ಲಂಡನ್ : ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ಬೋರ್ನ್ಮೌತ್ ತಂಡ ಗೆಲುವು ಸಾಧಿಸುವುದು ಕಷ್ಟಸಾಧ್ಯ ಎಂದು ತಂಡದ ಮ್ಯಾನೇಜರ್ ಎಡ್ಡಿ ಹೋವೆ ಭಾನುವಾರ ಹೇಳಿದ್ದಾರೆ.
ಬೋರ್ನ್ಮೌತ್ ತಂಡ ಆಡಿದ ಪಂದ್ಯಗಳಲ್ಲಿ ಹೆಚ್ಚಿನ ಗೋಲು ಗಳಿಸಲು ಸಾಧ್ಯವಾಗದ ಕಾರಣ ಅದು ಅಂಕ ಪಟ್ಟಿಯಲ್ಲಿ ಕೆಳಗಿದೆ ಎಂದರು." ನಾನು ಸುಳ್ಳು ಹೇಳಲು ಹೋಗುವುದಿಲ್ಲ, ತಂಡದ ಈ ಪರಿಸ್ಥಿತಿಯಿಂದ ನಾನು ಬಹಳ ನೋಂದಿದ್ದೇನೆ ಎಂದು ಹೇಳಿದರು.
![ಎಡ್ಡಿ ಹೋವೆ](https://etvbharatimages.akamaized.net/etvbharat/prod-images/eddie-howe-bournemouth-premier-league_0107newsroom_1593567225_501.jpg)
"ನಾವು ತಂಡವನ್ನು ಬಲಿಷ್ಠವಾಗಿ ಕಟ್ಟಿಕೊಂಡು ಹೋಗಬೇಕಾಗಿದೆ. ಆ ರೀತಿ ತಂಡವನ್ನು ನಿರ್ದೇಶಿಸಲು ಎಲ್ಲಾ ತರಹದ ಪ್ರಯತ್ನವನ್ನ ನಾನು ಮಾಡುತ್ತಿದ್ದೇನೆ. ನನ್ನ ಎಲ್ಲಾ ಅನುಭವಗಳನ್ನು ಇಲ್ಲಿ ದಾರಿ ಎರೆಯುತ್ತಿದ್ದೇನೆ. ಉಳಿದ ಎಲ್ಲಾ ಪಂದ್ಯಗಳನ್ನು ತಂಡವು ಗೆಲ್ಲಬಹುದು ಎಂದು ನಂಬಿದ್ದೇನೆ ಎಂದು ಹೋವೆ ಹೇಳಿದರು.