ಬರ್ಮಿಂಗ್ಹ್ಯಾಮ್(ಯುಕೆ): ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 3 ಚಿನ್ನ, 2 ಬೆಳ್ಳಿ, 1 ಕಂಚಿನ ಸಮೇತ ಮುನ್ನುಗ್ಗುತ್ತಿದೆ. ಇಂದಿನ ನಾಲ್ಕನೇ ದಿನದ ಕ್ರೀಡಾಕೂಟದಲ್ಲೂ ಭಾರತೀಯರು ವಿವಿಧ ಸ್ಪರ್ಧೆಗಳಲ್ಲಿ ಪದಕ ಪರೀಕ್ಷೆಗೆ ಇಳಿಯಲಿದ್ದಾರೆ. ಟೇಬಲ್ ಟೆನಿಸ್ ಮತ್ತು ಬ್ಯಾಡ್ಮಿಂಟನ್ನ ಸೆಮಿಫೈನಲ್ ಪಂದ್ಯಗಳ ನಡೆಯಲಿದ್ದು, ಮತ್ತಷ್ಟು ಪದಕಗಳು ಭಾರತದ ಮುಡಿಗೇರಲಿವೆ.
ಭಾರತದ ಇಂದಿನ ಸ್ಪರ್ಧೆಗಳು
ಮಹಿಳಾ ಲಾನ್ ಬೌಲ್ಸ್: ಸೆಮಿಫೈನಲ್ (ರಾತ್ರಿ 1 ಗಂಟೆಗೆ)
ವೇಟ್ ಲಿಫ್ಟಿಂಗ್: ಪುರುಷರ 81 ಕೆಜಿ (ಅಜಯ್ ಸಿಂಗ್, ಮಧ್ಯಾಹ್ನ 2 ಕ್ಕೆ), ಮಹಿಳೆಯರ 71 ಕೆಜಿ (ಹರ್ಜಿಂದರ್ ಕೌರ್, ರಾತ್ರಿ 11ಕ್ಕೆ)
ಜುಡೋ: ಪುರುಷರ 66 ಕೆಜಿ ಎಲಿಮಿನೇಷನ್ ಸುತ್ತು 16 (ಜಸ್ಲೀನ್ ಸಿಂಗ್ ಸೈನಿ), ಪುರುಷರ 60 ಕೆಜಿ ಎಲಿಮಿನೇಷನ್ ಸುತ್ತು 16 (ವಿಜಯ್ ಕುಮಾರ್ ಯಾದವ್), ಮಹಿಳೆಯರ 48 ಕೆಜಿ ಕ್ವಾರ್ಟ್ರ್ಫೈನಲ್, (ದೇವಿಲಾ) ಮಹಿಳೆಯರ 57 ಕೆಜಿ ಎಲಿಮಿನೇಷನ್ ಸುತ್ತು 16 (ಸುಚಿಕಾ ತರಿಯಾಲ್) (ಮಧ್ಯಾಹ್ನ 2:30 ಕ್ಕೆ)
ಈಜು: ಪುರುಷರ 100 ಮೀ ಬಟರ್‌ಫ್ಲೈ (ಸಜನ್ ಪ್ರಕಾಶ್ (ಮಧ್ಯಾಹ್ನ 3.51 ), ಪುರುಷರ 100 ಮೀ ಬಟರ್‌ಫ್ಲೈ ಸೆಮಿಫೈನಲ್ (ಸಜನ್ ಪ್ರಕಾಶ್, 12:27 ಬೆಳಗ್ಗೆ), ಪುರುಷರ 50 ಮೀ ಬ್ಯಾಕ್‌ಸ್ಟ್ರೋಕ್ ಫೈನಲ್ (ಶ್ರೀಹರಿ ನಟರಾಜ್, 1.07 ಬೆಳಗ್ಗೆ)
-
India are placed 5th in the Commonwealth Games Medal Standings after Day 3 of action. 🇮🇳#CWG2022 #B2022 pic.twitter.com/dOXc0FqgMH
— Sportskeeda (@Sportskeeda) July 31, 2022 " class="align-text-top noRightClick twitterSection" data="
">India are placed 5th in the Commonwealth Games Medal Standings after Day 3 of action. 🇮🇳#CWG2022 #B2022 pic.twitter.com/dOXc0FqgMH
