ETV Bharat / sports

ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್: 3 ಚಿನ್ನದ ಪದಕ ಗೆದ್ದ ಭಗತ್, ಕದಂಗೆ ಬಂಗಾರ, ಬೆಳ್ಳಿ - ಪ್ರಮೋದ್ ಭಗತ್

ವಿಶ್ವದ ನಂ.1 ಪ್ಯಾರಾಲಿಂಪಿಕ್ಸ್‌ ಆಟಗಾರ ಪ್ರಮೋದ್​ ಭಗತ್ ಅವರು ಸಿಂಗಲ್ಸ್​​, ಪುರುಷರ ಡಬಲ್ಸ್​ ಮತ್ತು ಮಿಶ್ರ ಡಬಲ್ಸ್​​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

bhagat
bhagat
author img

By

Published : Mar 7, 2022, 4:40 PM IST

ನವದೆಹಲಿ: ಟೋಕಿಯೋ ಪ್ಯಾರಾ ಒಲಿಂಪಿಕ್ಸ್​ನಲ್ಲಿ ಚಿನ್ನ ಪಡೆದು ಮಿಂಚಿದ್ದ ಭಾರತದ ಪ್ರಮೋದ್ ಭಗತ್ ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್-2 ಟೂರ್ನಿಯಲ್ಲಿ ಮೂರು ವಿಭಾಗಗಳಲ್ಲೂ ಚಿನ್ನ ಪದಕ ಪಡೆದು ಪಾರುಪತ್ಯ ಮರೆದಿದ್ದಾರೆ.

ಸ್ಪೇನ್​ನ ವಿಟೋರಿಯಾದಲ್ಲಿ ರವಿವಾರ ಮುಕ್ತಾಯವಾದ ಟೂರ್ನಿಯಲ್ಲಿ ವಿಶ್ವದ ಅಗ್ರಶ್ರೇಯಾಂಕಿತ ಆಟಗಾರ ಪ್ರಮೋದ್​ ಭಗತ್ ಅವರು ಸಿಂಗಲ್ಸ್​​ನಲ್ಲಿ ಕುಮಾರ ನಿತೇಶ್ ಅವರೊಂದಿಗೆ ಕಠಿಣ ಪೈಪೋಟಿಯಲ್ಲಿ ಗೆಲುವು ಸಾಧಿಸಿದರು. ಒಂದು ಗಂಟೆ ನಿಮಿಷದ ನಡೆದ ಪಂದ್ಯದಲ್ಲಿ 17-21, 21-17, 21-17 ಅಂತರದೊಂದಿಗೆ ಭಗತ್​ ಬಂಗಾರದ ಪದಕಕ್ಕೆ ಮುತ್ತಿಕ್ಕಿದರು.

ಪುರುಷರ ಡಬಲ್ಸ್​ನಲ್ಲಿ ಭಗತ್​ ಮತ್ತು ಮನೋಜ್​ ಸರ್ಕಾರ್​ ಜೋಡಿಯು ಭಾರತದ ಸುಕಾಂತ ಕದಂ ಮತ್ತು ನಿತೇಶ್​ ಜೋಡಿಯನ್ನು ಪರಾಭವಗೊಳಿಸಿತು. ಸಾಕಷ್ಟು ಏರಿಳಿತದಿಂದ ಕೂಡಿದ್ದ ಪಂದ್ಯದಲ್ಲಿ 21-19, 11-21, 21-11 ಅಂತರದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ನಂತರ ಮಿಶ್ರ ಡಬಲ್ಸ್​​ನಲ್ಲಿ ಪಾಲಕ್​ ಕೊಹ್ಲಿ ಜತೆಗೂಡಿ ಪ್ರಮೋದ್​ ಭಗತ್ ಕೂಡ ಸ್ವರ್ಣ ಪದಕ ಗೆದ್ದರು. ಭಾರತದ ಋತಿಕ್ ರಘುಪತಿ ಮತ್ತು ಮಾನಸಿ ಗಿರೀಶಚಂದ್ರ ಜೋಶಿ ಎದುರು 14-21, 21-11, 21-14 ಅಂತರದಲ್ಲಿ ಜಯಗಳಿಸಿದರು.

ಮೂರು ಚಿನ್ನದ ಪದಕಗಳ ಗೆಲುವಿನ ಬಗ್ಗೆ ಖುಷಿ ಹಂಚಿಕೊಂಡಿರುವ ಭಗತ್​, ಇದು ನನ್ನ ಪಾಲಿಗೆ ವಿಶೇಷ ಟೂರ್ನಿ. 2 ಟೂರ್ನಿಗಳ ನಂತರ ನನಗೆ ಸಿಕ್ಕ ಮೊದಲ ಜಯ ಎಂದು ತಿಳಿಸಿದ್ದಾರೆ.

ಸುಕಾಂತ ಕದಂಗೆ 2 ಪದಕ: ಮತ್ತೋರ್ವ ಆಟಗಾರ ಸುಕಾಂತ ಕದಂ ಕೂಡ ಒಂದು ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದು ಮಿಂಚಿದ್ದಾರೆ. ವಿಶ್ವ ನಂ.4 ಆಟಗಾರನಾದ ಸುಕಾಂತ ಕದಂ ಅವರು ಜರ್ಮನ್​ನ ಮಾರ್ಸೆಲ್ ಆಡಮ್ ವಿರುದ್ಧ 21-13, 21-18 ಅಂತರದಿಂದ ಜಯ ಸಾಧಿಸಿದರು. ಅಲ್ಲದೇ, ಪುರುಷರ ಡಬಲ್ಸ್​ನಲ್ಲಿ ಭಗತ್​ ಮತ್ತು ಮನೋಜ್​ ಸರ್ಕಾರ್​ ಜೋಡಿಯು ವಿರುದ್ಧ ಪರಾಭವಗೊಂಡು ಸುಕಾಂತ ಕದಂ ಮತ್ತು ನಿತೇಶ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಇದನ್ನೂ ಓದಿ: ಮೆಲ್ಬೋರ್ನ್​ ಕ್ರಿಕೆಟ್​​ ಮೈದಾನದಲ್ಲಿ ಶೇನ್​ ವಾರ್ನ್​​ಗೆ ಅಂತಿಮ ಗೌರವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.