ETV Bharat / sports

ಪ್ಯಾರಾ ಏಷ್ಯನ್​ ಗೇಮ್ಸ್​​, 6ನೇ ದಿನ: 99 ಪದಕ ಗೆದ್ದು ದಾಖಲೆ ಬರೆದ ಭಾರತ; ನಾಳೆ ಕ್ರೀಡಾಕೂಟಕ್ಕೆ​ ತೆರೆ - ETV Bharath Karnataka

ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ 4ನೇ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ ಭಾರತ 99 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.

Asian Para Games 2023
Asian Para Games 2023
author img

By ETV Bharat Karnataka Team

Published : Oct 27, 2023, 10:38 PM IST

ಹ್ಯಾಂಗ್​ಝೌ (ಚೀನಾ): 19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾರತ 107 ಪದಕಗಳನ್ನು ಗೆದ್ದು ದಾಖಲೆ ಮಾಡಿತ್ತು. 4ನೇ ಪ್ಯಾರಾ ಏಷ್ಯಾಡ್​ನಲ್ಲೂ ಭಾರತೀಯ ಅಥ್ಲೀಟ್​ಗಳು ಹಿಂದಿನ ಪದಕ ಸಾಧನೆ ಮೀರಿ ಗೆದ್ದು ದಾಖಲೆ ಮಾಡಿದ್ದಾರೆ. ನಾಳೆ ಪ್ಯಾರಾ ಏಷ್ಯನ್​ ಗೇಮ್ಸ್​ಗೆ ತೆರೆ ಬೀಳಲಿದ್ದು, 6ನೇ ದಿನವಾದ ಇಂದು ಭಾರತ 17 ಪದಕ ಬಾಚಿಕೊಂಡಿದ್ದು 7 ಚಿನ್ನ, 6 ಬೆಳ್ಳಿ ಮತ್ತು 4 ಕಂಚು ಒಳಗೊಂಡಿದೆ. ಒಟ್ಟಾರೆ ಭಾರತ ಇಲ್ಲಿಯವರೆಗೆ 99 (25 ಚಿನ್ನ, 29 ಬೆಳ್ಳಿ ಮತ್ತು 45 ಕಂಚು) ಪದಕಗಳನ್ನು ಗೆದ್ದಿದೆ.

ಏಷ್ಯನ್ ಪ್ಯಾರಾ ಗೇಮ್ಸ್‌ನ ನಾಲ್ಕನೇ ಆವೃತ್ತಿಗೆ ಭಾರತದಿಂದ 303 ಅಥ್ಲೀಟ್‌ಗಳನ್ನು- 191 ಪುರುಷರು ಮತ್ತು 112 ಮಹಿಳೆಯರು ತೆರಳಿದ್ದರು. ಮೊದಲ ಬಾರಿಗೆ ಇಷ್ಟು ಪ್ಯಾರಾ ಅಥ್ಲೀಟ್​ಗಳು ಭಾಗವಹಿಸಿದ್ದಾರೆ. 2018ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತವು 190 ಕ್ರೀಡಾಪಟುಗಳನ್ನು ಕಳುಹಿಸಿತ್ತು. 15 ಚಿನ್ನ ಸೇರಿದಂತೆ 72 ಪದಕಗಳನ್ನು ಗೆದ್ದುಕೊಂಡಿತ್ತು.

ಇಂದಿನ ಪದಕ ಗೆಲುವು:
ಚಿನ್ನ:

  • ಮಹಿಳೆಯರ ವೈಯಕ್ತಿಕ ಆರ್ಚರಿ ಕಾಂಪೌಂಡ್ ಓಪನ್ ಸ್ಫರ್ಧೆಯಲ್ಲಿ ಶೀತಲ್ ದೇವಿ ಚಿನ್ನದ ಪದಕ ಗೆದ್ದರು.
  • ಪುರುಷರ 1,500 ಮೀ. ಟಿ-38 ಪುರುಷರ 1500ಮೀ ಟಿ-38 ಸ್ಪರ್ಧೆಯಲ್ಲಿ ರಮಣ್ ಶರ್ಮಾ ಚಿನ್ನದ ಪದಕ ಗೆದ್ದಿದ್ದಾರೆ. ಈವೆಂಟ್​ನಲ್ಲಿ ಅವರು 4:20.80 ಸಮಯದಲ್ಲಿ ಗುರಿ ತಲುಪಿ ಏಷ್ಯಾನ್​ ಗೇಮ್ಸ್‌ನಲ್ಲಿ ದಾಖಲೆ ಬರೆದಿದ್ದಾರೆ.
  • ಬ್ಯಾಡ್ಮಿಂಟನ್​ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದ್ದು ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದುಕೊಂಡಿದೆ. ಪುರುಷರ ಡಬಲ್ಸ್​ ನಿತೇಶ್ ಕುಮಾರ್, ತರುಣ್ ಮತ್ತು ಸಿಂಗಲ್ಸ್​​ನಲ್ಲಿ ಪ್ರಮೋದ್ ಭಗತ್, ಸುಹಾಸ್ ಯತಿರಾಜ್ ಹಾಗೆಯೇ ಮಹಿಳೆಯರ ಸಿಂಗಲ್ಸ್ ಎಸ್​ಯು 5 ವಿಭಾಗದಲ್ಲಿ ತುಳಸಿಮತಿ ಮುರುಗೇಶನ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
  • ಪುರುಷರ ಲಾಂಗ್ ಜಂಪ್-ಟಿ64 ವಿಭಾಗದಲ್ಲಿ 6.80ದೂರ ಜಿಗಿದು ಹೊಸ ಏಷ್ಯನ್ ರೆಕಾರ್ಡ್ ಮತ್ತು ಪ್ಯಾರಾ ಗೇಮ್ಸ್ ದಾಖಲೆ ಧರ್ಮರಾಜ್ ಸೋಲೈರಾಜ್ ಚಿನ್ನದ ಪದಕ ಗೆದ್ದಿದ್ದಾರೆ.

