ETV Bharat / sports

ಬೈಜೂಸ್​​ನ ಜಾಗತಿಕ ರಾಯಭಾರಿಯಾಗಿ ಫುಟ್‌ಬಾಲ್‌ ತಾರೆ ಲಿನೋನೆಲ್‌ ಮೆಸ್ಸಿ ನೇಮಕ

ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಎಜ್ಯುಟೆಕ್‌ ಪ್ರಮುಖ ಕಂಪನಿ ಬೈಜೂಸ್​​ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.

author img

By

Published : Nov 4, 2022, 5:01 PM IST

Updated : Nov 4, 2022, 7:59 PM IST

BYJU'S ropes in Lionel Messi as global brand ambassador for social initiative EFA

ಹೊಸದಿಲ್ಲಿ: ಶಿಕ್ಷಣ ಮತ್ತು ತಂತ್ರಜ್ಞಾನದ ದೈತ್ಯ ಬೈಜೂಸ್‌​ (BYJU) ಸಂಸ್ಥೆಯು ಖ್ಯಾತ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರನ್ನು ಗ್ಲೋಬಲ್ ಬ್ರ್ಯಾಂಡ್ ಅಂಬಾಸಡರ್ ಆಗಿ ಆಯ್ಕೆ ಮಾಡಿದೆ. ವಿಶ್ವದ ಸರ್ವಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುವ ಲಿಯೋನೆಲ್ ಮೆಸ್ಸಿ ಅವರು ಬೈಜೂಸ್‌ನ 'ಎಜುಕೇಶನ್ ಫಾರ್ ಆಲ್' ಯೋಜನೆಯ ಚೊಚ್ಚಲ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ.

ಅರ್ಜೆಂಟೀನಾದ ಫುಟ್‌ಬಾಲ್ ತಂಡದ ನಾಯಕರಾಗಿರುವ ಮೆಸ್ಸಿ, ಸಮಾನ ಶಿಕ್ಷಣದ ಕಾರಣವನ್ನು ಉತ್ತೇಜಿಸಲು ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕಂಪನಿ ಹೇಳಿಕೊಂಡಿದೆ.

ನಮ್ಮ ಜಾಗತಿಕ ರಾಯಭಾರಿಯಾಗಿ ಮೆಸ್ಸಿ ಅವರೊಂದಿಗೆ ಸಹಕರಿಸಲು ನಾವು ಉತ್ಸುಕರಾಗಿದ್ದೇವೆ. ಅವರು ತಳಮಟ್ಟದಿಂದ ಬೆಳೆದು ಬಂದವರು. ಅತ್ಯಂತ ಯಶಸ್ವಿ ಕ್ರೀಡಾ ಪಟುಗಳಲ್ಲಿ ಒಬ್ಬರಾದವರು. BYJU's Education For All (EFA) ಪ್ರಸ್ತುತ 5.5 ಮಿಲಿಯನ್ ಮಕ್ಕಳನ್ನು ಸಶಕ್ತಗೊಳಿಸುತ್ತಿದೆ. ಮೆಸ್ಸಿಗಿಂತ ಹೆಚ್ಚು ಮಾನವ ಶಕ್ತಿಯನ್ನು ಯಾರೂ ಪ್ರತಿನಿಧಿಸುವುದಿಲ್ಲ ಎಂದು ಸಹ - ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ.

ವಿಶ್ವಾದ್ಯಂತ ಫುಟ್‌ಬಾಲ್ ಸುಮಾರು 3.5 ಶತಕೋಟಿ ಅಭಿಮಾನಿಗಳನ್ನು ಹೊಂದಿರುವುದರಿಂದ, ವಿದೇಶದಲ್ಲಿ BYJU ಕಂಪನಿಯನ್ನು ಪರಿಚಯಿಸಲು ಲಿಯೋನೆಲ್ ಮೆಸ್ಸಿ ಕೈಜೋಡಿಸಲಿದ್ದಾರೆ. ಜಾಲತಾಣದಲ್ಲಿ ಮೆಸ್ಸಿ ಸುಮಾರು 450 ಮಿಲಿಯನ್ ಫಾಲೋವರ್ಸ್​ ಹೊಂದಿದ್ದು ಇದು ನಮ್ಮ ಕಂಪನಿಗೆ ಸಹಕಾರಿಯಾಗಲಿದೆ ಎಂದು ಬೈಜುಸ್ ಆಶಿಸಿದೆ.

