ETV Bharat / sports

ಪ್ರೀಮಿಯರ್​ ಲೀಗ್​: ಗೋಲ್​ ಬಾರಿಸಿ ಚೆಲ್ಸಿಯಾ ಗೆಲುವಿಗೆ ಕಾರಣರಾದ ಪುಲಿಸಿಕ್​

ಫುಟ್ಬಾಲ್​​​ ಪ್ರೀಮಿಯರ್​ ಲೀಗ್​ನಲ್ಲಿ ಆಸ್ಟನ್ ವಿಲ್ಲಾ ತಂಡದ ವಿರುದ್ಧ ಚೆಲ್ಸಿಯಾ ತಂಡ ಜಯಭೇರಿ ಬಾರಿಸಿದೆ.

ಚೆಲ್ಸಿಯಾ ಗೆಲುವಿಗೆ ಸಹಾಯಕವಾದ ಫುಸಿಲಿಕ್​ ಬಾರಿಸಿದ ಗೋಲು

author img

By

Published : Jun 22, 2020, 11:15 AM IST

ಬರ್ಮಿಂಗ್​ಹ್ಯಾಮ್​: ನಿನ್ನೆ ನಡೆದ ಫುಟ್ಬಾಲ್​​ ಪ್ರೀಮಿಯರ್​ ಲೀಗ್​ನಲ್ಲಿ ಆಸ್ಟನ್ ವಿಲ್ಲಾ ತಂಡದ ವಿರುದ್ಧ ಚೆಲ್ಸಿಯಾ ತಂಡವೂ ಜಯಭೇರಿ ಬಾರಿಸಿದೆ.

ದ್ವಿತೀಯಾರ್ಧದಲ್ಲಿ ಫೀಲ್ಡ್​ಗೆ ಇಳಿದ ಕ್ರಿಶ್ಚಿಯನ್ ಪುಲಿಸಿಕ್, ಕೊನೆಯ ಐದು ನಿಮಿಷದಲ್ಲಿ 2-1 ಗೋಲುಗಳನ್ನು ಬಾರಿಸಿ ಜಯ ಸಾಧಿಸಿದರು. ಈ ಮೂಲಕ ಪ್ರೀಮಿಯರ್​ ಲೀಗ್​ನಲ್ಲಿ ನಾಲ್ಕನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಕ್ರಿಶ್ಚಿಯನ್ ಪುಲಿಸಿಕ್, "ನನ್ನ ಎಡಕಾಲಿನ ಮೂಲಕ ನಾನು ಉತ್ತಮ ಗೋಲು ಬಾರಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ" ಎಂದಿದ್ದಾರೆ.

ಸದ್ಯ ಪುಲಿಸಿಕ್​ ಸಾಧನೆಯನ್ನು ಅನೇಕರು ಶ್ಲಾಘಿಸಿದ್ದು, ಚೆಲ್ಸಿಯಾ ತಂಡದ ವ್ಯವಸ್ಥಾಪಕ ಫ್ರಾಂಕ್ ಲ್ಯಾಂಪಾರ್ಡ್ ಅವರು ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಇನ್ನು ಈ ಕುರಿತು ಮಾತನಾಡಿದ ಆಟಗಾರ ಫ್ರ್ಯಾಂಕ್​ ಲ್ಯಾಂಫರ್ಡ್​, "ವಿಭಿನ್ನತೆಯನ್ನು ಉಪಯೋಗಿಸುವ ವ್ಯಕ್ತಿಗಳು ಎಂದಿಗೂ ಕ್ರೆಡಿಟ್​ ಪಡೆದುಕೊಳ್ಳುತ್ತಾರೆ. ಅಂತೆಯೇ ಪುಲಿಸಿಕ್​ ಮತ್ತು ರಾಸ್​ ಬಾರ್ಕ್ಲೆ ಅವರು ಉತ್ತಮ ಪ್ರದರ್ಶನ ನೀಡಿದರು. ಆದ್ದರಿಂದ ಗೆಲುವು ಸಾಧ್ಯವಾಯಿತು. ಮುಖ್ಯವಾಗಿ ಹೇಳುವುದಾದರೆ ಫಿಟ್​ನೆಸ್​ ಆಟದ ಪ್ರಮುಖ ಅಂಶ. ಆದ್ದರಿಂದ ಸೆಕೆಂಡ್​ಹಾಫ್​ನಲ್ಲಿ ಫುಲಿಸಿಕ್​ ಮತ್ತು ರಾಸ್​ನನ್ನು ಫೀಲ್ಡ್​ಗೆ ಇಳಿಸುವ ಯೋಚನೆ ಮಾಡಿದ್ದೆ" ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.