ETV Bharat / sports

ಪ್ಯಾರಾಲಿಂಪಿಕ್ಸ್​ 'ಚಿನ್ನ' ಅವಿನ ಲೇಖಾರಾಗೆ ಆನಂದ್​ ಮಹೀಂದ್ರಾ ಭರ್ಜರಿ ಗಿಫ್ಟ್​ - ಟೋಕಿಯೋ ಪ್ಯಾರಾಲಿಂಪಿಕ್ಸ್

ಸೋಮವಾರ 19 ವರ್ಷದ ಜೈಪುರ ಮೂಲದ ಅವಿನ 10 ಮೀಟರ್​ ಏರ್​ ರೈಫಲ್​​ನಲ್ಲಿ ಪ್ಯಾರಾಲಿಂಪಿಕ್ಸ್​ ದಾಖಲೆಯ 249.5 ಅಂಕಗಳೊಡನೆ ಚಿನ್ನ ಗೆದ್ದಿದ್ದರು. ಅಲ್ಲದೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಮತ್ತು ಒಟ್ಟಾರೆ 4ನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು..

Anand Mahindra dedicates gift first customised SUV to Avani Lekhara
ಅವನಿಗೆ ಕಾರು ಉಡುಗೊರೆ
author img

By

Published : Aug 30, 2021, 8:26 PM IST

Updated : Aug 30, 2021, 8:58 PM IST

ಮುಂಬೈ : ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಶೂಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದಿರುವ ಅನಿನ ಲೇಖಾರಾ ಅವರಿಗೆ ನೂತನವಾಗಿ ವಿಶೇಷ ಚೇತರಿಗೆಂದೇ ತಯಾರಿಸುತ್ತಿರುವ SUV ಕಾರೊಂದನ್ನು ಉಡುಗೊರೆಯಾಗಿ ನೀಡುವುದಾಗಿ ಮಹೀಂದ್ರ ಸಮೂಹ ಸಂಸ್ಥೆಗಳ​ ಅಧ್ಯಕ್ಷ ಆನಂದ್​ ಮಹೀಂದ್ರಾ ಘೋಷಿಸಿದ್ದಾರೆ.

ಸೋಮವಾರ 19 ವರ್ಷದ ಜೈಪುರ ಮೂಲದ ಅವಿನ 10 ಮೀಟರ್​ ಏರ್​ ರೈಫಲ್​​ನಲ್ಲಿ ಪ್ಯಾರಾಲಿಂಪಿಕ್ಸ್​ ದಾಖಲೆಯ 249.5 ಅಂಕಗಳೊಡನೆ ಚಿನ್ನ ಗೆದ್ದಿದ್ದರು. ಅಲ್ಲದೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಮತ್ತು ಒಟ್ಟಾ 4ನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1972ರಲ್ಲಿ ಈಜುಗಾರ ಮುರಳೀಕಾಂತ್ ಪೆಟ್ಕರ್​, 2004 ಮತ್ತು 2012ರಲ್ಲಿ ಜಾವಲಿನ್ ಥ್ರೋವರ್​ ದೇವೇಂದ್ರ ಜಜಾರಿಯಾ ಮತ್ತು 2016ರಲ್ಲಿ ಹೈಜಂಪರ್​ ಮರಿಯಪ್ಪನ್ ತಂಗವೇಲು ಈ ಹಿಂದಿನ ಪ್ಯಾರಾಲಿಂಪಿಕ್ಸ್​ಗಳಲ್ಲಿ ಚಿನ್ನದ ಪದಕ ಪಡೆದಿದ್ದರು.

  • A week ago @DeepaAthlete suggested that we develop SUV’s for those with disabilities. Like the one she uses in Tokyo.I requested my colleague Velu, who heads Development to rise to that challenge. Well, Velu, I’d like to dedicate & gift the first one you make to #AvaniLekhara https://t.co/J6arVWxgSA

    — anand mahindra (@anandmahindra) August 30, 2021 " class="align-text-top noRightClick twitterSection" data=" ">

ಒಂದು ವಾರದ ಹಿಂದೆಯಷ್ಟೇ ದೀಪಾ ಮಲಿಕ್ ಈಗಾಗಲೇ ಟೋಕಿಯೊದಲ್ಲಿ ಉಪಯೋಗಿಸುತ್ತಿರುವ ವಿಶೇಷ ಚೇತನರಿಗೆ ಅನುಕೂಲವಾಗುವ ಕಾರಿನಂತೆ ​​ಎಸ್​ಯುವಿ ಕಾರನ್ನು ತಯಾರಿಸುವಂತೆ ನಮಗೆ ಸಲಹೆ ನೀಡಿದ್ದರು. ಬಳಿಕ ನಾನು ನನ್ನ ಸಹೋದ್ಯೋಗಿ ವೇಲು ಅವರಿಗೆ ಈ ಬಗ್ಗೆ ಮನವಿ ಮಾಡಿದೆ.

ಅವರು ಆ ಕಾರಿನ ಅಭಿವೃದ್ಧಿಯ ಸವಾಲನ್ನು ಸ್ವೀಕರಿಸಿದ್ದರು. ವೇಲು ಅವರು ನಿರ್ಮಾಣ ಮಾಡಿದ ವಿಶೇಷ ಎಸ್​ಯುವಿ ಮೊದಲ ಕಾರನ್ನು ಅವನಿ ಲೇಖಾರಾ ಅವರಿಗೆ ಉಡುಗೊರೆಯಾಗಿ ಅರ್ಪಿಸಲು ಬಯಸುತ್ತೇನೆ ಎಂದು ಆನಂದ್​ ಮಹೀಂದ್ರಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇದನ್ನು ಓದಿ:ಪ್ಯಾರಾಲಿಂಪಿಕ್ಸ್‌: 10 ಮೀಟರ್‌ ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಅವನಿ

Last Updated : Aug 30, 2021, 8:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.