ಬೆಳ್ಳಿ:

  • ಪ್ರಮೋದ್ ಭಗತ್ ಅವರೊಂದಿಗೆ ಇನ್ನೋರ್ವ ಭಾರತೀಯ ಅಥ್ಲೀಟ್​ ನಿತೇಶ್ ಕುಮಾರ್ ಸ್ಪರ್ಧಿಸಿದ್ದು, ಬೆಳ್ಳಿ ಪದಕ ಗೆದ್ದಿದ್ದಾರೆ. ಪುರುಷರ ಡಬಲ್ಸ್ ಎಸ್​ಯು 5ನಲ್ಲಿ ಚಿರಾಗ್ ಬರೆತಾ ಮತ್ತು ರಾಜ್ ಕುಮಾರ್​ ಬೆಳ್ಳಿ ಗೆದ್ದಿದ್ದಾರೆ. ಮಹಿಳೆಯರ ಡಬಲ್ಸ್ ಎಸ್​ಎಲ್​ 3 -ಎಸ್​ಯು 5 ನಲ್ಲಿ ತುಳಸಿಮತಿ ಮುರುಗೇಶನ್ ಮತ್ತು ಮಾನಸಿ ಜೋಶಿ ಬೆಳ್ಳಿ ಗೆದ್ದರು. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ - ಎಸ್​​ಹೆಚ್​​​​ 6 ವಿಭಾಗದಲ್ಲಿ ಕೃಷ್ಣಾ ನಗರ್ ಬೆಳ್ಳಿ ಗೆದ್ದಿದ್ದಾರೆ.
  • ಪುರುಷರ ವೈಯಕ್ತಿಕ ಕಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ರಾಕೇಶ್ ಕುಮಾರ್ ಇರಾನ್‌ನ ಅಲಿಸಿನಾ ಮನ್ಶೇಜಾದೆ ವಿರುದ್ಧ ಹೋರಾಟದಲ್ಲಿ ನಿಕಟವಾಗಿ ಸೋಲು ಕಂಡು ಬೆಳ್ಳಿ ಗೆದ್ದರು.
  • ಪುರುಷರ ಜಾವೆಲಿನ್ ಥ್ರೋ ಎಫ್​-54 ಈವೆಂಟ್​ನಲ್ಲಿ ಪ್ರದೀಪ್ ಕುಮಾರ್ 25.94 ಮೀಟರ್‌ ದೂರ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ.

ಕಂಚು:

  • ಮಹಿಳೆಯರ ಡಿಸ್ಕಸ್ ಥ್ರೋ-ಎಫ್ 37/38 ರಲ್ಲಿ 22.55 ಮೀಟರ್ ಎಸೆದು ಲಕ್ಷ್ಮಿ ಕಂಚಿನ ಪದಕ ಗೆದ್ದಿದ್ದಾರೆ.
  • ಪುರುಷರ ಜಾವೆಲಿನ್ ಥ್ರೋ ಎಫ್​-54 ಸ್ಪರ್ಧೆಯಲ್ಲಿ ಲಕ್ಷಿತ್ ಮತ್ತು ಅಭಿಷೇಕ್ ಚಮೋಲಿ ಕಂಚಿನ ಪದಕ ಗೆದ್ದಿದ್ದಾರೆ.
  • ಪುರುಷರ ಶಾಟ್‌ಪುಟ್ ಎಫ್​ 37 ಈವೆಂಟ್​ನಲ್ಲಿ 14.09ರ ತನ್ನ ವೈಯಕ್ತಿಕ ಅತ್ಯುತ್ತಮ ಥ್ರೋ ದಾಖಲಿಸಿ ಮನು ಕಂಚಿನ ಪದಕ ಪಡೆದರು.
  • ಪ್ಯಾರಾ ಏಷ್ಯನ್​ ಗೇಮ್ಸ್​​ನ ಈಜು ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕವನ್ನು ಸುಯಶ್ ಜಾಧವ್ ತಂದುಕೊಟ್ಟರು. ಪುರುಷರ 50ಮೀ ಬಟರ್‌ಫ್ಲೈ ಎಸ್​ 7 ಈವೆಂಟ್‌ನಲ್ಲಿ 32.22 ಸಮಯದಲ್ಲಿ ಗುರಿ ತಲುಪಿ ಕಂಚು ಗೆಲ್ಲುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಪ್ಯಾರಾ ಏಷ್ಯನ್​ ಗೇಮ್ಸ್​​: ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ 3 ಚಿನ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.