ಹ್ಯಾಂಗ್ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪದಕಗಳ ಬೇಟೆಯನ್ನು ಮುಂದುವರಿಸಿದೆ. ಬುದ್ಧಿಮತ್ತೆಯ ಕ್ರೀಡೆಯಾದ ಚೆಸ್ನಲ್ಲಿ ಮಹಿಳಾ ಮತ್ತು ಪುರುಷ ತಂಡಗಳೆರಡೂ ಬೆಳ್ಳಿಯನ್ನು ಗೆದ್ದಿವೆ. ಇತ್ತ 86 ಕೆಜಿ ವಿಭಾಗದ ಕುಸ್ತಿಯಲ್ಲಿ ದೀಪಕ್ ಪೂನಿಯಾ ರಜತ ಸಾಧನೆ ಮಾಡಿದರು. ಈ ಮೂಲಕ ಪದಕಗಳ ಸಂಖ್ಯೆ 107ಕ್ಕೆ ಏರಿದೆ.
ಗ್ರ್ಯಾಂಡ್ ಮಾಸ್ಟರ್ ಹರಿಕಾ ದ್ರೋಣವಲ್ಲಿ, ಇಂಟರ್‌ನ್ಯಾಶನಲ್ ಮಾಸ್ಟರ್ ವೈಶಾಲಿ ರಮೇಶ್‌ಬಾಬು, ವಂತಿಕಾ ಅಗರವಾಲ್ ಮತ್ತು ಸವಿತಾಶ್ರೀ ಬಾಸ್ಕರ್ ಅವರು ತಮ್ಮ ಕೌಶಲ್ಯ ಪ್ರದರ್ಶಿಸಿ 15 ಮ್ಯಾಚ್ ಪಾಯಿಂಟ್‌ಗಳೊಂದಿಗೆ ಅಂತಿಮ ಸುತ್ತಿನಲ್ಲಿ ದಕ್ಷಿಣ ಕೊರಿಯಾವನ್ನು 4-0 ಅಂತರದಲ್ಲಿ ಸೋಲಿಸಿ ರಜತ ಪದಕವನ್ನು ಪಡೆದರು.
-
A Silver lined victory for our♟️women's team at #AsianGames2022
— SAI Media (@Media_SAI) October 7, 2023 " class="align-text-top noRightClick twitterSection" data="
The team consisting of @humpy_koneru, @HarikaDronavali, @chessvaishali , @vantikachess & Savitha Shri finished 2️⃣nd among 12 teams following a total of 9 matches over the course of 9 days! 🇮🇳
Many congratulations… pic.twitter.com/cRlD8dtJe9
">A Silver lined victory for our♟️women's team at #AsianGames2022
— SAI Media (@Media_SAI) October 7, 2023
The team consisting of @humpy_koneru, @HarikaDronavali, @chessvaishali , @vantikachess & Savitha Shri finished 2️⃣nd among 12 teams following a total of 9 matches over the course of 9 days! 🇮🇳
Many congratulations… pic.twitter.com/cRlD8dtJe9A Silver lined victory for our♟️women's team at #AsianGames2022
— SAI Media (@Media_SAI) October 7, 2023
The team consisting of @humpy_koneru, @HarikaDronavali, @chessvaishali , @vantikachess & Savitha Shri finished 2️⃣nd among 12 teams following a total of 9 matches over the course of 9 days! 🇮🇳
Many congratulations… pic.twitter.com/cRlD8dtJe9
ಇದರ ಜೊತೆಗೆ ಕೂಟದ ಅಗ್ರ ಶ್ರೇಯಾಂಕದ ಚೀನಾ ತಂಡವು ಯುಎಇ ವಿರುದ್ಧ ತನ್ನ ಕೊನೆಯ ಸುತ್ತಿನ ಪಂದ್ಯವನ್ನು 4-0 ಅಂತರದಿಂದ ಗೆದ್ದು 17/18 ಮ್ಯಾಚ್ ಪಾಯಿಂಟ್‌ಗಳೊಂದಿಗೆ ಚಿನ್ನವನ್ನು ತನ್ನದಾಗಿಸಿಕೊಂಡಿತು. ವಿದಿತ್, ಅರ್ಜುನ್ ಮತ್ತು ಹರಿಕೃಷ್ಣ ಅವರಿದ್ದ ಭಾರತೀಯ ಪುರುಷ ಚೆಸ್ ತಂಡ ಫಿಲಿಪೈನ್ಸ್ ವಿರುದ್ಧ 3.5- 0.5 ಪಾಯಿಂಟ್ಗಳ ಗೆಲುವಿನೊಂದಿಗೆ ಬೆಳ್ಳಿ ಪದಕದ ಮೂಲಕ ಅಭಿಯಾನವನ್ನು ಮುಗಿಸಿತು.
-
Last, but definitely not least, the Men's Chess ♟️ team also bring home a stunning silver from #AsianGames2022 🥳
— SAI Media (@Media_SAI) October 7, 2023 " class="align-text-top noRightClick twitterSection" data="
The team comprising of @DGukesh , @viditchess , @rpragchess, @ArjunErigaisi and @HariChess win🥈after winning their last match of the day against 🇵🇭.
Many… pic.twitter.com/7dAWAUHX3K
">Last, but definitely not least, the Men's Chess ♟️ team also bring home a stunning silver from #AsianGames2022 🥳
— SAI Media (@Media_SAI) October 7, 2023
The team comprising of @DGukesh , @viditchess , @rpragchess, @ArjunErigaisi and @HariChess win🥈after winning their last match of the day against 🇵🇭.
