ಮೆಲ್ಬೋರ್ನ್: ಮಹಿಳಾ ಟೆನಿಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಆ್ಯಶ್ಲೇ ಬಾರ್ಟಿ ಗುರುವಾರ ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಅಮೆರಿಕಾದ ಶ್ರೇಯಾಂಕ ರಹಿತ ಮ್ಯಾಡಿಸನ್ ಕೇಸ್ ವಿರುದ್ಧ ನೇರ ಸೆಟ್ಗಳ ಜಯದೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ.
25 ವರ್ಷದ ಬಾರ್ಟಿ 2017ರ ಯುಎಸ್ ಓಪನ್ ರನ್ನರ್ ಅಪ್ ಅಮೆರಿಕನ್ ಆಟಗಾರ್ತಿ ವಿರುದ್ಧ 6-1, 6-3ರಲ್ಲಿ ಮಣಿಸಿ 42 ವರ್ಷಗಳ ಬಳಿಕ ಈ ಟೂರ್ನಮೆಂಟ್ನಲ್ಲಿ ಫೈನಲ್ ಪ್ರವೇಶಿಸಿದ ಆಸೀಸ್ ಪ್ಲೇಯರ್ ಎನಿಸಿಕೊಂಡರು.
ಬಾರ್ಟಿ 4 ದಶಕಗಳ ಬಳಿಕ ಫೈನಲ್ ತಲುಪಿದ ಆಸ್ಟ್ರೇಲಿಯನ್ ಎನಿಸಿಕೊಂಡಿದ್ದಾರೆ. 1980ರಲ್ಲಿ ವೆಂಡಿ ಟರ್ನ್ಬುಲ್ ಫೈನಲ್ ತಲುಪಿದ್ದ ಕೊನೆಯ ಆಸ್ಟ್ರೇಲಿಯನ್ ಆಟಗಾರ್ತಿ. 1978ರಲ್ಲಿ ಕ್ರಿಸ್ ಒನೀಲ್ ಕೊನೆಯ ಬಾರಿ ಸಿಂಗಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ವಿಶ್ವದ ನಂಬರ್ 1 ಆಟಗಾರರ್ತಿಯಾಗಿರುವ ಬಾರ್ಟಿ ತಮ್ಮ ಫೈನಲ್ವರೆಗೆ ಆಡಿರುವ 6 ಪಂದ್ಯಗಳಲ್ಲೂ ನೇರ ಸೆಟ್ಗಳಲ್ಲೇ ಗೆಲುವು ಸಾಧಿಸಿದ್ದಾರೆ. ಒಟ್ಟು ಆಡಿರುವ 93 ಗೇಮ್ಗಳಲ್ಲಿ ಎದುರಾಳಿಗೆ ಕೇವಲ 17 ಗೇಮ್ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಫೈನಲ್ ಪಂದ್ಯದಲ್ಲಿ 27ನೇ ಶ್ರೇಯಾಂಕದ ಅಮೆರಿಕನ್ ಡ್ಯಾನಿಯಲ್ ಕಾಲಿನ್ಸ್ ವಿರುದ್ಧ ಶನಿವಾರ ಸೆಣಸಾಡಲಿದ್ದಾರೆ.
28 ವರ್ಷದ ಕಾಲಿನ್ಸ್ ಗುರುವಾರ ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ 7ನೇ ಶ್ರೇಯಾಂಕದ ಪೊಲೆಂಡ್ನ ಇಗಾ ಸ್ವಿಯಾಟೆಕ್ ವಿರುದ್ಧ 6-4,6-1ರಲ್ಲಿ ಜಯ ಸಾಧಿಸಿ ಇದೇ ಮೊದಲ ಬಾರಿಗೆ ಗ್ರ್ಯಾಂಡ್ಸ್ಲಾಮ್ ಫೈನಲ್ ಪ್ರವೇಶಿಸಿದ್ದಾರೆ.
ಬಾರ್ಟಿ ಇಲ್ಲಿಯವರೆಗೂ 2 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಮಾತ್ರ ಗೆದ್ದಿದ್ದಾರೆ. 2019ರಲ್ಲಿ ಫ್ರೆಂಚ್ ಮತ್ತು 2021ರಲ್ಲಿ ವಿಂಬಲ್ಡನ್ ಟ್ರೋಫಿ ಎತ್ತಿ ಹಿಡಿದಿದ್ದರು. ಇದೀಗ 28 ವರ್ಷದ ಕಾಲಿನ್ಸ್ ವಿರುದ್ಧ ಗೆದ್ದು ತವರಿನಲ್ಲಿ 4 ದಶಕಗಳ ನಂತರ ಪ್ರಶಸ್ತಿ ಎತ್ತಿ ಹಿಡಿಯುವ ಕನಸಿನಲ್ಲಿದ್ದಾರೆ.
ಇದನ್ನೂ ಓದಿ:RCB ಅಲ್ಲ, ಈ ತಂಡದ ಪರ ಆಡುವ ಇಚ್ಛೆ ವ್ಯಕ್ತಪಡಿಸಿದ ಹರ್ಷಲ್ ಪಟೇಲ್