ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹೊರಗುಳಿದಿದ್ದ ಸೆರ್ಬಿಯನ್ ಆಟಗಾರ ನೊವಾಕ್ ಜೊಕೊವಿಕ್ ಅವರ ಹೆಸರು ಬಿಎನ್ಪಿ ಪರಿಬಾಸ್ ಓಪನ್ ಕ್ರೀಡಾಕೂಟದ ಎಂಟ್ರಿ ಲಿಸ್ಟ್ನಲ್ಲಿದ್ದು, ಅವರು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆಯೇ ಅಥವಾ ಅಮೆರಿಕ ಅಮೆರಿಕ ನೊವಾಕ್ ಜೊಕೊವಿಕ್ ಅವರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮತಿ ನೀಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಎಂದೂ ಈ ಕ್ರೀಡಾಕೂಟವನ್ನು ಕರೆಯಾಗುತ್ತದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ಲಸಿಕೆ ಕಡ್ಡಾಯ ಎಂದು ಅಮೆರಿಕ ಆದೇಶ ನೀಡಿತ್ತು. ಆದ್ದರಿಂದ ಅವರ ಹೆಸರನ್ನು ಪಟ್ಟಿಯಿಂದ ಹಿಂಪಡೆಯುವುದಾಗಿ ಹೇಳಲಾಗಿತ್ತು. ಆದರೂ ಅವರ ಹೆಸರು ಪುರುಷರ ಸಿಂಗಲ್ಸ್ ಪಟ್ಟಿಯಲ್ಲಿ ಮುಂದುವರೆದಿದೆ. ಆದರೆ ನೊವಾಕ್ ಜೊಕೊವಿಕ್ ಈ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಐಸಿಸಿಯ 'ತಿಂಗಳ ಆಟಗಾರ ಪ್ರಶಸ್ತಿ'ಗೆ ಶ್ರೇಯಸ್, ಮಿಥಾಲಿ, ದೀಪ್ತಿ ನಾಮನಿರ್ದೇಶನ
ನಾವು ಪ್ರಸ್ತುತ ಅವರೊಂದಿಗೆ ಸಂವಹನ ನಡೆಸುತ್ತಿದ್ದೇವೆ. ಅವರು ಟೂರ್ನಿಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ಪ್ರವೇಶಿಸಲು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ನ ಅನುಮೋದನೆ ಪಡೆಯಬೇಕಾಗುತ್ತದೆ. ಅವರು ಅನುಮತಿ ಪಡೆದು ಟೂರ್ನಿಯಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಟೂರ್ನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
Update from the Indian Wells “We Miss You” wall:
— Ben Rothenberg (@BenRothenberg) March 9, 2022 " class="align-text-top noRightClick twitterSection" data="
Andreescu has been added; Djokovic has not been subtracted; man misses Ash Barty. pic.twitter.com/krLVeeXshB
">Update from the Indian Wells “We Miss You” wall:
— Ben Rothenberg (@BenRothenberg) March 9, 2022
Andreescu has been added; Djokovic has not been subtracted; man misses Ash Barty. pic.twitter.com/krLVeeXshBUpdate from the Indian Wells “We Miss You” wall:
— Ben Rothenberg (@BenRothenberg) March 9, 2022
Andreescu has been added; Djokovic has not been subtracted; man misses Ash Barty. pic.twitter.com/krLVeeXshB
ಈಗಾಗಲೇ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ನಡೆಯುವ ಕ್ರೀಡಾಂಗಣದ ಗೋಡೆಗಳ ಮೇಲೆ ಜೊಕೊವಿಕ್ ಭಾವಚಿತ್ರದೊಂದಿಗೆ 'ವಿ ಮಿಸ್ ಯೂ' ಎಂಬ ಬರಹಗಳು ಕಾಣಿಸಿಕೊಂಡಿದ್ದು, ಅವರು ಈ ಟೂರ್ನಿಯಲ್ಲೂ ಭಾಗವಹಿಸುವುದಿಲ್ಲ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿವೆ.
ಈಗಾಗಲೇ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೂರ್ನಿ ಆರಂಭವಾಗಿದ್ದು, ನೊವಾಕ್ ಜೊಕೊವಿಕ್ ಅವರ ಪಂದ್ಯ ಮಾರ್ಚ್ 13ರಂದು ನಿಗದಿಯಾಗಿದೆ. ಅವರು ಅನುಮತಿ ಪಡೆದರೆ, ಟೂರ್ನಿಯಲ್ಲಿ ಆಡುವ ಅವಕಾಶ ಸಿಗಲಿದೆ.