ETV Bharat / sports

ಕಾಮನ್‌ವೆಲ್ತ್ ಗೇಮ್ಸ್: 47 ಪದಕಗಳೊಂದಿಗೆ ಭಾರತಕ್ಕೆ 5ನೇ ಸ್ಥಾನ

ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತೀಯರು ಪದಕಗಳ ಬೇಟೆ ಮುಂದುವರೆಸಿದ್ದಾರೆ. ಇಲ್ಲಿಯವರೆಗೆ ಕ್ರೀಡಾಪಟುಗಳು ಭಾರತಕ್ಕೆ ತಂದು ಕೊಟ್ಟ ಪದಕಗಳ ಮಾಹಿತಿ ಇಲ್ಲಿದೆ..

Commonwealth Games: India 5th position in Medals Tally
ಕಾಮನ್‌ವೆಲ್ತ್ ಗೇಮ್ಸ್: 47 ಪದಕಗಳೊಂದಿಗೆ ಭಾರತಕ್ಕೆ 5ನೇ ಸ್ಥಾನ
author img

By

Published : Aug 7, 2022, 6:11 PM IST

ಬರ್ಮಿಂಗ್‌ಹ್ಯಾಮ್‌(ಇಂಗ್ಲೆಂಡ್): ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ತೋರುತ್ತಿದ್ದಾರೆ. ಇದುವರೆಗೆ 16 ಚಿನ್ನದ ಪದಕಗಳ ಸಮೇತವಾಗಿ ಭಾರತಕ್ಕೆ 47 ಪದಕಗಳನ್ನು ಗೆದ್ದಿದ್ದು, ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಒಟ್ಟಾರೆ ಪದಕದ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.

ಜುಲೈ 28ರಿಂದ ಆರಂಭವಾಗಿರುವ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಕುಸ್ತಿ, ವೇಟ್ ಲಿಫ್ಟಿಂಗ್, ಬಾಕ್ಸಿಂಗ್, ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್​ ಸೇರಿ ವಿವಿಧ ಕ್ರೀಡೆಗಳಲ್ಲಿ ಭಾರತೀಯರು ಮಿಂಚು ಹರಿಸಿದ್ದಾರೆ. ಇಲ್ಲಿಯವರೆಗೆ 16 ಚಿನ್ನ, 12 ಬೆಳ್ಳಿ ಹಾಗೂ 19 ಕಂಚಿನ ಪದಕಗಳಿಗೆ ಭಾರತೀಯ ಸ್ಪರ್ಧಿಗಳು ಕೊರಳೊಡ್ಡಿದ್ದಾರೆ. ನಾಳೆ (ಆಗಸ್ಟ್​ 8) ಕ್ರೀಡಾಕೂಟದ ಕೊನೆಯ ದಿನವಾಗಿದ್ದು, ಭಾರತಕ್ಕೆ ಮತ್ತಷ್ಟು ಪದಕಗಳು ಬರುವ ನಿರೀಕ್ಷೆಯೂ ಇದೆ.

ಕುಸ್ತಿಯಲ್ಲಿ ಅತಿ ಹೆಚ್ಚು ಪದಕ: ಕುಸ್ತಿಯಲ್ಲಿ ಭಾರತದ ಕುಸ್ತಿಪಟುಗಳು ಪರಾಕ್ರಮ ಮೆರೆದಿದ್ದಾರೆ. ಇದುವರೆಗೆ ಭಾರತಕ್ಕೆ ಬಂದ ಒಟ್ಟು 43 ಪದಕಗಳ ಪೈಕಿ ಕುಸ್ತಿಯಲ್ಲೇ 6 ಬಂಗಾರ, 1 ಬೆಳ್ಳಿ ಹಾಗೂ 5 ಕಂಚಿನ ಪದಕಗಳ ಸಮೇತ ಒಟ್ಟು 12 ಮೆಡಲ್​ಗಳನ್ನು ಕುಸ್ತಿಪಟುಗಳು ಗೆದ್ದಿದ್ದಾರೆ.

