ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಫೆನ್ಸರ್ ಎಂಬ ಐತಿಹಾಸಿಕ ಸಾಧನೆಗೆ ಪಾತ್ರರಾಗಿದ್ದ ಭವಾನಿ ದೇವಿ, ಇದೀಗ ಫ್ರಾನ್ಸ್ನಲ್ಲಿ ನಡೆದ ಚಾರ್ಲ್‌ವಿಲ್ಲೆ ರಾಷ್ಟ್ರೀಯ ಸ್ಪರ್ಧೆಯ ಮಹಿಳೆಯ ಸೇಬರ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಫ್ರಾನ್ಸ್ನಲ್ಲಿ ನಡೆದ ಚಾರ್ಲ್ವಿಲ್ಲ್ ನ್ಯಾಷನಲ್ ಸ್ಪರ್ಧೆಯಲ್ಲಿ, ಮಹಿಳೆಯರ ಸೇಬರ್ ವಿಭಾಗದಲ್ಲಿ ಗೆಲುವು ಸಾಧಿಸಿದ್ದೇನೆ. ನನ್ನ ಗೆಲುವಿಗೆ ಕಾರಣರಾದ ಕೋಚ್ಗಳಾದ ಕ್ರಿಶ್ಚಿಯನ್ ಬಾಯರ್, ಅರ್ನಾಡ್ ಷ್ನೇಯ್ಡರ್ ಮತ್ತು ಎಲ್ಲ ನನ್ನ ಸಹ ಆಟಗಾರರಿಗೆ ತುಂಬಾ ಧನ್ಯವಾದಗಳು. ಈ ಆವೃತ್ತಿಯ ಉತ್ತಮವಾಗಿ ಆರಂಭಿಸಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
-
Won the Charlellville National Competition, France in the Women's Sabre individual.
— C A Bhavani Devi (@IamBhavaniDevi) October 17, 2021 " class="align-text-top noRightClick twitterSection" data="
Many thanks to coach Christian Bauer, Arnaud Schneider ,and all teammates
Congratulations to all for a great start of the season. pic.twitter.com/C0dflvOtlZ
">Won the Charlellville National Competition, France in the Women's Sabre individual.
— C A Bhavani Devi (@IamBhavaniDevi) October 17, 2021
Many thanks to coach Christian Bauer, Arnaud Schneider ,and all teammates
Congratulations to all for a great start of the season. pic.twitter.com/C0dflvOtlZWon the Charlellville National Competition, France in the Women's Sabre individual.
— C A Bhavani Devi (@IamBhavaniDevi) October 17, 2021
Many thanks to coach Christian Bauer, Arnaud Schneider ,and all teammates
Congratulations to all for a great start of the season. pic.twitter.com/C0dflvOtlZ
ಮೊದಲ ಭಾರತೀಯಳಾಗಿ ಟೋಕಿಯೋ ಒಲಿಂಪಿಕ್ಸ್ಗೆ ಪ್ರವೇಶಿಸಿದ್ದ ಭವಾನಿ ದೇವಿ, ಮೊದಲ ಪಂದ್ಯದವನ್ನು ತನಿಷಿಯಾದ ನಡಿಯಾ ಬೆನ್ ಅಜೀಜ್ ವಿರುದ್ಧ ಗೆಲುವು ಪಡೆದಿದ್ದರು. ಆದರೆ, ನಂತರದ ಫ್ರೀ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಕಂಚಿನ ಪದಕ ವಿಜೇತೆ ಫ್ರಾನ್ಸ್ನ ಮೆನೋನ್ ಬ್ರುನೆಟ್ ವಿರುದ್ಧ ಸೋಲು ಕಂಡಿದ್ದರು.
ದೇವಿ ಪ್ರಸ್ತುತ ವಿಶ್ವ ರ್ಯಾಂಕಿಂಗ್ನಲ್ಲಿ 50ನೇ ಸ್ಥಾನದಲ್ಲಿದ್ದಾರೆ. ಅವರು ಭಾರತದ ಅಗ್ರ ಶ್ರೇಯಾಂಕದ ಫೆನ್ಸರ್ ಆಗಿದ್ದಾರೆ. ಭವಾನಿ 2022ರಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದು, ಸಾಕಷ್ಟು ಶಿಸ್ತುಬದ್ದ ತರಬೇತಿ ನಡೆಸುತ್ತಿದ್ದಾರೆ.
ಇದನ್ನು ಓದಿ: ವಿಶ್ವಕಪ್ನಲ್ಲಿ ನನ್ನ ಮೇಲೆ ದೊಡ್ಡ ಜವಾಬ್ದಾರಿಯಿದೆ, ಅದಕ್ಕೆ ಮಾಹಿ ಭಾಯ್ ನೆರವಾಗಲಿದ್ದಾರೆ: ಹಾರ್ದಿಕ್