ನವದೆಹಲಿ: ಐಪಿಎಲ್ ಮುಗಿಯುತ್ತಿದ್ದಂತೆ ಇಂಡಿಯನ್ ಸೂಪರ್ ಲೀಗ್ ಆರಂಭವಾಗಲಿದೆ. ಈ ಮಹತ್ವದ ಟೂರ್ನಿಗೆ ಸಜ್ಜಾಗುತ್ತಿರುವುದಾಗಿ ತಿಳಿಸಿರುವ ಭಾರತ ತಂಡದ ನಾಯಕ ಸುನೀಲ್ ಚೆಟ್ರಿ, ಬಯೋಬಬಲ್ನಲ್ಲಿ ಇರುವುದು ಸುಲಭದ ಮಾತಲ್ಲ ಎಂದಿದ್ದಾರೆ.
ಬಯೋಬಬಲ್ನಲ್ಲಿ ತರಬೇತಿ ನಡೆಸುತ್ತಿರುವ 36 ವರ್ಷದ ಆಟಗಾರ ಉಳಿದ ಸಮಯದಲ್ಲಿ ಪುಸ್ತಕವನ್ನು ಓದುತ್ತಾ ಮತ್ತು ಹೆಸರಾಂತ ಬ್ರಾಡ್ಕಾಸ್ಟರ್ ಮತ್ತು ಇತಿಹಾಸಕಾರ ಸರ್ ಡೇವಿಡ್ ಅಟೆನ್ಬರೋ ಅವರ ಎ ಲೈಫ್ ಆನ್ ಅವರ ಪ್ಲಾನೆಟ್ ಕಾರ್ಯಕ್ರಮವನ್ನು ನೋಡುತ್ತಾ ಗೋವಾದಲ್ಲಿ ತಮ್ಮ ಕ್ವಾರಂಟೈನ್ ಅವಧಿಯನ್ನು ಕಳೆದಿರುವುದಾಗಿ ತಿಳಿಸಿದ್ದಾರೆ.
"ಇದು ಬಯೋ ಬಬಲ್ ಒಳಗೆ ನಮ್ಮ ಮೂರನೇ ವಾರವಾಗಿದೆ. ಇಲ್ಲಿನ ಜೀವನ ಸುಲಭವಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಖಂಡಿತವಾಗಿಯೂ ಇದು ನಮಗೆ ಅಗತ್ಯವಾಗಿ ಬೇಕಾಗಿದೆ." ಎಂದು ಚೆಟ್ರಿ ತಮ್ಮ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.
-
A quick catch up and a couple of personal recommendations! pic.twitter.com/Wa9OLTNHqF
— Sunil Chhetri (@chetrisunil11) November 12, 2020 " class="align-text-top noRightClick twitterSection" data="
">A quick catch up and a couple of personal recommendations! pic.twitter.com/Wa9OLTNHqF
— Sunil Chhetri (@chetrisunil11) November 12, 2020A quick catch up and a couple of personal recommendations! pic.twitter.com/Wa9OLTNHqF
— Sunil Chhetri (@chetrisunil11) November 12, 2020
"ಟೂರ್ನಿಗೆ ಇನ್ನು ಕೇವಲ 10 ದಿನಗಳು ಮಾತ್ರ ಉಳಿದಿದೆ ಮತ್ತು ನಾನು ಮತ್ತು ಇಡೀ ತಂಡವು ಐಎಸ್ಎಲ್ಗಾಗಿ ಕಾಯುತ್ತಿರುವ ಹಾಗೆ ನೀವು ಕಾಯುತ್ತಿದ್ದೀರಾ ಎಂದು ನನಗೆ ಖಾತ್ರಿಯಿದೆ" ಎಂದು ಚೆಟ್ರಿ ಹೇಳಿದ್ದಾರೆ.
ನಾವು ಬಯೋಬಬಲ್ನಲ್ಲಿ ಎರಡು ಸೆಷನ್ನಲ್ಲಿ ತರಬೇತಿ ಮಾಡುತ್ತಿದ್ದೇವೆ ಮತ್ತು ಟೂರ್ನಮೆಂಟ್ ಪ್ರಾರಂಭವಾಗುವುದಕ್ಕಿಂತ ಮೊದಲು ನಾವು ಸಾಧ್ಯವಾದಷ್ಟು ಫಿಟ್ ಆಗಿರುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.
ಐಪಿಎಲ್ನಂತೆ ಫ್ರಾಂಚೈಸಿ ಟೂರ್ನಿಯಾಗಿರುವ ಐಎಸ್ಎಲ್ನ 7ನೇ ಆವೃತ್ತಿಯು ನವೆಂಬರ್ 20ರಂದು ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಮತ್ತು ಕೇರಳ ಬ್ಲಾಸ್ಟರ್ ತಂಡಗಳು ಮುಖಾಮುಖಿಯಾಗಲಿವೆ. ಕೋವಿಡ್ 19 ಪರಿಣಾಮ ಈ ವರ್ಷದ ಟೂರ್ನಿ ಗೋವಾದ 3 ಸ್ಥಳಗಳಲ್ಲಿ ನಡೆಯುತ್ತಿದೆ.