Many… pic.twitter.com/7dAWAUHX3KLast, but definitely not least, the Men's Chess ♟️ team also bring home a stunning silver from #AsianGames2022 🥳
— SAI Media (@Media_SAI) October 7, 2023
The team comprising of @DGukesh , @viditchess , @rpragchess, @ArjunErigaisi and @HariChess win🥈after winning their last match of the day against 🇵🇭.
Many… pic.twitter.com/7dAWAUHX3K
ಅಗ್ರ ಶ್ರೇಯಾಂಕದ ಅರ್ಜುನ್ ಎರಿಗೈಸಿ, ಡಿ ಗುಕೇಶ್, ವಿದಿತ್ ಗುಜರಾತಿ ಮತ್ತು ಹರಿಕೃಷ್ಣ ಪೆಂಟಾಲ ಎಲ್ಲರೂ ತಮ್ಮ ಎದುರಾಳಿ ವಿರುದ್ಧ ಜಯ ಸಾಧಿಸಿದರೆ, ಗ್ರ್ಯಾಂಡ್ಮಾಸ್ಟರ್ ಆರ್ ಪ್ರಗ್ನಾನಂದ್ ಅವರು ಡ್ರಾ ಸಾಧಿಸಿದರು. ಇದರಿಂದ ಇರಾನ್ ಚಿನ್ನ ಗೆದ್ದಿತು.
ಪೈಲ್ವಾನ್ ಪೂನಿಯಾಗೆ ಬೆಳ್ಳಿ: ಪುರುಷರ 86 ಕೆಜಿ ವಿಭಾಗದ ಫೈನಲ್‌ನಲ್ಲಿ ಕುಸ್ತಿಪಟು ದೀಪಕ್ ಪೂನಿಯಾ ಅವರು ಇರಾನ್‌ನ ಹಸನ್ ಯಜ್ದಾನಿ ವಿರುದ್ಧ 0-10 ಅಂಕಗಳ ಅಂತರದಿಂದ ಸೋತು, ಬೆಳ್ಳಿಗೆ ತೃಪ್ತಿಪಟ್ಟರು. ಯಜ್ದಾನಿ ಆರಂಭದಿಂದಲೂ ಭಾರತೀಯ ಕುಸ್ತಿಪಟುವಿನ ಮೇಲೆ ಒತ್ತಡ ಹೇರಿದರು. ದೀಪಕ್ರನ್ನು ಕೋರ್ಟ್ನಿಂದ ಹೊರಗೆ ತಳ್ಳುವ ಮೂಲಕ 2 ಅಂಕಗಳನ್ನು ಪಡೆದರು.
-
#Silver🥈for @deepakpunia86
— SAI Media (@Media_SAI) October 7, 2023 " class="align-text-top noRightClick twitterSection" data="
Our 86kg #TOPSchemeAthlete pehlwan put up a stong fight but fell short in the gold medal match 🤼 against 🇮🇷's Hassan Yazdanicharati
The total medal tally now stands at 1⃣0⃣5⃣!
Many congratulations Deepak👏💪🏻#Cheer4India 🇮🇳#HallaBol… pic.twitter.com/AoimxGbg6m
">#Silver🥈for @deepakpunia86
— SAI Media (@Media_SAI) October 7, 2023
Our 86kg #TOPSchemeAthlete pehlwan put up a stong fight but fell short in the gold medal match 🤼 against 🇮🇷's Hassan Yazdanicharati
The total medal tally now stands at 1⃣0⃣5⃣!
Many congratulations Deepak👏💪🏻#Cheer4India 🇮🇳#HallaBol… pic.twitter.com/AoimxGbg6m#Silver🥈for @deepakpunia86
— SAI Media (@Media_SAI) October 7, 2023
Our 86kg #TOPSchemeAthlete pehlwan put up a stong fight but fell short in the gold medal match 🤼 against 🇮🇷's Hassan Yazdanicharati
The total medal tally now stands at 1⃣0⃣5⃣!
Many congratulations Deepak👏💪🏻#Cheer4India 🇮🇳#HallaBol… pic.twitter.com/AoimxGbg6m
ಬಳಿಕ ಸತತ ಅಂಕ ಗಳಿಸಿದ ಇರಾನ್ ಪೈಲ್ವಾನ್ 8-0 ಮುನ್ನಡೆ ಪಡೆದರು. ಇರಾನ್‌ನ ಯಜ್ದಾನಿ ತಾಂತ್ರಿಕವಾಗಿ ಶ್ರೇಷ್ಠ ಆಟವಾಡುವ ಮೂಲಕ ಪಂದ್ಯವನ್ನು ಗೆದ್ದರು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಮತ್ತು 8 ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಯಜ್ದಾನಿ ವಿರುದ್ಧ ದೀಪಕ್ ಆಟ ನಡೆಯಿಲಿಲ್ಲ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕುಸ್ತಿ ವಿಭಾಗದಲ್ಲಿ 6 ಪದಕಗಳನ್ನು ಪಡೆದುಕೊಂಡಿತು. ಆದರೆ, ಒಂದು ಚಿನ್ನವನ್ನು ಗಳಿಸದೆ ನಿರಾಶೆ ಮೂಡಿಸಿತು. ಜೊತೆಗೆ ಭಾರತದ ಇತರ ಮೂವರು ಕುಸ್ತಿಪಟುಗಳು ಯಾವುದೇ ಪದಕಗಳನ್ನು ಗಳಿಸದೆ ತಮ್ಮ ಅಭಿಯಾನವನ್ನು ಮುಗಿಸಿದರು.
ಇದನ್ನೂ ಓದಿ: ಮಳೆಯಿಂದ ಫೈನಲ್ ಪಂದ್ಯ ರದ್ದು: ಏಷ್ಯನ್ ಗೇಮ್ಸ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