ETV Bharat / sports

ಇಂದು ತನ್ನ ಕೊನೆಯ ಪಂದ್ಯದಲ್ಲಿ ಹರಿಯಾಣ ತಂಡದೊಂದಿಗೆ ಬುಲ್ಸ್​ ಸೆಣಸಾಟ... ಗೆದ್ದರಷ್ಟೇ ಪ್ಲೇ ಆಫ್ ಚಾನ್ಸ್​​! - ಪಾಟ್ನಾ ಪೈರೇಟ್ಸ್​ vs ದಬಾಂಗ್ ಡೆಲ್ಲಿ

ಬುಲ್ಸ್​ 21 ಪಂದ್ಯಗಳಲ್ಲಿ 10 ಗೆಲುವು 9 ಸೋಲು ಹಾಗೂ 2 ಸೋಲುಗಳೊಂದಿಗೆ 61 ಅಂಕ ಪಡೆದು 6ನೇ ಸ್ಥಾನದಲ್ಲಿದೆ. ಇತ್ತ ಸ್ಟೀಲರ್ಸ್​ 20 ಪಂದ್ಯಗಳಿಂದ 10 ಗೆಲುವು, 7 ಸೋಲು ಮತ್ತು 3 ಟೈ ಸಾಧಿಸಿ 4ನೇ ಸ್ಥಾನದಲ್ಲಿದೆ.

Bengaluru bulls play must win game against Haryana stealers
ಬೆಂಗಳೂರು ಬುಲ್ಸ್​ vs ಹರಿಯಾಣ ಸ್ಟೀಲರ್ಸ್​
author img

By

Published : Feb 17, 2022, 6:46 PM IST

ಬೆಂಗಳೂರು: ಆರಂಭದಲ್ಲಿ ಅಬ್ಬರಿಸಿ ಅಂಕ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಬೆಂಗಳೂರು ಬುಲ್ಸ್​, ಮಧ್ಯಂತರದಲ್ಲಿ ವೈಫಲ್ಯ ಅನುಭಿಸಿದೆ. ಇಂದು ತನ್ನ ಕೊನೆಯ ಪಂದ್ಯವನ್ನು ಹರಿಯಾಣ ಸ್ಟೀಲರ್ಸ್ ವಿರುದ್ಧ ಆಡಲಿದ್ದು, ಪ್ಲೇ ಆಫ್​ ಪ್ರವೇಶಿಸಬೇಕಾದರೆ ಗೆಲುವು ಅನಿವಾರ್ಯವಾಗಿದೆ.

ಬುಲ್ಸ್​ 21 ಪಂದ್ಯಗಳಲ್ಲಿ 10 ಗೆಲುವು 9 ಸೋಲು ಹಾಗೂ 2 ಸೋಲುಗಳೊಂದಿಗೆ 61 ಅಂಕ ಪಡೆದು 6ನೇ ಸ್ಥಾನದಲ್ಲಿದೆ. ಇತ್ತ ಸ್ಟೀಲರ್ಸ್​ 20 ಪಂದ್ಯಗಳಿಂದ 10 ಗೆಲುವು, 7 ಸೋಲು ಮತ್ತು 3 ಟೈ ಸಾಧಿಸಿ 4ನೇ ಸ್ಥಾನದಲ್ಲಿದೆ.

12 ತಂಡಗಳಲ್ಲಿ 6 ತಂಡಗಳು ಮಾತ್ರ ಪ್ಲೇ ಆಫ್​ ಪ್ರವೇಶಿಸಲಿವೆ. ಈ ಪಂದ್ಯವನ್ನು ಗೆದ್ದರೆ ಬುಲ್ಸ್ ಅಂಕ 66 ಆಗಲಿದ್ದು, ಫ್ಲೇ ಆಫ್​ ಕನಸು ಉಳಿದುಕೊಳ್ಳಲಿದೆ. ಒಂದು ವೇಳೆ ಸೋತರೆ ಟೂರ್ನಿಯಿಂದ ಹೊರ ಬೀಳಲಿದೆ. ಈಗಾಗಲೇ ತಮಿಳ್​ ತಲೈವಾಸ್, ತೆಲುಗು ಟೈಟನ್ಸ್​, ಬೆಂಗಾಲ್​ ವಾರಿಯರ್ಸ್​ ಟೂರ್ನಿಯಿಂದ ಹೊರಬಿದ್ದ ತಂಡಗಳಾಗಿವೆ.

ಇತ್ತ ಸ್ಟೀಲರ್ಸ್​ ಈ ಪಂದ್ಯವನ್ನು ಗೆದ್ದರೆ 2ನೇ ಸ್ಥಾನಕ್ಕೆ ಲಗ್ಗೆಯಿಡಲಿದ್ದು, ಬಹುತೇಕ ಪ್ಲೇ ಆಫ್​ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಒಂದು ವೇಳೆ ಸೋತರೂ ಕೊನೆಯ ಪಂದ್ಯ ಮತ್ತೊಂದು ಅವಕಾಶವನ್ನು ನೀಡಲಿದೆ.

ಕನ್ನಡಿಗ ಪ್ರಶಾಂತ್ ರೈ ನೇತೃತ್ವದ ಪಾಟ್ನಾ ಪೈರೇಟ್ಸ್​ ಪ್ರಸ್ತುತ ಪ್ಲೇ ಆಫ್​ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಏಕೈಕ ತಂಡವಾಗಿದೆ. ಇಂದು ಪಾಟ್ನಾ ತನ್ನ ಔಪಚಾರಿಕ ಪಂದ್ಯದಲ್ಲಿ ಪ್ಲೇ ಆಫ್​ ನತ್ತ ದೃಷ್ಟಿಯಿಟ್ಟಿರುವ ದಬಾಂಗ್ ಡೆಲ್ಲಿ ವಿರುದ್ಧ ಸೆಣಸಾಡಲಿದೆ.

ಇದನ್ನೂ ಓದಿ:ರಣಜಿ ಟ್ರೋಫಿ: ಪದಾರ್ಪಣೆ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್​ ಪಡೆದ ರಾಜ್​ ಬಾವಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.