ETV Bharat / sports

ಚಳಿಗಾಲದ ಒಲಿಂಪಿಕ್ಸ್​ಗೆ ಅಮೆರಿಕಾದಿಂದ ರಾಜತಾಂತ್ರಿಕ ಬಹಿಷ್ಕಾರ : ಒಲಿಂಪಿಕ್ ಸ್ಫೂರ್ತಿ ಉಲ್ಲಂಘನೆ ಎಂದ ಚೀನಾ

author img

By

Published : Dec 7, 2021, 3:47 PM IST

ಈ ಬಹಿಷ್ಕಾರ ಘೋಷಣೆ ಒಲಿಂಪಿಕ್ ಸ್ಥಾಪಿಸಿಕೊಂಡಿರುವ ಕ್ರೀಡೆಗಳ ರಾಜಕೀಯ ತಟಸ್ಥತೆಯ ತತ್ವವನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ ಮತ್ತು ಒಲಿಂಪಿಕ್ ಧ್ಯೇಯವಾಕ್ಯಕ್ಕೆ ವಿರೋಧವಾಗಿದೆ ಎಂದು ಝಾವೊ ಹೇಳಿದ್ದಾರೆ..

China says US diplomatic boycott violates Olympic spirit
ಚಳಿಗಾಲದ ಒಲಿಂಪಿಕ್ಸ್​ಗೆ ಅಮೆರಿಕಾದಿಂದ ರಾಜತಾಂತ್ರಿಕ ಭಹಿಷ್ಕಾ

ಬೀಜಿಂಗ್ ​: ಫೆಬ್ರವರಿಯಲ್ಲಿ ಬೀಜಿಂಗ್​ನಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್​ಗೆ ಅಮೆರಿಕಾ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿರುವುದು ಒಲಿಂಪಿಕ್ ಸ್ಪೂರ್ತಿಯ ಉಲ್ಲಂಘನೆ ಎಂದು ಚೀನಾ ಮಂಗಳವಾರ ಅಸಮಾಧಾನ ಹೊರ ಹಾಕಿದೆ. ಮಾನವ ಹಕ್ಕುಗಳ ಕಾಳಜಿಯ ಮೇಲೆ ತನ್ನ ಅಧಿಕಾರಿಗಳನ್ನು ಕ್ರೀಡಾಕೂಟಕ್ಕೆ ಕಳುಹಿಸದಿರುವ ಬಿಡೆನ್​​​ ನಿರ್ಧಾರ ಎರಡೂ ದೇಶಗಳ ನಡುವಿನ ದ್ವೇಷವನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಸೈದ್ಧಾಂತಿಕ ಪೂರ್ವಾಗ್ರಹ ಹಾಗೂ ಸುಳ್ಳು ಮತ್ತು ವದಂತಿಗಳ ಆಧಾರದ ಮೇಲೆ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಹಸ್ತಕ್ಷೇಪ ಮಾಡಲು ಯುಎಸ್ ಸರ್ಕಾರ ಪ್ರಯತ್ನಿಸುತ್ತಿದೆ" ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಲ್ಲದೆ ಈ ಬಹಿಷ್ಕಾರ ಘೋಷಣೆ ಒಲಿಂಪಿಕ್ ಸ್ಥಾಪಿಸಿಕೊಂಡಿರುವ ಕ್ರೀಡೆಗಳ ರಾಜಕೀಯ ತಟಸ್ಥತೆಯ ತತ್ವವನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ ಮತ್ತು ಒಲಿಂಪಿಕ್ ಧ್ಯೇಯವಾಕ್ಯಕ್ಕೆ ವಿರೋಧವಾಗಿದೆ ಎಂದು ಝಾವೊ ಹೇಳಿದ್ದಾರೆ. ಸೋಮವಾರ 2022ರಲ್ಲಿ ಬೀಜಿಂಗ್​​ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​​ಗೆ ಯುಎಸ್ ಸರ್ಕಾರ​ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿತ್ತು. ಕ್ರೀಡಾಕೂಟದಲ್ಲಿಅಮೆರಿಕ ಸರ್ಕಾರದ ಯಾವುದೇ ಅಧಿಕಾರಿಗಳು ಪಾಲ್ಗೊಳ್ಳುವುದಿಲ್ಲ ಎಂದು ಜೋ ಬೈಡನ್​ ಆಡಳಿತ ಸ್ಪಷ್ಟಪಡಿಸಿತ್ತು.

ಚೀನಾದ ಕ್ಸಿನ್​ಜಿಯಾಂಗ್​​ನಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯಲು ಚೀನಾ ಸರ್ಕಾರ ವಿಫಲವಾಗಿದೆ. ಅಲ್ಲಿ ಅವರ ಹತ್ಯಾಕಾಂಡಗಳು ನಡೆಯುತ್ತಿವೆ. ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹಾಗಿದ್ದರೂ ಚೀನಾ ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ, ಬೀಜಿಂಗ್​ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​​ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕುತ್ತೇವೆ ಎಂದು ಯುಎಸ್​ ಸರ್ಕಾರ ತಿಳಿಸಿತ್ತು.

ಬೀಜಿಂಗ್​​ನ ಒಲಿಂಪಿಕ್ಸ್​​ನಲ್ಲಿ ಅಮೆರಿಕ ಸರ್ಕಾರದ ಯಾವುದೇ ರಾಜಕೀಯ ನಾಯಕ, ಅಧಿಕಾರಿಗಳು ಪಾಲ್ಗೊಳ್ಳುವುದಿಲ್ಲ. ಆದರೆ, ಅಮೆರಿಕದ ಎಲ್ಲಾ ಕ್ರೀಡಾಪಟುಗಳು ಫೆಬ್ರವರಿಯಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ.

ಇದನ್ನೂ ಓದಿ:ಅಮೆರಿಕದ ಉನ್ನತ ಹುದ್ದೆಗೆ ಇಂಡೋ - ಅಮೆರಿಕನ್ ನೇಮಿಸಿದ ಅಧ್ಯಕ್ಷ ಜೋ ಬೈಡನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.