ಹ್ಯಾಂಗ್‌ಝೌ (ಚೀನಾ): ಶೂಟಿಂಗ್ ವಿಭಾಗದ ನಂತರ ಭಾರತ ಅಥ್ಲೆಟಿಕ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಏಷ್ಯಾಡ್ನ 9ನೇ ದಿನವಾದ ಇಂದು (ಸೋಮವಾರ) 3,000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಹಾಗು ಕಂಚಿನ ಪದಕ ಗೌರವ ಸಿಕ್ಕಿದೆ. ಪಾರುಲ್ ಚೌಧರಿ 9:27.63 ಸೆಕೆಂಡ್ಗಳ ಸಮಯದಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಪಡೆದರು. ಚೊಚ್ಚಲ ಏಷ್ಯನ್ ಗೇಮ್ಸ್ ಆಡುತ್ತಿರುವ ಪ್ರೀತಿ 9:43.32 ಸೆಕೆಂಡ್‌ನಿಂದ ಮೂರನೇ ಸ್ಥಾನ ಅಲಂಕರಿಸಿದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಸಮಯವಾಗಿದೆ. ಹಾಲಿ ವಿಶ್ವ ಚಾಂಪಿಯನ್ ಬಹ್ರೇನ್‌ನ ವಿನ್‌ಫ್ರೆಡ್ ಯಾವಿ 9:18.28 ಸೆಕೆಂಡ್ ಸಮಯದಿಂದ ಚಿನ್ನಕ್ಕೆ ಕೊರಳೊಡ್ಡಿದರು.
-
Parul Chaudhary set the track ablaze, clinching a🥈at #AsianGames2022
— SAI Media (@Media_SAI) October 2, 2023 " class="align-text-top noRightClick twitterSection" data="
The unstoppable Parul gave a beautiful second place finish in Women's 3000m Steeplechase event with a timing of 9:27.63
Three cheers for our girl Parul! Well done, many congratulations 🥳💪🏻#Cheer4India… pic.twitter.com/HGQ7h8llbG
">Parul Chaudhary set the track ablaze, clinching a🥈at #AsianGames2022
— SAI Media (@Media_SAI) October 2, 2023
The unstoppable Parul gave a beautiful second place finish in Women's 3000m Steeplechase event with a timing of 9:27.63
Three cheers for our girl Parul! Well done, many congratulations 🥳💪🏻#Cheer4India… pic.twitter.com/HGQ7h8llbGParul Chaudhary set the track ablaze, clinching a🥈at #AsianGames2022
— SAI Media (@Media_SAI) October 2, 2023
The unstoppable Parul gave a beautiful second place finish in Women's 3000m Steeplechase event with a timing of 9:27.63
Three cheers for our girl Parul! Well done, many congratulations 🥳💪🏻#Cheer4India… pic.twitter.com/HGQ7h8llbG
ಆರ್ಚರಿ-ಪುರುಷರ ಜೋಡಿ ಕ್ವಾರ್ಟರ್ ಫೈನಲ್‌ಗೆ: ಪುರುಷರ ರಿಕರ್ವ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಭಾರತೀಯ ಆರ್ಚರ್ ಅತಾನು ದಾಸ್ 7-1 ರಿಂದ ತಜಕಿಸ್ತಾನ್‌ನ ರಾಬರ್ಟ್ ನಾಮ್ ವಿರುದ್ಧ ಗೆದ್ದರು. 31 ವರ್ಷದ ಅತಾನು ದಾಸ್ ನಾಳೆ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಕ್ವಿ ಕ್ಸಿಯಾಂಗ್‌ಶುವೋ ವಿರುದ್ಧ ಸೆಣಸಲಿದ್ದಾರೆ. ಧೀರಜ್ ಬೊಮ್ಮದೇವರ ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾದೇಶದ ಮೊಹಮ್ಮದ್ ಹಕೀಮ್ ಅಹ್ಮದ್ ವಿರುದ್ಧ ಶೂಟ್-ಆಫ್ ಮೂಲಕ 6-5 ರಿಂದ ಗೆದ್ದಿದ್ದು, ನಾಳೆ ಇಲ್ಫತ್ ಅಬ್ದುಲ್ಲಿನ್ ಅವರನ್ನು ಬೊಮ್ಮದೇವರ ಎದುರಿಸಲಿದ್ದಾರೆ.