— Sportskeeda (@Sportskeeda) July 31, 2022India are placed 5th in the Commonwealth Games Medal Standings after Day 3 of action. 🇮🇳#CWG2022 #B2022 pic.twitter.com/dOXc0FqgMH
— Sportskeeda (@Sportskeeda) July 31, 2022
ಬ್ಯಾಡ್ಮಿಂಟನ್: ಮಿಶ್ರ ತಂಡ ಸೆಮಿಫೈನಲ್ (3:30, 10 ರಾತ್ರಿ)
ಸ್ಕ್ವಾಷ್: ಮಹಿಳೆಯರ ಸಿಂಗಲ್ಸ್ ಪ್ಲೇಟ್ ಕ್ವಾರ್ಟರ್‌ಫೈನಲ್‌ಗಳು (ಸುನಯ್ನಾ ಸಾರಾ, ಸಂಜೆ 4.30 ಕ್ಕೆ), ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ (ಜೋಶ್ನಾ ಚಿನ್ನಪ್ಪ ಸಂಜೆ 6ಕ್ಕೆ), ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ (ಸೌರವ್ ಘೋಷಾಲ್ 6.45ಕ್ಕೆ)
ಬಾಕ್ಸಿಂಗ್: 48- 51ಕೆಜಿ ಗಿಂತ ಹೆಚ್ಚು 16 ರ ಸುತ್ತು, ಅಮಿತ್ ಪಂಗಲ್, ಸಂಜೆ 4:45ಕ್ಕೆ, 54-57ಕೆಜಿ ಗಿಂತ ಹೆಚ್ಚು ಹುಸಾಮುದ್ದೀನ್ ಮೊಹಮ್ಮದ್, 6 ರಾತ್ರಿ, 75-80 ಕೆಜಿಗಿಂತ ಹೆಚ್ಚು ಆಶಿಶ್ ಕುಮಾರ್, 1 ಬೆಳಗ್ಗೆ ಗಂಟೆಗೆ.
ಸೈಕ್ಲಿಂಗ್: ಮಹಿಳೆಯರ ಕೀರಿನ್ ಮೊದಲ ಸುತ್ತು (ತ್ರಿಯಾಶಾ ಪೌಲ್, ಸುಶಿಕಲಾ ಅಗಾಶೆ, ಮಯೂರಿ ಲೂಟ್, ಸಂಜೆ 6:32), ಪುರುಷರ 40 ಕಿ.ಮೀ ಸ್ಪರ್ಧೆ (ನಮನ್ ಕಪಿಲ್, ವೆಂಕಪ್ಪ ಕೆಂಗಲಗುತ್ತಿ, ದಿನೇಶ್ ಕುಮಾರ್, ವಿಷಜೀತ್ ಸಿಂಗ್, ಸಂಜೆ 6:52), ಪುರುಷರ 100 ಮೀ. ಟೈಮ್ ಟ್ರಯಲ್ ಫೈನಲ್ಸ್ (ರೊನಾಲ್ಡೊ ಲೈಟೊಂಜಮ್, ಡೇವಿಡ್ ಬೆಕ್‌ಹ್ಯಾಮ್, 8:02 ರಾತ್ರಿ), ಮಹಿಳೆಯರ 10km ಸ್ಕ್ರ್ಯಾಚ್ ರೇಸ್ ಫೈನಲ್ (ಮೀನಾಕ್ಷಿ, 9:37 ರಾತ್ರಿ)
ಹಾಕಿ: ಪುರುಷರ ಪೂಲ್ ಬಿ, ಭಾರತ vs ಇಂಗ್ಲೆಂಡ್(8:30 ರಾತ್ರಿ)
ಟೇಬಲ್ ಟೆನ್ನಿಸ್: ಪುರುಷರ ತಂಡ ಸೆಮಿಫೈನಲ್ (ಭಾರತ ವಿರುದ್ಧ ನೈಜೀರಿಯಾ, 11:30 ರಾತ್ರಿ.
ಪ್ಯಾರಾ ಈಜು: ಪುರುಷರ 50 ಮೀ ಫ್ರೀಸ್ಟೈಲ್ ಫೈನಲ್ (ನಿರಂಜನ್ ಮುಕುಂದನ್, ಸುಯಶ್ ನಾರಾಯಣ್, ಜಾಧವ್, 12:46 ಬೆಳಗ್ಗೆ.
ಓದಿ: "ಚಿನ್ನ" ಎತ್ತಿದ ಅಚಿಂತ ಶೆಯುಲಿ, ವೇಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ 3ನೇ ಬಂಗಾರ