ಸಾರ್ವಕಾಲಿಕ ಶ್ರೇಷ್ಠ ಆಟಗಾರನು ಸಾರ್ವಕಾಲಿಕ ಶ್ರೇಷ್ಠ ಕಲಿಯುವವನಾಗಿರುವುದು ಆಶ್ಚರ್ಯವೇನಿಲ್ಲ. ಈ ಪಾಲುದಾರಿಕೆಯು ಪ್ರಪಂಚದಾದ್ಯಂತದ ಲಕ್ಷಾಂತರ ಜನರಿಗೆ ದೊಡ್ಡ ಕನಸು ಕಾಣಲು ಮತ್ತು ಉತ್ತಮವಾಗಿ ಕಲಿಯಲು ಪ್ರೇರೇಪಿಸುತ್ತದೆ ಎಂದು ನಮಗೆ ಖಚಿತವಾಗಿದೆ ಎಂದು ದಿವ್ಯಾ ಗೋಕುಲನಾಥ್ ಭರವಸೆ ನೀಡಿದ್ದಾರೆ.

ಎಲ್ಲರೂ ಕಲಿಕೆ ಇಷ್ಟಪಡಬೇಕು ಎಂಬ ಬೈಜೂಸ್‌ನ ಉದ್ದೇಶ ನನಗೆ ಪ್ರಿಯವಾಯಿತು. ಅದಕ್ಕೆ ನಾನು ಬೈಜೂಸ್ ಜೊತೆ ಸಹಭಾಗಿಯಾಗಲು ನಿರ್ಧರಿಸಿದೆ. ಉತ್ತಮ ಗುಣಮಟ್ಟದ ಶಿಕ್ಷಣದಿಂದ ಬದುಕು ಪರಿವರ್ತನೆಯಾಗುತ್ತದೆ. ವಿಶ್ವಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ವೃತ್ತಿ ದಿಕ್ಕನ್ನೇ ಬೈಜೂಸ್ ಪರಿವರ್ತಿಸಿದೆ. ಯುವ ಕಲಿಕೆಗಾರರು ಅತ್ಯುನ್ನತ ಹಂತಕ್ಕೆ ಹೋಗಲು ಮತ್ತು ನೆಲಸಲು ಸ್ಫೂರ್ತಿ ಸಿಗಬಹುದು ಎಂದು ಆಶಿಸಿದ್ದೇನೆ ಎಂದು ಲಿಯೋನೆಲ್ ಮೆಸ್ಸಿ ತಿಳಿಸಿದ್ದಾರೆ.

BYJU'S ಸಂಸ್ಥೆಯು ಕತಾರ್‌ನಲ್ಲಿ ನಡೆಯುವ FIFA ವಿಶ್ವಕಪ್ 2022ರ ಅಧಿಕೃತ ಪ್ರಾಯೋಜಕರಾಗಿದ್ದು BYJUನ ಎಲ್ಲರಿಗೂ ಶಿಕ್ಷಣವನ್ನು ಉತ್ತೇಜಿಸುವ ಅಭಿಯಾನಗಳಲ್ಲಿ ಲಿಯೋನೆಲ್ ಮೆಸ್ಸಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: T20 World Cup: ಐರ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡ್​​ಗೆ ಜಯ.. ಸೋತ ಪಂದ್ಯದಲ್ಲಿ ಲಿಟಲ್ ಹ್ಯಾಟ್ರಿಕ್​ ಸಾಧನೆ

(ಈ ಸುದ್ದಿಯನ್ನು ETV ಭಾರತ ಎಡಿಟ್ ಮಾಡಿಲ್ಲ, ಸಿಂಡಿಕೇಟೆಡ್ ಫೀಡ್‌ನಿಂದ ತೆಗೆದುಕೊಳ್ಳಲಾಗಿದೆ)

Last Updated : Nov 4, 2022, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.