ನವದೆಹಲಿ : ಭಾರತದ ಸ್ಟಾರ್ ಫ್ರೀಸ್ಟೈಲ್ ಕುಸ್ತಿಪಟು ಭಜರಂಗ್ ಪೂನಿಯಾ ವರ್ಲ್ಡ್ ರ್ಯಾಂಕಿಂಗ್ ಸಿರೀಸ್ನಲ್ಲಿ ಸತತ ಎರಡನೇ ಚಿನ್ನದ ಪದಕ ಪಡೆಯಲು ಎದುರು ನೋಡುತ್ತಿದ್ದಾರೆ. ಮಾರ್ಚ್ 4ರಂದು ಇಟಲಿಯ ಒಸ್ಟಿಯಾದಲ್ಲಿ ವರ್ಲ್ಡ್ ರ್ಯಾಂಕಿಂಗ್ ಸಿರೀಸ್ ಆರಂಭವಾಗಲಿದೆ. ಕಳೆದ ವರ್ಷ ಜನವರಿಯಲ್ಲಿ ನಡೆದಿದ್ದ ಆವೃತ್ತಿಯಲ್ಲಿ 26 ವರ್ಷದ ಹರ್ಯಾಣದ ಕುಸ್ತಿಪಟು 65ಕೆಜಿ ವಿಭಾಗದಲ್ಲಿ ಜೋರ್ಡನ್ ಒಲಿವರ್ರನ್ನು ಮಣಿಸಿ ಚಿನ್ನದ ಪದಕ ಪಡೆದಿದ್ದರು.
ಈ ಋತುವಿನ ಪ್ರಾರಂಭದ ಅಂತಾರಾಷ್ಟ್ರೀಯ ಸ್ಪರ್ಧೆಗಾಗಿ ಗ್ರೀಕೋ ರೋಮನ್ ವಿಭಾಗದಲ್ಲಿ ಎಂಟು ಮಂದಿ ಸೇರಿ ಒಟ್ಟು 30 ಸದಸ್ಯರ ರಾಷ್ಟ್ರೀಯ ತಂಡವನ್ನು ರೆಸ್ಟ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಬುಧವಾರ ಪ್ರಕಟಿಸಿದೆ. ಈ ಸ್ಪರ್ಧೆಯಲ್ಲಿ 32ಕ್ಕೂ ಹೆಚ್ಚು ದೇಶಗಳ 300 ಕುಸ್ತಿಪಟುಗಳು ಭಾಗವಹಿಸಲಿದ್ದಾರೆ.
ಪೂನಿಯಾ ಜೊತೆಗೆ 65 ಕೆಜಿ ವಿಭಾಗದಲ್ಲಿ ರೋನಿತ್ ಕೂಡ ಆಯ್ಕೆಯಾಗಿದ್ದಾರೆ. 74 ಕೆಜಿ ವಿಭಾಗದಲ್ಲಿ ಸಂದೀಪ್ ಸಿಂಗ್ ಮತ್ತು ನರಸಿಂಗ್ ಯಾದವ್, 77 ಕೆಜಿ ವಿಭಾಗದಲ್ಲಿ ಗುರುಪ್ರೀತ್ ಸಿಂಗ್ ಇದ್ದಾರೆ.
ಮಹಿಳಾ ಕುಸ್ತಿಪಟುಗಳು : ಮೀನಾಕ್ಷಿ 50 ಕೆಜಿ, 53 ಕೆಜಿ-ವಿನೇಶ್ ಪೋಗಟ್,ನಂದನಿ ಬಾಜಿರಾವ್, 57 ಕೆಜಿ: ಅನ್ಶು ಮಲಿಕ್, 59 ಕೆಜಿ: ಸರಿತಾ; 62 ಕೆಜಿ: ಸೋನಮ್ ಮಲಿಕ್, ಸಾಕ್ಷಿ ಮಲಿಕ್; 65 ಕೆಜಿ: ನಿಶಾ; 68 ಕೆಜಿ: ಅನಿತಾ; 76 ಕೆಜಿ: ಕಿರಣ್
ಪುರುಷರು: 57 ಕೆಜಿ: ರವಿ ದಹಿಯಾ, ಪಂಕಜ್, 65 ಕೆಜಿ: ಭಜರಂಗ್ ಪುನಿಯಾ, ರೋಹಿತ್, 70 ಕೆಜಿ: ವಿಶಾಲ್ ಕಾಲಿರಾಮನ್, 74 ಕೆಜಿ: ನರಸಿಂಗ್ ಯಾದವ್, ಸಂದೀಪ್ ಸಿಂಗ್, 79 ಕೆಜಿ: ರಾಹುಲ್ ರತಿ, 86 ಕೆಜಿ: ದೀಪಕ್ ಪುನಿಯಾ, ಪರ್ವೀನ್ ಚಹರ್
97 ಕೆಜಿ: ಸತ್ಯವರ್ತ್ ಕಡಿಯನ್, 125 ಕೆಜಿ: ಸುಮಿತ್ ಕುಮಾರ್
ಗ್ರೀಕೋ ರೋಮನ್: 55 ಕೆಜಿ: ಅರ್ಜುಮ್ ಹಲಾಕುರ್ಕಿ, 60 ಕೆಜಿ: ಮನೀಶ್, 63 ಕೆಜಿ: ನೀರಜ್, 67 ಕೆಜಿ: ಗೌರವ್ ದುಹೂನ್, 72 ಕೆಜಿ: ಕುಲದೀಪ್ ಮಲಿಕ್, 77 ಕೆಜಿ: ಗುರ್‌ಪ್ರೀತ್ ಸಿಂಗ್, 82 ಕೆಜಿ: ಹರ್ಪ್ರೀತ್ ಸಿಂಗ್, 87 ಕೆಜಿ: ಸುನಿಲ್ ಕುಮಾ
ಇದನ್ನು ಓದಿ:ವಿಜಯ್ ಹಜಾರೆ ಟ್ರೋಫಿಯಲ್ಲಿ ಪಡಿಕ್ಕಲ್ ಅಬ್ಬರದ ಶತಕ: ಕರ್ನಾಟಕಕ್ಕೆ 101ರನ್ಗಳ ಜಯ