ETV Bharat / sports

ಏಷ್ಯನ್​ ಗೇಮ್ಸ್: ಬ್ಯಾಡ್ಮಿಂಟನ್, 100 ಮೀಟರ್ ಹರ್ಡಲ್ಸ್​ನಲ್ಲಿ ಬೆಳ್ಳಿ ಗೆದ್ದ ಭಾರತ - ETV Bharath Kannada news

ಎಚ್‌.ಎಸ್.ಪ್ರಣಯ್ ಮತ್ತು ಎಂ.ಆರ್.ಅರ್ಜುನ್ ಗಾಯಕ್ಕೆ ತುತ್ತಾದ ಕಾರಣ ಏಷ್ಯನ್​ ಗೇಮ್ಸ್​ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತ ಚಿನ್ನ ಕಳೆದುಕೊಂಡು, ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದೆ.

Etv Bharat
Etv Bharat
author img

By ETV Bharat Karnataka Team

Published : Oct 1, 2023, 9:37 PM IST

ಹ್ಯಾಂಗ್‌ಝೌ (ಚೀನಾ): ವಿಶ್ವ ಬ್ಯಾಡ್ಮಿಂಟನ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಷಟ್ಲರ್​ಗಳು 19ನೇ ಏಷ್ಯಾಡ್​ನಲ್ಲಿ ಚಿನ್ನ ಗೆಲ್ಲುವಲ್ಲಿ ವಿಫಲರಾದರು. ಚೀನಾದ ವಿರುದ್ಧ ಪ್ರಬಲ ಪೈಪೋಟಿ ನಡೆಸಿ 2-3 ಅಂತರದಿಂದ ಸೋಲುಂಡ ಭಾರತ ಚೊಚ್ಚಲ ಬೆಳ್ಳಿಗೆ ತೃಪ್ತಿಪಟ್ಟಿತು. ಇನ್ನೊಂದೆಡೆ, 100 ಮೀಟರ್ ಹರ್ಡಲ್ಸ್​ನಲ್ಲಿ ಜ್ಯೋತಿ ಯರ್ರಾಜಿಗೆ ಬೆಳ್ಳಿ ಪದಕ ಗೆದ್ದರು.

ಜಕಾರ್ತಾ 2018ರಲ್ಲಿ ಪಿ.ವಿ.ಸಿಂಧು ಅವರ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದ ನಂತರ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್‌ನಲ್ಲಿ ಇದು ಭಾರತದ ಎರಡನೇ ಬೆಳ್ಳಿ ಪದಕವಾಗಿದೆ. ಭಾರತ ಈ ಹಿಂದೆ ಮೂರು ಪುರುಷರ ತಂಡ ಕಂಚಿನ ಪದಕಗಳನ್ನು ಗೆದ್ದಿತ್ತು.

ಪುರುಷರ ತಂಡದ ಬ್ಯಾಡ್ಮಿಂಟನ್ ಚಿನ್ನದ ಪದಕದ ಪಂದ್ಯದಲ್ಲಿ ಲಕ್ಷ್ಯ ಸೇನ್ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ ಭಾರತಕ್ಕೆ 2-0 ಮುನ್ನಡೆ ಸಾಧಿಸಿದರು. ಆದರೆ, ಲಿ ಶಿಫೆಂಗ್ ಅವರು ವಿಶ್ವದ ಮಾಜಿ ನಂ. 1 ಕಿಡಂಬಿ ಶ್ರೀಕಾಂತ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದರು. ಲಿಯು ಯುಚೆನ್, ಔ ಕ್ಸುವಾನಿ ಅವರು ಧ್ರುವ್ ಕಪಿಲಾ, ಸಾಯಿ ಪ್ರತೀಕ್ ಅವರನ್ನು ಸೋಲಿಸಿ ಸಮಬಲ ಸಾಧಿಸಿದರು. ನಿರ್ಣಾಯಕ ಪಂದ್ಯದಲ್ಲಿ ವೆಂಗ್ ಹಾಂಗ್ಯಾಂಗ್ ಅವರು ಮಿಥುನ್ ಮಂಜುನಾಥನ್ ವಿರುದ್ಧ 21-12, 21-4 ರಿಂದ ಗೆದ್ದರು. ಇದರಿಂದ ಚೀನಾ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿತು.

100 ಮೀಟರ್ ಹರ್ಡಲ್ಸ್​ನಲ್ಲಿ ಜ್ಯೋತಿ ಯರ್ರಾಜಿಗೆ ಬೆಳ್ಳಿ: ಮಹಿಳೆಯರ 100 ಮೀಟರ್ ಹರ್ಡಲ್ಸ್ ಫೈನಲ್‌ನಲ್ಲಿ ಭಾರತದ ಏಸ್ ಹರ್ಡಲ್​ ಅಥ್ಲೀಟ್​ ಜ್ಯೋತಿ ಯರ್ರಾಜಿ 12.91 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. 24 ವರ್ಷದ ಅಥ್ಲೀಟ್‌ಗೆ ಆರಂಭದಲ್ಲಿ ಕಂಚಿನ ಪದಕ ನೀಡಲಾಯಿತು. ಆದರೆ ಪರಿಶೀಲನೆ ನಂತರ ಚೀನಾದ ವು ಯಾನ್ನಿ ಅವರನ್ನು ಅನರ್ಹಗೊಳಿಸಲಾಯಿತು. ಹೀಗಾಗಿ ಜ್ಯೋತಿ ಬೆಳ್ಳಿ ಪದಕಕ್ಕೆ ಭಾಜನರಾದರು.

ಜ್ಯೋತಿ ಯರ್ರಾಜಿ ಮತ್ತು ವು ಯಾನ್ನಿ ಆರಂಭದಲ್ಲಿ ಮಾಡಿದ ತಪ್ಪನ್ನು ಗುರುತಿಸಿದ್ದರು. ಅದರಂತೆ ಪರಿಶೀಲನೆಗೆ ಒಳಪಟ್ಟ ನಂತರ ವು ಯಾನ್ನಿ ಅವರನ್ನು ಅನರ್ಹಗೊಳಿಸಲಾಯಿತು. ಚೀನಾದ ಲಿನ್ ಯುವೇ 12.74 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ಆರಂಭದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಜಪಾನ್‌ನ ಯುಮಿ ತನಕಾ 13.04 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಪಡೆದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್: ಶಾಟ್‌ಪುಟ್​, ಸ್ಟೀಪಲ್ ಚೇಸ್‌ನಲ್ಲಿ ಭಾರತಕ್ಕೆ ಬಂಗಾರ; ನಿಖತ್ ಜರೀನ್‌ಗೆ ಕಂಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.