂತರ ಪ್ರತಿ ವಾರ ಸಿಂಗಲ್ಸ್ ಶ್ರೇಯಾಂಕಕ್ಕೆ ಪ್ರವೇಶಿಸಲು ಯಶಸ್ವಿಯಾಗಿದ್ದರು. ಶ್ರೇಯಾಂಕದಲ್ಲಿ 803 ನೇ ಸ್ಥಾನದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ನಂತರ ಅವರು ಅಗ್ರಸ್ಥಾನಕ್ಕೆ ಏರಿದ್ದರು. ಶ್ರೇಯಾಂಕದಲ್ಲಿ ಸುದೀರ್ಘ ಕಾಲದ ಅವರ ದಾಖಲೆಯನ್ನು ಜೊಕೊವಿಕ್ ಈಗ ಮುರಿದಿದ್ದಾರೆ.

ವಿಂಬಲ್ಡನ್ ಪ್ರಾರಂಭವಾಗುವ ಮೊದಲು ಫೆಡರರ್ 97 ನೇ ಸ್ಥಾನದಲ್ಲಿದ್ದರು. ಆದರೆ, ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಪಂದ್ಯಾವಳಿ ಮುಗಿದ ನಂತರ ಒಂದೇ ಒಂದು ಶ್ರೇಯಾಂಕವನ್ನು ಸಹ ಅವರು ಹೊಂದಿರಲಿಲ್ಲ.

ಇನ್ನು ಮಹಿಳೆಯರ ವಿಭಾಗದಲ್ಲಿ ಚೊಚ್ಚಲ ಗ್ರ್ಯಾನ್ ಸ್ಲಾಮ್ ಗೆದ್ದಿರುವ ಎಲೆನಾ ರೈಬಾಕಿನಾ ಕೂಡ ವಿಂಬಲ್ಡನ್ ಟೂರ್ನಿಯಿಂದ ರ‍್ಯಾಕಿಂಗ್ ಅಂಕಗಳನ್ನು ಪಡೆಯದೇ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮೊದಲಿನಂತೆ 23ನೇ ಸ್ಥಾನದಲ್ಲಿ ಉಳಿದಿದ್ದಾರೆ.

ಓನ್ಸ್​ ಜಾಬರ್​​​​​ ಸ್ಥಾನವೂ ಕುಸಿತ: ಶನಿವಾರ ನಡೆದ ಫೈನಲ್‌ನಲ್ಲಿ ರಿಬಾಕಿನಾ ವಿರುದ್ಧ ಸೋತ ಓನ್ಸ್ ಜಾಬರ್ ಎರಡನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕಳೆದ ವರ್ಷದ ರನ್ನರ್ ಅಪ್ ಕರೋಲಿನಾ ಪ್ಲಿಸ್ಕೋವಾ ಎಂಟು ಸ್ಥಾನ ಕುಸಿದು 15ನೇ ಸ್ಥಾನಕ್ಕೆ ತಲುಪಿದ್ದರು. ಆಸ್ಟ್ರೇಲಿಯನ್ ಓಪನ್ ರನ್ನರ್ ಅಪ್ ಡೇನಿಯಲ್ ಕಾಲಿನ್ಸ್ ಏಳನೇ, ಯುಎಸ್ ಓಪನ್ ಚಾಂಪಿಯನ್ ಎಮ್ಮಾ ರಾಡುಕಾನು 10 ನೇ ಮತ್ತು ಫ್ರೆಂಚ್ ಓಪನ್ ರನ್ನರ್ ಅಪ್ ಕೊಕೊ ಗೌ 11 ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಚೀನಾದ ಉಪಟಳ, ಪ್ರಧಾನಿಯವರ ಮೌನ ದೇಶಕ್ಕೆ ದೊಡ್ಡ ಗಂಡಾಂತರ: ಕಿಡಿಕಾರಿದ ರಾಹುಲ್​ ಗಾಂಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.