ಕ್ಯಾಲಿಫೋರ್ನಿಯಾ (ಯುಎಸ್‌ಎ): ವಿಶ್ವ ನಂ. 1 ಮತ್ತು ಐದು ಬಾರಿಯ ಇಂಡಿಯನ್ ವೆಲ್ಸ್ ಚಾಂಪಿಯನ್ ನೊವಾಕ್ ಜೊಕೊವಿಕ್ ಜೊತೆಗೆ 2022ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಗಳಾದ ಸ್ಪೇನ್‌ನ ರಾಫೆಲ್ ನಡಾಲ್ ಮತ್ತು ಆಸ್ಟ್ರೇಲಿಯಾದ ಆಶ್ಲೀ ಬಾರ್ಟಿ ಅವರನ್ನು ಬಿಎನ್‌ಪಿ ಪರಿಬಾಸ್ ಓಪನ್ ಟೂರ್ನಮೆಂಟ್ ಪ್ರವೇಶ ಪಟ್ಟಿಯಲ್ಲಿ ಸೇರಿಸಲಾಗಿದೆ.
ಈ ಟೂರ್ನಿ ಮಾರ್ಚ್ 7-20 ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದ ಇಂಡಿಯನ್ ವೆಲ್ಸ್ ಟೆನಿಸ್ ಗಾರ್ಡನ್‌ನಲ್ಲಿ ನಡೆಯಲಿದೆ. ಆದಾಗ್ಯೂ, ಈ ಟೂರ್ನಮೆಂಟ್ನಲ್ಲಿ ಭಾಗವಹಿಸಬೇಕಾದರೆ ಕೋವಿಡ್ 19 ಲಸಿಕೆ ಅಗತ್ಯವಿದೆ ಎಂದು ಸಂಘಟಕರು ಒತ್ತಿ ಹೇಳಿದ್ದಾರೆ. ಆದರೆ, ಆಟಗಾರರ ನಿಯಮಗಳು ಮತ್ತು ಪ್ರೋಟೋಕಾಲ್‌ಗಳನ್ನು US ಸರ್ಕಾರದ ನಿರ್ಬಂಧಗಳಿಗೆ ಅನುಗುಣವಾಗಿ ATP ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ತಿಂಗಳು ನೊವಾಕ್ ಜೊಕೊವಿಕ್ ತಮ್ಮ ಕೋವಿಡ್ 19 ಲಸಿಕೆಯ ಸ್ಟೇಟಸ್ಅನ್ನು ಬಿಟ್ಟುಕೊಡದ ಕಾರಣ ಕಾನೂನಿನ ಹೋರಾಟದ ಹೊರತಾಗಿಯೂ ಆಸ್ಟ್ರೇಲಿಯಾ ಸರ್ಕಾರದಿಂದ ಗಡಿಪಾರಿಗೆ ಒಳಗಾಗಿದ್ದರು. ಹಾಗಾಗಿ ಆಸ್ಟ್ರೇಲಿಯನ್ ಓಪನ್ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು.
ಮೂರು ಬಾರಿಯ ಚಾಂಪಿಯನ್ ರಾಫೆಲ್ ನಡಾಲ್ 2019ರ ನಂತರ ಇದೇ ಮೊದಲ ಬಾರಿಗೆ ಟೂರ್ನಮೆಂಟ್ನಲ್ಲಿ ಭಾಗವಹಿಸುತ್ತಿದ್ದಾರೆ. 20121ರಲ್ಲಿ ಪಾದದ ಗಾಯದ ಕಾರಣ ಅವರು ಸ್ಪರ್ಧಿಸಿರಲಿಲ್ಲ. ನಡಾಲ್ ಜೊತೆಗೆ ಅಗ್ರ 10 ಆಟಗಾರರು ಟೆನಿಸ್ ಸ್ವರ್ಗದಲ್ಲಿ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ:ಐಸೊಲೇಷನ್ನಿಂದ ಹೊರಬಂದ ರುತುರಾಜ್: ಕೊನೆ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