ಮುಂಬೈ : ಅಥ್ಲೀಟ್ ದ್ಯುತಿ ಚಾಂದ್ ಜೀವನದ ಮೇಲೆ ಈಗ ಬಿಟೌನ್ ಬಹಳಷ್ಟು ಇಂಟ್ರೆಸ್ಟ್ ತೋರಿಸ್ತಿದೆ. ದ್ಯುತಿ ಜೀವನ ಚರಿತ್ರೆಯನ್ನ ತೆರೆ ಮೇಲೆ ತರಲು ಚಿತ್ರ ತಯಾರಕರು ಪೈಪೋಟಿಗೆ ಬಿದ್ದಂತಿದೆ. ಸಾಕಷ್ಟು ಜನ ಈಗಾಗಲೇ ಈ ಕ್ರೀಡಾ ತಾರೆಯನ್ನ ಅಪ್ರೋಚ್ ಮಾಡಿದ್ದಾರಂತೆ.
ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ಕ್ರೀಡೆಗೆ ಸಂಬಂಧಿಸಿದ ಚಿತ್ರಗಳು ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಬಂದಿವೆ. ದಂಗಲ್ ಚಿತ್ರವಂತೂ ಅಮೀರ್ ಖಾನ್ ಚಿತ್ರ ಜೀವನದಲ್ಲಿ ಸಾರ್ವಕಾಲಿಕ ಹಿಟ್ ಲಿಸ್ಟ್‌ಗೆ ಸೇರಿತು. ಸುಲ್ತಾನ್, ಮೇರಿಕೋಮ್, ಭಾಗ್ ಮಿಲ್ಕಾ ಭಾಗ್, ಚಕ್‌ದೇ ಇಂಡಿಯಾ, ಎಂ.ಎಸ್ ಧೋನಿ, ಲಗಾನ್, ಇಕ್ಬಾಲ್, ಸಚಿನ್, ಸೂರ್ಮಾ ಹೀಗೆ ದೊಡ್ಡ ಪಟ್ಟಿಯೇ ಇದೆ. ಈಗ ಮತ್ತೊಂದು ಕ್ರೀಡಾ ತಾರೆಯ ಜೀವನ ತೆರೆಯ ಮೇಲೆ ಬರಲಿದೆ.
ದ್ಯುತಿ ಮನಸ್ಸಲ್ಲಿ ಬಿಟೌನ್ ರಾಣಿ ಕಂಗನಾ ರನೌವತ್!
ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ಈಗಾಗಲೇ ಅನಿಲ್ ಕಪೂರ್ ಮತ್ತು ಭಾಗ್ ಮಿಲ್ಕಾ ಭಾಗ್ ಮತ್ತು ರಂಗ್‌ದೇ ಬಸಂತಿ ಖ್ಯಾತಿಯ ರಾಕೇಶ್ ಓಂಪ್ರಕಾಶ ಮೆಹ್ರಾ ತಮ್ಮ ಭೇಟಿಯಾಗಿದ್ದರು ಅಂತಾ ಆಥ್ಲೀಟ್ ದ್ಯುತಿ ಚಂದ್ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರ ನಿರ್ಮಿಸಲು ತಮಗೆ ಹಕ್ಕು ಕೊಡಬೇಕೆಂದು ಕಪೂರ್ ಮತ್ತು ಮೆಹ್ರಾ ಕೇಳಿದ್ದಾರೆ ಅಂತಾ ದ್ಯುತಿ ಹೇಳಿಕೊಂಡಿದ್ದಾರೆ. ದ್ಯುತಿ ಚಾಂದ್ ಈವರೆಗೂ ಚಿತ್ರ ಮಾಡೋದಕ್ಕೆ ಹಕ್ಕು ನೀಡಿಲ್ಲ. ಆದರೆ, ಒಂದು ವೇಳೆ ತನ್ನ ಜೀವನಾಧಾರಿತ ಚಿತ್ರ ನಿರ್ಮಾಣವಾದ್ರೇ ಬಾಲಿವುಡ್‌ನ ರೆಬೆಲ್ ರಾಣಿ ಕಂಗನಾ ರನೌವತ್ ಮಾಡಿದ್ರೇ ನ್ಯಾಯ ಸಿಕ್ಕುತ್ತೆ ಅಂತಾ ಹೇಳಿಕೊಂಡಿದ್ದಾರೆ.ಏನೀವಾಗ, ನನ್ನ ಜೀವನ, ನನ್ನಿಷ್ಟದಂತೆ ಜೀವಿಸುವೆ-ದ್ಯುತಿ!
100 ಮತ್ತು 200 ಮೀಟರ್ ಸ್ಪ್ರಿಂಟರ್ ದ್ಯುತಿ 100 ಮೀಟರ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್. 23 ವರ್ಷದ ದ್ಯುತಿ 167 ಮೀ ಎತ್ತರ, 50 ಕೆಜಿ ತೂಕ ಹೊಂದಿದ್ದಾರೆ. ಒಡಿಶಾ ಜಾಜಪುರ ಜಿಲ್ಲೆಯಲ್ಲಿ ಫೆಬ್ರವರಿ 3, 1996ರಲ್ಲಿ ಬಡ ಕುಟುಂಬದೊಳಗೆ ಹುಟ್ಟಿರುವ ಈಕೆ ಅಥ್ಲೀಟಾಗಿ ಬೆಳೆದ ಪರಿ ರೋಚಕ. ಸ್ಪ್ರಿಂಟರ್ ದ್ಯುತಿ ಚಾಂದ್ ಇತ್ತೀಚೆಗಷ್ಟೇ ಸಲಿಂಕ ಕಾಮದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಇದಾದ ಮೇಲೆ ಅವರ ಕುಟುಂಬದಲ್ಲಿನ ಅಂತಃಕಲವಾಗಿ ಈಗ ದೃುತಿ ಬೇರೆಯಾಗಿ ವಾಸಿಸುತ್ತಿದ್ದಾರೆ. ಸಂಸ್ಕೃತಿ, ಸಂಪ್ರದಾಯ ಎಲ್ಲವನ್ನೂ ಧಿಕ್ಕರಿಸಿ ತಾನೊಬ್ಬ ಸಲಿಂಗಿಯಾಗಿದ್ದೇನೆ. ತನ್ನದೇ ಹಳ್ಳಿಯ 19 ವರ್ಷದ ಯುವತಿ ಜತೆಗೆ ಸಂಬಂಧವಿದೆ ಅಂತಾ ದ್ಯುತಿ ಹೇಳಿಕೊಂಡಿದ್ದರು. 2018ರಲ್ಲಿ ಸುಪ್ರೀಂಕೋರ್ಟ್ ಸಲಿಂಗ ವಿವಾಹ ಕಾನೂನುಬದ್ಧಗೊಳಿಸಿತ್ತು. ಇದಾದ ಮೇಲೆಯೇ ದ್ಯುತಿ ಬಹಿರಂಗವಾಗಿ ತಾನೊಬ್ಬ ಲೆಸ್ಬಿಯನ್ ಅಂತಾ ಹೇಳಿಕೊಂಡಿದ್ದರು. ಈಕೆಯ ಈ ನಡೆ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಇದನ್ನೆಲ್ಲ ನೋಡಿಯೇ ಈಗ ಬಾಲಿವುಡ್ ಮಂದಿ ಅಥ್ಲೀಟ್ ದ್ಯುತಿ ಚಾಂದ್ ಹಿಂದೆ ಓಡುತ್ತಿದ್ದಿದ್ದಾರೆ.ಸಚಿನ್ ಜೊತೆ ದ್ಯುತಿ ಚಾಂದ್