ಭಜನ್ ಕೌರ್ ಮತ್ತು ಅಂಕಿತಾ ಭಕತ್ ಅವರು ಮಹಿಳೆಯರ ರಿಕರ್ವ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲು ವಿಫಲರಾದರು. ರಿಪಬ್ಲಿಕ್ ಆಫ್ ಕೊರಿಯಾದ ಸ್ಯಾನ್ ಆನ್ ವಿರುದ್ಧದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಭಜನ್ ಕೌರ್ 7-3 ರಿಂದ ಸೋತರು. ಅಂಕಿತಾ ಭಕತ್ ಇಂಡೋನೇಷ್ಯಾದ ರೆಝಾ ಆಕ್ಟೇವಿಯಾ ವಿರುದ್ಧ 6-5 ರಿಂದ ಸೋಲನುಭವಿಸಿದರು.
ಸ್ಕ್ವಾಷ್ ಸಿಂಗಲ್ಸ್- ಕ್ವಾರ್ಟರ್ ಫೈನಲ್ ಪ್ರವೇಶ: ಕುವೈತ್‌ನ ಅಮ್ಮಾರ್ ಅಲ್ತಮಿಮಿ ವಿರುದ್ಧ 11-4, 11-4, 11-6ರ ಅಂತರದ ದಿಂದ 16ನೇ ಸುತ್ತಿನ ಪಂದ್ಯವನ್ನು ಭಾರತದ ಸೌರವ್ ಘೋಷಲ್ ಗೆದ್ದು, ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪುರುಷರ ಗುಂಪು ಹಂತದ ಸ್ಕ್ವಾಷ್ ಗೇಮ್ನಲ್ಲಿ ಭಾರತದ ತಂಡ ಚಿನ್ನದ ಪದಕ ಗೆದ್ದುಕೊಂಡಿತ್ತು. ಜಪಾನ್‌ನ ರ್ಯುನೊಸುಕೆ ತ್ಸುಕು ವಿರುದ್ಧ ನಾಳೆ ಸಂಜೆ 4:30ಕ್ಕೆ (ಭಾರತೀಯ ಕಾಲಮಾನ) ಸೌರವ್ ಘೋಷಲ್ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದ್ದಾರೆ.
-
Another 🎖️follows in Women's 3000m Steeplechase 🥳
— SAI Media (@Media_SAI) October 2, 2023 " class="align-text-top noRightClick twitterSection" data="
Priti clinches a 🥉after clocking a timing of 9:43.32
Kudos to all the wonderful girls of Indian Athletics 🥳
Well done Priti💪🏻👏👏#Cheer4India#HallaBol #JeetegaBharat#BharatAtAG22 pic.twitter.com/SY4jlI2rDE
">Another 🎖️follows in Women's 3000m Steeplechase 🥳
— SAI Media (@Media_SAI) October 2, 2023
Priti clinches a 🥉after clocking a timing of 9:43.32
Kudos to all the wonderful girls of Indian Athletics 🥳
Well done Priti💪🏻👏👏#Cheer4India#HallaBol #JeetegaBharat#BharatAtAG22 pic.twitter.com/SY4jlI2rDEAnother 🎖️follows in Women's 3000m Steeplechase 🥳
— SAI Media (@Media_SAI) October 2, 2023
Priti clinches a 🥉after clocking a timing of 9:43.32
Kudos to all the wonderful girls of Indian Athletics 🥳
Well done Priti💪🏻👏👏#Cheer4India#HallaBol #JeetegaBharat#BharatAtAG22 pic.twitter.com/SY4jlI2rDE
ಪದಕ ವಂಚಿತರಾದ ಆಮ್ಲನ್: 100 ಮೀ ಮತ್ತು 200 ಮೀಟರ್ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಓಟಗಾರ ಅಮ್ಲಾನ್ ಬೊರ್ಗೊಹೈನ್ ಏಷ್ಯನ್ ಗೇಮ್ಸ್ನಲ್ಲಿ ಪದಕ ಸೋತರು. 200 ಮೀಟರ್ ಓಟ 20.98 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸದ ಅವರು ಫೈನಲ್‌ನಲ್ಲಿ ಆರನೇ ಸ್ಥಾನ ಪಡೆದರು. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಜಪಾನ್‌ನ ಕೋಕಿ ಉಯಾಮಾ 20.60 ಸೆಕೆಂಡ್‌ನಿಂದ ಚಿನ್ನ ಗೆದ್ದರೆ, ಸೌದಿ ಅರೇಬಿಯಾದ ಮೊಹಮ್ಮದ್ ಅಬ್ದುಲ್ಲಾ ಅಬ್ಕರ್ ಮತ್ತು ಚೈನೀಸ್ ತೈಪೆಯ ಯಾಂಗ್ ಚುನ್-ಹಾನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದರು.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಟೇಬಲ್ ಟೆನಿಸ್ನಲ್ಲಿ ಭಾರತಕ್ಕೆ ಚೊಚ್ಚಲ ಪದಕ; ಬ್ಯಾಡ್ಮಿಂಟನ್ನಲ್ಲಿ ಶುಭಾರಂಭ