ಬರ್ಮಿಂಗ್‌ಹ್ಯಾಮ್ (ಇಂಗ್ಲೆಡ್) : ಜೂನ್ 16 ರಿಂದ ಇಡೀ ಕ್ರಿಕೆಟ್ ಜಗತ್ತೇ ಕಾದು ನೋಡುತ್ತಿರುವ ಆಶಸ್ ಟೆಸ್ಟ್ ಸರಣಿ ಆರಂಭವಾಗಲಿದೆ. ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಈ ಐತಿಹಾಸಿಕ ಸರಣಿಗಾಗಿ ಎರಡು ತಂಡಗಳು ಕೂಡ ಭರ್ಜರಿಯಾಗಿ ಸಿದ್ದತೆ ಮಾಡಿಕೊಂಡಿವೆ. ಅತ್ಯಂತ ಪ್ರಸಿದ್ಧವಾಗಿರುವ ಆಶಸ್ ಟೆಸ್ಟ್ ಕ್ರಿಕೆಟ್ ಸರಣಿ 1882 ರಲ್ಲಿ ಮೊದಲ ಪಂದ್ಯದಲ್ಲಿ ಆಡಿದ ನಂತರ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳು ಟೆಸ್ಟ್ ಸರಣಿ ನಿಜಕ್ಕೂ ರೋಮಾಂಚಕಾರಿಯಾಗಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡ ನಾಯಕ ಬೆನ್ ಸ್ಟೋಕ್ಸ್ ಮತ್ತು ಬ್ಯಾಟಿಂಗ್ ಕೋಚ್ ಬ್ರೆಂಡನ್ ಮೆಕಲಮ್ ಅವರ ಅಡಿ ಇಂಗ್ಲೆಂಡ್ ತನ್ನ ಕೊನೆಯ 17 ಟೆಸ್ಟ್‌ಗಳಲ್ಲಿ 12 ರಲ್ಲಿ ಆಲ್-ಔಟ್ ಮಾಡುವ ಮೂಲಕ ಗೆಲುವಿನ ನಗೆ ಬೀರಿದೆ. ಸೋಲಿನ ಅಪಾಯದ ನಡುವೆಯೂ ಯಾವಾಗಲೂ ಗೆಲುವನ್ನು ಬೆನ್ನಟ್ಟಿ ಮೈದಾನದಲ್ಲಿ ಹೋರಾಟ ನಡೆಸುವ ಇಂಗ್ಲೆಂಡ್ ತಂಡ ಕಳೆದ ವರ್ಷದಿಂದ ಯಾವುದೇ ಟೆಸ್ಟ್ ಸರಣಿಯನ್ನು ಸೋತಿಲ್ಲ.
ಇಂಗ್ಲೆಂಡಿನ ಆಟಗಾರರು ತ್ವರಿತ ರನ್ ಮತ್ತು ವೇಗವಾಗಿ ವಿಕೆಟ್‌ಗಳನ್ನು ಉರಳಿಸುವ ಆಕ್ರಮಣಕಾರಿ ಆಟದ ಹಂತವನ್ನು ತಲುಪಿದ್ದಾರೆ. ಆದರೇ ಈಗಾಗಲೇ ಭಾನುವಾರ ಲಾರ್ಡ್ಸ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟ ಆಲಂಕರಿಸಿದೆ. ಇದಕ್ಕೆ ಪ್ರಮುಖ ಕಾರಣ ಆಸ್ಟ್ರೇಲಿಯಾ ಬೌಲಿಂಗ್ ವಿಭಾಗ ರನ್ ಬಿಟ್ಟುಕೊಡದೇ ಆಕ್ರಮಣಕಾರಿ ಬೌಲಿಂಗ್ ಮಾಡುವ ಮೂಲಕ ಭಾರತವನ್ನು ಕಟ್ಟಿ ಹಾಕಿ ಸೋಲಿಸಿತ್ತು. ಹೀಗಿರುವಾಗ ಇಂಗ್ಲೆಂಡ್ ಬ್ಯಾಟರ್ಗಳು ಯಾವ ರೀತಿ ಆಸ್ಟ್ರೇಲಿಯ ವೇಗಿಗಳನ್ನು ಎದುರಿಸುತ್ತಾರೆ ಎಂಬುದು ನಿಜಕ್ಕೂ ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ : ICC World Cup 2023: ನ್ಯೂಜಿಲೆಂಡ್ ತಂಡಕ್ಕೆ ಎರಡನೇ ಆಘಾತ.. ವಿಶ್ವಕಪ್ನಿಂದ ಮೈಕೆಲ್ ಬ್ರೇಸ್‌ವೆಲ್ ಔಟ್
ಇನ್ನು ಈ ಸರಣಿ ಬಗ್ಗೆ ಟೆಸ್ಟ್ ಕ್ರಿಕೆಟ್ನ GOAT ಎಂದೇ ಕರೆಯುವ ಆಸ್ಟ್ರೇಲಿಯಾ ದಿಗ್ಗಜ ಬ್ಯಾಟರ್ ಸ್ಟೀವ್ ಸ್ಮಿತ್ ಮಾತನಾಡಿ, ನಮ್ಮ ಬೌಲರ್‌ಗಳ ವಿರುದ್ಧ ಇಂಗ್ಲೆಂಡ್ ತಂಡದ ಹೋರಾಟ ಹೇಗೆ ನಡೆಯುತ್ತದೆ ಎಂಬುದನ್ನು ನೋಡಲು ನನಗೆ ಕುತೂಹಲವಿದೆ ಎಂದು ಹೇಳಿದ್ದಾರೆ. ಇಂಗ್ಲೆಂಡ್ ತಂಡದ ಆಟಗಾರರು ಬೇರೆ ದೇಶ ತಂಡಗಳ ಬೌಲಿಂಗ್ ದಾಳಿಗಳ ವಿರುದ್ಧ ನಿಸ್ಸಂಶಯವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.
ಆದರೆ, ಅವರು ಇನ್ನು ನಮ್ಮ ವಿರುದ್ಧ ಆಡಿಲ್ಲ. ಇದು ವೀಕ್ಷಿಸಲು ರೋಮಾಂಚನಕಾರಿಯಾಗಿದೆ. ಕಳೆದ 12 ತಿಂಗಳುಗಳಲ್ಲಿ ಅವರು ಆಡಿದ ರೀತಿ ಮತ್ತು ಅವರು ನಡೆಸುವ ಆಟದ ತಂತ್ರಗಾರಿಕೆಯನ್ನು ನಾನು ಆನಂದಿಸಿದೆ. ಆದರೆ, ಈ ತಂತ್ರಕಾರಿಕೆ ನಮ್ಮ ವಿರುದ್ಧ ಹೇಗೆ ಕಾರ್ಯಕ್ಕೆ ಬರುತ್ತದೆ ಎಂಬುದನ್ನು ನಾವು ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ICC Ranking: ರಹಾನೆ, ಶಾರ್ದೂಲ್ ಐಸಿಸಿ ರ್‍ಯಾಂಕಿಂಗ್ ಏರಿಕೆ; ಆಡದೇ ಇದ್ದರೂ ಅಶ್ವಿನ್‌ಗೆ ಅಗ್ರಸ್ಥಾನ