ವೇಟ್ ಲಿಫ್ಟಿಂಗ್​ನಲ್ಲಿ 10 ಪದಕ: ಕಾಮನ್‌ವೆಲ್ತ್ ಗೇಮ್ಸ್​ನ ವೇಟ್ ಲಿಫ್ಟಿಂಗ್​ನಲ್ಲೂ ಭಾರತೀಯ ಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, 10 ಪದಕಗಳನ್ನು ವೇಟ್ ಲಿಫ್ಟಿಂಗ್​ ಸ್ಪರ್ಧೆಯಲ್ಲಿ ಭಾರತಕ್ಕೆ ತಂದುಕೊಟ್ಟಿದ್ದಾರೆ. ಇದರಲ್ಲಿ 3 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ಸೇರಿವೆ.

ಅಥ್ಲೆಟಿಕ್ಸ್​ನಲ್ಲಿ 8 ಮೆಡಲ್: ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್​ನಲ್ಲೂ ಭಾರತದ ಕ್ರೀಡಾಪಟುಗಳು ಮಿಂಚಿದ್ದು, ಇಲ್ಲಿಯವರೆಗೆ 8 ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. 1 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಅಥ್ಲೆಟ್​ಗಳು ಜಯಿಸಿದ್ದಾರೆ.

ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್: ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಅನುಗೆ ಮೊದಲ ಕಂಚಿನ ಪದಕ

ಬಾಕ್ಸಿಂಗ್​ನಲ್ಲಿ ಭಾರತಕ್ಕೆ 5 ಪದಕಗಳನ್ನು ಬಾಕ್ಸರ್​​ಗಳು ತಂದುಕೊಟ್ಟಿದ್ದಾರೆ. ಬಾಕ್ಸಿಂಗ್​ನಲ್ಲಿ ಭಾರತಕ್ಕೆ 2 ಬಂಗಾರ, 3 ಕಂಚಿನ ಪದಕಗಳು ಬಂದಿವೆ. ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್​​ನಲ್ಲೂ 2 ಚಿನ್ನ ಹಾಗೂ 1 ಕಂಚಿನ ಪದಕ ಸೇರಿ 3 ಪದಕಗಳು ಭಾರತಕ್ಕೆ ಬಂದಿವೆ. ಲಾನ್ ಬೌಲ್ಸ್ ಮತ್ತು ಪ್ಯಾರಾ ಲಾನ್ ಬೌಲ್ಸ್​​ನಲ್ಲಿ 1 ಚಿನ್ನ, 1 ಬೆಳ್ಳಿ ಪದಕ ಭಾರತಕ್ಕೆ ಬಂದಿದೆ.

ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್ 2022: ಬಾಕ್ಸರ್ ನೀತು ಗಂಗಾಸ್ ಮುಡಿಗೆ ಚಿನ್ನ

ಪ್ಯಾರಾ ಪವರ್​​ ಲಿಫ್ಟಿಂಗ್​ನಲ್ಲಿ 1 ಚಿನ್ನದ ಪದಕ ಬಂದಿದೆ. ಜೂಡೋದಲ್ಲಿ 2 ಬೆಳ್ಳಿ, 1 ಕಂಚು ಸೇರಿ 3 ಪದಕಗಳು ಭಾರತಕ್ಕೆ ಬಂದಿವೆ. ಬ್ಯಾಡ್ಮಿಂಟನ್​ನಲ್ಲಿ 1 ಬೆಳ್ಳಿ ಪದಕ ಬಂದಿದ್ದರೆ, ಮಹಿಳೆಯರ ಹಾಕಿಯಲ್ಲಿ 16 ವರ್ಷಗಳ ಬಳಿಕ ಭಾರತ ಕಂಚಿನ ಪದಕ ಗೆದ್ದಿದೆ. ಸ್ಕ್ವ್ಯಾಷ್​ನಲ್ಲೂ ಭಾರತಕ್ಕೆ ಕಂಚಿನ ಪದಕ ಬಂದಿದೆ.

ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್: ಪುರುಷರ ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಬಂಗಾರ, ಬೆಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.