ETV Bharat / sports

ಚಾಂಪಿಯನ್ಸ್ ಲೀಗ್​​ನಲ್ಲಿ ರೊನಾಲ್ಡೊ ವಿಶಿಷ್ಟ ದಾಖಲೆ: ಏನಾ ದಾಖಲೆ

ಚಾಂಪಿಯನ್ಸ್ ಲೀಗ್​​ನ ಅತಿ ಹೆಚ್ಚು ಪಂದ್ಯ ಆಡಿದವರ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನಕ್ಕೇರಿದ್ದಾರೆ. ಆದರೆ, ನಿನ್ನೆ ನಡೆದ ಬಿಎಸ್​​ಸಿ ಯಂಗ್ ಬಾಯ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಸೋಲೊಪ್ಪಿಕೊಂಡಿದೆ.

ronaldo
ರೊನಾಲ್ಡೊ
author img

By

Published : Sep 15, 2021, 1:01 PM IST

Updated : Sep 15, 2021, 1:40 PM IST

ಬೆರ್ನ್​ (ಸ್ವಿಟ್ಜರ್​​ಲ್ಯಾಂಡ್​​​): ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್​ ತಂಡ ಸೇರಿಕೊಂಡಿದ್ದಾರೆ. ಈ ನಡುವೆ ಅವರು ಚಾಂಪಿಯನ್ಸ್ ಲೀಗ್​ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ಅತಿ ಹೆಚ್ಚು ಯುಇಎಫ್​​​​ಎ ಚಾಂಪಿಯನ್ಸ್ ಲೀಗ್​ ಪಂದ್ಯವಾಡಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ನಿನ್ನೆ ರೊನಾಲ್ಡೊ ತಮ್ಮ ವೃತ್ತಿ ಜೀವನದ 177ನೇ ಪಂದ್ಯವಾಡಿದ್ದು, ಇದಕ್ಕೂ ಮೊದಲು ಸ್ಪಾನಿಷ್ ನಿವೃತ್ತ ವೃತ್ತಿಪರ ಫುಟ್ಬಾಲ್ ಆಟಗಾರ ಇಕರ್ ಕ್ಯಾಸಿಲ್ಲಾಸ್ ಫೆರ್ನಾಂಡಿಸ್ 177 ಪಂದ್ಯವಾಡಿದ್ದರು. ಇವರ ನಂತರದ ಸ್ಥಾನದಲ್ಲಿ ಕ್ರಮವಾಗಿ ಬಾರ್ಸಿಲೋನಾದ ಕ್ಸಾವಿ ಹಾಗೂ ಲಿಯೋನಲ್ ಮೆಸ್ಸಿ ರೇಸ್​​ನಲ್ಲಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರವಾಗಿ ಹಾಗೂ ಪಂದ್ಯದ ಮೊದಲ ಗೋಲು ದಾಖಲಿಸುವಲ್ಲಿ ರೊನಾಲ್ಡೊ ಯಶಸ್ವಿಯಾದರು. ಆದರೆ, ಬಿಎಸ್​​ಸಿ ಯಂಗ್ ಬಾಯ್ಸ್ ತಂಡ ಮ್ಯಾ.ಯುನೈಟೆಡ್ ತಂಡದ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ತೋರಿದ್ದಲ್ಲದೇ, ಪಂದ್ಯವನ್ನ 2-1 ಗೋಲುಗಳ ಅಂತರದಿಂದ ಗೆದ್ದುಕೊಂಡಿತು.

ಇದನ್ನೂ ಓದಿ: ಫೈನಲ್ ಪಂದ್ಯದಲ್ಲೂ 10 ವಿಕೆಟ್​ಗಳ ಜಯ: ಲಂಕಾ ವಿರುದ್ಧ T20 ಸರಣಿ ಕ್ಲೀನ್​ ಸ್ವೀಪ್ ಮಾಡಿದ ಆಫ್ರಿಕಾ

Last Updated : Sep 15, 2021, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.