ETV Bharat / sports

ಜೂನಿಯರ್ ಹಾಕಿ ವಿಶ್ವಕಪ್​: ಬೆಲ್ಜಿಯಂ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ - ಹಾಕಿ ವಿಶ್ವಕಪ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ

ಬುಧವಾರ ನಡೆದ ಕ್ವಾರ್ಟರ್ ಫೈನಲ್ಸ್​ನ ರೋಚಕ ಕಾದಾಟದಲ್ಲಿ ಶಾರ್ದಾ ನಂದ ತಿವಾರಿ 21ನೇ ನಿಮಿಷದಲ್ಲಿ ಸಿಡಿಸಿದ ಪೆನಾಲ್ಟಿ ಗೋಲಿನ ನೆರವಿನಿಂದ ಭಾರತ 1-0 ಗೋಲಿನಿಂದ ಬೆಲ್ಜಿಯಂ ಮಣಿಸಿ ಉಪಾಂತ್ಯಕ್ಕೆ ಪ್ರವೇಶ ಪಡೆದಿದೆ. ಜೊತೆಗೆ ಬೆಲ್ಜಿಯಂ ವಿರುದ್ಧ 5-0ಯಲ್ಲಿ ಗೆಲುವಿನ ಅಂತರವನ್ನು ವಿಸ್ತರಿಸಿಕೊಂಡಿದೆ.

Junior Hockey World Cup
ಜೂನಿಯರ್ ಹಾಕಿ ವಿಶ್ವಕಪ್
author img

By

Published : Dec 1, 2021, 10:20 PM IST

Updated : Dec 1, 2021, 10:58 PM IST

ಭುವನೇಶ್ವರ: ಬೆಲ್ಜಿಯಂ ವಿರುದ್ಧ 1-0ಯಲ್ಲಿ ಗೆಲ್ಲುವ ಮೂಲಕ ಭಾರತ ಕಿರಿಯರ ಹಾಕಿ ವಿಶ್ವಕಪ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಬುಧವಾರ ನಡೆದ ಕ್ವಾರ್ಟರ್ ಫೈನಲ್ಸ್​ನ ರೋಚಕ ಕಾದಾಟದಲ್ಲಿ ಶಾರ್ದಾ ನಂದ ತಿವಾರಿ 21ನೇ ನಿಮಿಷದಲ್ಲಿ ಸಿಡಿಸಿದ ಪೆನಾಲ್ಟಿ ಗೋಲಿನ ನೆರವಿನಿಂದ ಭಾರತ 1-0 ಗೋಲಿನಿಂದ ಬೆಲ್ಜಿಯಂ ಮಣಿಸಿ ಉಪಾಂತ್ಯಕ್ಕೆ ತೇರ್ಗಡೆಯಾಯಿತು. ಜೊತೆಗೆ ಬೆಲ್ಜಿಯಂ ವಿರುದ್ಧ 5-0ಯಲ್ಲಿ ಗೆಲುವಿನ ಅಂತರವನ್ನು ವಿಸ್ತರಿಸಿಕೊಂಡಿತು.

ಭಾರತ ತಂಡ ಸೆಮಿಫೈನಲ್ಸ್​ನಲ್ಲಿ 6 ಬಾರಿಯ ಚಾಂಪಿಯನ್​ ಜರ್ಮನಿಯನ್ನು ಎದುರಿಸಲಿದೆ. ಇದಕ್ಕೂ ಮೊದಲ ಕ್ವಾರ್ಟರ್ ಫೈನಲ್​ನಲ್ಲಿ ಜರ್ಮನಿ ಮತ್ತು ಸ್ಪೇನ್​ ನಡುವಿನ ಪಂದ್ಯ 2-2ರಲ್ಲಿ ಡ್ರಾನಲ್ಲಿ ಅಂತ್ಯಗೊಂಡಿತು. ಆದರೆ, ಪೆನಾಲ್ಟಿ ಶೂಟೌಟ್​ನಲ್ಲಿ ಜರ್ಮನಿ 3-1ರಲ್ಲಿ ಜಯ ಸಾಧಿಸಿತು. ಜರ್ಮನಿ 2016ರಲ್ಲಿ ಲಖನೌದಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಕಂಚಿನ ಪದಕ ಪಡೆದಿತ್ತು.

2ನೇ ಕ್ವಾರ್ಟರ್ ಫೈನಲ್​ನಲ್ಲಿ 2005ರ ವಿಶ್ವ ಚಾಂಪಿಯನ್​ ಅರ್ಜೆಂಟೀನಾ ತಂಡ 2-1ರಲ್ಲಿ ನೆದೆರ್ಲೆಂಡ್ಸ್ ವಿರುದ್ಧ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು. 3ನೇ ಕ್ವಾರ್ಟರ್ ಫೈನಲ್​ನಲ್ಲಿ ಫ್ರಾನ್ಸ್​ 4-0 ಅಂತರದಲ್ಲಿ ಮಲೇಷ್ಯಾ ವಿರುದ್ಧ ಗೆದ್ದು 2ನೇ ಬಾರಿ ಸೆಮಿಫೈನಲ್ಸ್ ಪ್ರವೇಶಿಸಿತು.

ಇದನ್ನೂ ಓದಿ:ರಿಟೈನ್​ನಲ್ಲಿ ಕೋಟ್ಯಧಿಪತಿಗಳಾದ ಟಾಪ್ 5 ಕ್ರಿಕೆಟಿಗರು ಇವರೇ ನೋಡಿ

Last Updated : Dec 1, 2021, 10:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.